ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ 10ನೇ ತರಗತಿಯಲ್ಲಿ ಪಡೆದ ಒಟ್ಟು ಅಂಕವೆಷ್ಟು ಗೊತ್ತಾ? ಅದೊಂದು ವಿಷಯವನ್ನು ಬಿಟ್ಟು ಉಳಿದೆಲ್ಲ ವಿಷಯಗಳಿಗೂ ಒಂದೇ ಮಾರ್ಕ್ಸ್

ತಮ್ಮ ನೆಚ್ಚಿನ ಸ್ಟಾರ್ ನಟರ ವೈಯಕ್ತಿಕ ವಿಚಾರಗಳನ್ನು ತಿಳಿದುಕೊಳ್ಳುವುದರಲ್ಲಿ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಕಲಾವಿದರ ವಿದ್ಯಾಭ್ಯಾಸ, ಮದುವೆ, ಕುಟುಂಬದವರು ಹೀಗೆ ನಾನಾ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಹುಡುಕುತ್ತಲೇ ಇರುತ್ತಾರೆ.

ಡಿ ಬಾಸ್ ದರ್ಶನ್ ಅವರು, ಅವರ ವಿದ್ಯಾಭ್ಯಾಸದ ಕುರಿತಾಗಿ ಆಗಾಗ ಹೇಳುತ್ತಲೇ ಬಂದಿದ್ದಾರೆ. ‘ನಾನು ಓದಿರುವುದೇ 10ನೇ ತರಗತಿ’ ಎನ್ನುತ್ತಾ ತಾವು ವಾರ್ಷಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಕೂಡ ಅಭಿಮಾನಿಗಳ ಎದುರಲ್ಲಿ ತೆರೆದಿಟ್ಟಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ ಚಿತ್ರ ‘ಕ್ರಾಂತಿ’ ಸಿನಿಮಾದ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಸರ್ಕಾರಿ ಶಾಲೆಯನ್ನು ಉಳಿಸುವ ಸಂದೇಶದೊಂದಿಗೆ ಸೆಟ್ಟೇರಲು ಸಿದ್ಧವಾದ ‘ಕ್ರಾಂತಿ’ ಸಿನಿಮಾದ ಕುರಿತಾಗಿ ಅಭಿಮಾನದಿಂದಲೇ ಹೇಳಿಕೊಳ್ಳುತ್ತಿದ್ದಾರೆ. ಕ್ರಾಂತಿ ಸಿನಿಮಾದ ಪ್ರಚಾರದ ವೇಳೆಯಲ್ಲಿ ವೇದಿಕೆ ಒಂದರಲ್ಲಿ ನಟ ದರ್ಶನ್ ಅವರು ತಾವು ಓದಿರುವ ಸರಕಾರಿ ಶಾಲೆಯ ಬಗ್ಗೆ, ತಾನು ಇಷ್ಟಪಟ್ಟು ಓದಿರುವ ಪಠ್ಯದ ಕಥೆಯ ಬಗ್ಗೆ, 10ನೇ ತರಗತಿಯಲ್ಲಿ ಪಡೆದ ಒಟ್ಟಾರೆ ಅಂಕದ ಬಗ್ಗೆ ಗೌರೀಶ್ ಅಕ್ಕಿ ಸ್ಟುಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ದರ್ಶನ್ ಅವರು ಓದಿರುವುದು 10ನೆಯ ತರಗತಿಯವರೆಗೆ ಎಂಬುದು ಅಭಿಮಾನಿಗಳಿಗೆ ತಿಳಿದಿರುವ ವಿಚಾರ. ಈ ವಿಚಾರವಾಗಿ ದರ್ಶನವರು ಯಾವುದೇ ಗುಟ್ಟು ಮಾಡಿಲ್ಲ. ಸರಕಾರಿ ಶಾಲೆಯ ಬಗೆಗೆ ಆಕರ್ಷಣೆ,ಗೌರವ ಕಡಿಮೆಯಾಗುತ್ತಿರುವ ಈ ಯುಗದಲ್ಲಿ ಸರಕಾರಿ ಶಾಲೆಗಳ ಉಳಿವಿಗಾಗಿ ಅದರ ಹಿರಿಮೆಯನ್ನು ಸಾರಲು ಹೊತ್ತು ತಂದ ಕ್ರಾಂತಿ ಸಿನಿಮಾವನ್ನು ಆಧಾರವಾಗಿಟ್ಟುಕೊಂಡು ತಾನು ವಿದ್ಯಾಭ್ಯಾಸ ಮಾಡಿದ ಶಾಲೆಯ ಬಗೆಗೆ ದರ್ಶನವರು ಮಾತನಾಡಿದ್ದಾರೆ.

‘ನಾನು ಸರ್ಕಾರಿ ಶಾಲೆ ಹುಡುಗನೇ. ಮೈಸೂರಿನಲ್ಲಿ ಓದಿರುವೆ. ಮೊದಲು ಟೆರೇಸಿಯನ್ ಸ್ಕೂಲ್‌ನಲ್ಲಿ ಓದಿದ್ದೆ. ಜೆಎಸ್‌ಎಸ್‌ ಒಂದು ವರ್ಷ ಓದಿದೆ. ಆ ಮೇಲೆ ವೈಶಾಲಿಯಲ್ಲಿ ಓದಿದೆ. 10ನೇ ತರಗತಿವರೆಗೂ ಮೈಸೂರಿನಲ್ಲೇ ಓದಿದ್ದು, 10ನೇ ತರಗತಿನೇ ಕೊನೆ.’ ಎಂದು ದರ್ಶನ್ ಹೇಳಿದ್ದಾರೆ. ‘ನಾನು ಕೂಡ ಎವರೆಜ್ ಸ್ಟೂಡೆಂಟ್ ಆಗಿದ್ದೆ. ಯಾವ ವಿಷಯಗಳನ್ನು ನೋಡಿದರೂ, ಎಲ್ಲವನ್ನು ಬಿಟ್ಟು ಓಡಿ ಹೋಗೋಣ ಎಂದೆನಿಸುತ್ತಿತ್ತು. ಯಾವುದಾದರೂ ಒಂದು ಕಾರಣಕ್ಕೆ ಹೆಚ್ಚಿನದಾಗಿ ತರಗತಿಯ ಹೊರಗಡೆನೇ ನಿಲ್ಲುತ್ತಿದ್ದ ಹುಡುಗ ನಾನು’ ಎಂದಿದ್ದಾರೆ.

Challenging star darshan sslc marks
Challenging star darshan sslc marks

ಆದರೆ ದರ್ಶನ್ ಅವರಿಗೆ ಕನ್ನಡದ ಅದೊಂದು ಪಾಠವೆಂದರೆ ತುಂಬಾನೇ ಇಷ್ಟವಾಗಿತ್ತಂತೆ. ಅದು ಯಾವುದೆಂದರೆ ಗೋಪಾಲಕೃಷ್ಣರ ಕಥೆ. ಯಾವಾಗಲೂ ಅದನ್ನೇ ಓದುತ್ತಿರುವ ಮಗನನ್ನು ಕಂಡ ದರ್ಶನವರ ತಂದೆ ‘ಯಾವಾಗಲೂ ಇದನ್ನೇ ಓದುತ್ತಿಯಲ್ಲೋ?’ ಎಂದು ಪ್ರಶ್ನಿಸಿದ್ದರಂತೆ. ಅದಕ್ಕೆ ಪ್ರತಿಯಾಗಿ ದರ್ಶನವರು ‘ಹುಲಿ ಬರುತ್ತದಲ್ಲಪ್ಪ’ ಎಂದಿದ್ದರಂತೆ. ಇದನ್ನು ಹೇಳಿಕೊಂಡ ಬಳಿಕ ದರ್ಶನವರು ತಮ್ಮ 10ನೇ ತರಗತಿಯ ಅಂಕಗಳ ಬಗ್ಗೆ ಮಾತನಾಡಿದ್ದಾರೆ.


’10ನೇ ತರಗತಿಯಲ್ಲಿ ನನಗೆ ದೊರೆತ ಒಟ್ಟಾರೆ ಅಂಕಗಳು 210. ಅವಾಗೆಲ್ಲಾ 35, 35.. ಹಿಂದಿಗೆ ಮಾತ್ರ 80 ಮಾರ್ಕ್ಸ್ ಇತ್ತು. ಎಲ್ಲಾ ಒಟ್ಟು ಸೇರಿಸಿದರೆ, 210 ಅಂಕ. ನಮ್ಮ ಮನೆಯವರು ನನ್ನನ್ನು ಕರೆದುಕೊಂಡು ಹೋಗಿ ಮೆಕಾನಿಕಲ್ ಡಿಪ್ಲೊಮಾಗೆ ಹಾಕಿದ್ರು. ಜೆಎಸ್‌ಎಸ್‌ ಪಾಲಿಟಿಕ್ಸ್‌ನಲ್ಲಿ ಸೇರಿಸಿದ್ರು. 6 ತಿಂಗಳು ಹೆಂಗೋ ಕಷ್ಟ ಪಟ್ಟು ಓದಿ ನಂತರ ಇವೆಲ್ಲ ಸಾಧ್ಯವಿಲ್ಲ ಎಂದು ಬಿಟ್ಟು ಬಂದೆ’ ಎಂದಿದ್ದಾರೆ. ಅಲ್ಲದೆ ಅವರ ಫೇವರೆಟ್ ಶಿಕ್ಷಕಿಯಾದ ಚಂಪಕ ಮಿಸ್ ಬಗ್ಗೆಯೂ ಹೆಮ್ಮೆಯಿಂದ ಹೇಳಿದ್ದಾರೆ.

Leave a Comment

error: Content is protected !!