ಇಡೀ ರಾಜ್ಯವೇ ಜೇಮ್ಸ್ ಚಿತ್ರ ನೋಡಲಿಕ್ಕೆ ಕಾಯ್ತಾ ಇದ್ರೆ ಅಶ್ವಿನಿ ಮಾತ್ರ ನಾನು ಜೇಮ್ಸ್ ಸಿನೆಮಾ ನೋಡೋದೇ ಇಲ್ಲ ಅಂತ ಹೇಳ್ತಾ ಇದ್ದಾರೆ ಏಕೆ?

ಪುನೀತ್ ರಾಜ್ ಕುಮಾರ್ ಅವರ ಕೊನೆಯ ಚಿತ್ರ ಜೇಮ್ಸ್ ನಿನ್ನೆ ಮಾರ್ಚ್ 17 ರಂದು ವಿಶ್ವದಾದ್ಯಂತ ಬಿಡುಗಡೆ ಆಗಿದೆ ಮತ್ತು ಒಂದೇ ದಿನದಲ್ಲಿ ಭರ್ಜರಿ ಮೊತ್ತದ ಕಲೆಕ್ಷನ್ ಗಳಿಸಿದೆ . ಕೆಜಿಎಫ್ ಸಿನಿಮಾವನ್ನು ಕೂಡ ಜೇಮ್ಸ್ ಇದೀಗ ಹಿಂದಿಕ್ಕಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಒಂದೇ ದಿನದಲ್ಲಿ 34 ಕೋಟಿ ರುಪಾಯಿಗಳನ್ನು ಗಳಿಸಿದೆ. ಮುಂದಿನ ಒಂದು ವಾರಗಳ ಟಿಕೆಟ್ ಗಳು ಈಗಾಗಲೇ ಮಾರಾಟವಾಗಿವೆ. ಅಭಿಮಾನಿಗಳು ಜೇಮ್ಸ್ ಜಾತ್ರೆಯನ್ನು ಭರ್ಜರಿಯಾಗಿ ಆಚರಿಸುತ್ತಿದ್ದಾರೆ.

ಜೇಮ್ಸ್ ಚಿತ್ರವನ್ನು ನೋಡಲು ಇಡೀ ಕರ್ನಾಟಕವೇ ಎದುರುನೋಡುತ್ತಿದೆ ಟಿಕೇಟ್ ಸಿಗದೆ ಅಭಿಮಾನಿಗಳು ಪರದಾಡುತ್ತಿದ್ದಾರೆ. ಜೇಮ್ಸ್ ಚಿತ್ರವನ್ನು ದೊಡ್ಮನೆಯ ಕುಟುಂಬದವರೆಲ್ಲ ಸೇರಿ ಮೊದಲ ದಿನವೇ ವೀಕ್ಷಿಸಿದ್ದಾರೆ. ಶಿವಣ್ಣ, ರಾಘಣ್ಣ ,ರಾಗಣ್ಣ ಪತ್ನಿ, ಯುವರಾಜ್ ಕುಮಾರ್ ಶ್ರೀಮುರಳಿ ವಿನಯ್ ರಾಜ್ ಕುಮಾರ್ ಮತ್ತು ಪುನೀತ್ ಅವರ ಚಿಕ್ಕ ಮಗಳು ಎಲ್ಲರೂ ಒಟ್ಟಿಗೆ ಸಿನಿಮಾ ನೋಡಿದ್ದಾರೆ. ಆದರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಾತ್ರ ಜೇಮ್ಸ್ ಚಿತ್ರವನ್ನು ನೋಡಲಿಕ್ಕೆ ಬಂದಿರಲಿಲ್ಲ .

ಅಶ್ವಿನಿಯವರು ತುಂಬಾ ಬೇಗ ಭಾವುಕರಾಗುತ್ತಾರೆ ಪುನೀತ್ ಅವರನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಶ್ವಿನಿಯವರಿಗೆ ಪುನೀತ್ ಅವರು ಇಲ್ಲ ಎಂಬ ವಿಷಯವನ್ನು ಕರಗಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತಿದೆ ಸಭೆ ಸಮಾರಂಭಗಳಿಗೆ ಹೋದರೂ ಕೂಡ ಪುನೀತ್ ಅವರ ವಿಚಾರ ಬಂದಾಗ ಅಶ್ವಿನಿಯವರು ಭಾವುಕರಾಗುತ್ತಾರೆ ಮತ್ತು ಅರ್ಧಕ್ಕೆ ಸಮಾರಂಭದಿಂದ ಎದ್ದು ಹೊರ ನಡೆಯುತ್ತಾರೆ. ಅಶ್ವಿನಿಯವರಿಗೆ ಇಂದೂ ಕೂಡ ಪುನೀತ್ ತೋರಿಲ್ಲ ಎಂಬ ವಿಷಯವನ್ನು ಜೀರ್ಣಿಸಿಕೊಳ್ಳಲಿದೆ ಆಗ್ತಾ ಇಲ್ಲ.

ಪುನೀತ್ ಅವರ ವಿಡಿಯೋ ಗಳನ್ನಾಗಲಿ ಅವರ ಫೋಟೋ ಆಗಲಿ ನೋಡಿದರೆ ಅಶ್ವಿನಿ ಅವರ ಮನಸ್ಸು ಕರಗಿ ಹೋಗುತ್ತದೆ. ಕಣ್ಣಂಚಲಿ ನೀರು ತುಂಬಿಕೊಳ್ಳುತ್ತೆ. ಹೃದಯ ಚುರ್ ಅನ್ನುತ್ತದೆ. ಇಂತಹ ಒ೦ದು ಪರಿಸ್ಥಿತಿಯಲ್ಲಿ ಅಶ್ವಿನಿಯವರು ಜೇಮ್ಸ್ ಚಿತ್ರವನ್ನು ನೋಡುವುದು ನಿಜಕ್ಕೂ ಅಸಾಧ್ಯದ ಮಾತು. ಅಭಿಮಾನಿಯಾಗಿ ಪುನಿತ್ ಅವರನ್ನು ತೆರೆ ಮೇಲೆ ನೋಡೋದು ಎಷ್ಟು ಕಷ್ಟವೋ ಅದಕ್ಕಿಂತ ಹೆಚ್ಚು ಪತ್ನಿಯಾಗಿ ತನ್ನ ಗಂಡನನ್ನು ಕೊನೆಯ ಬಾರಿ ತೆರೆ ಮೇಲೆ ನೋಡುವುದು ಅಷ್ಟೇ ಕಠಿಣ.

ಸಿನೆಮಾ ಥಿಯೇಟರ್ ನಲ್ಲಿ ಕುಳಿತುಕೊಂಡು ಎರಡೂವರೆ ಗಂಟೆಗಳ ಕಾಲ ಪುನೀತ್ ಅವರನ್ನು ವೀಕ್ಷಿಸುವುದು ನನಗೆ ಅಸಾಧ್ಯ ಇನ್ನೂ ಕೂಡ ಅವರ ನೆನಪಿನಿಂದ ನಾನು ಆಚೆ ಬಂದಿಲ್ಲ. ಪುನೀತ್ ನನ್ನ ಮುಖ ನೋಡಿದ ತಕ್ಷಣ ನನ್ನ ಹೃದಯ ತುಂಬಿ ಬರುತ್ತದೆ. ನಾನು ಅಪ್ಪು ಕನಸನ್ನು ನನಸು ಮಾಡುವ ಗುರಿ ಹೊಂದಿದ್ದೇನೆ. ಪುನೀತ್ ಅವರ ಪಿಆರ್ ಕೆ ಸಂಸ್ಥೆ ಯನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವುದು ನನ್ನ ಮಹದಾಸೆ ಎಂದು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಖಾಸಗಿ ಸಂದರ್ಶನವೊಂದರಲ್ಲಿ ಭಾವುಕರಾಗಿ ತಮ್ಮ ನೋ ವನ್ನು ಹೊರ ಹಾಕಿದ್ದಾರೆ. ಆದರೆ ಅಶ್ವಿನಿಯವರು ದೊಡ್ಡ ಗುಣ ನೋಡಿ ಬಾಡಿಗಾರ್ಡ್ , ಮನೆಯ ಸೆಕ್ಯುರಿಟಿ ಗಾರ್ಡ್ ಗಳಿಗೆಲ್ಲ ರಜೆಕೊಟ್ಟು ಅಪ್ಪು ಸಿನಿಮಾ ನೋಡಲು ಕಳಿಸಿದ್ದಾರೆ.

Leave A Reply

Your email address will not be published.

error: Content is protected !!