D56: ಅನೌನ್ಸ್ಮೆಂಟ್ಗೂ ಮೊದಲೇ ಲೀಕ್ ಆಗೋಯ್ತು ದರ್ಶನ್ ಅವರ 56ನೇ ಸಿನಿಮಾದ ಟೈಟಲ್!

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಕ್ರಾಂತಿ(Kranti) ಸಿನಿಮಾವನ್ನು ಮುಗಿಸಿದ್ದು ಸಿನಿಮಾ ಈಗಾಗಲೇ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದ ಎಂಬುದಾಗಿ ಕೆಲವು ಮೂಲಗಳಿಂದ ತಿಳಿದು ಬಂದಿದೆ. ಇನ್ನು ದರ್ಶನ್(Darshan) ಅವರ ಮುಂದಿನ ಸಿನಿಮಾಗಳು ಯಾವು ಎನ್ನುವುದರ ಕುರಿತಂತೆ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಾಗಿದ್ದು ಇದರ ಕುರಿತಂತೆ ಒಂದು ಲೀಕ್ ಈಗ ಹೊರಬಂದಿದೆ.

ಹೌದು ಗೆಳೆಯರೇ ದರ್ಶನ್ ಅವರ 56ನೇ ಸಿನಿಮಾ ಅಂದರೆ D56 ಸಿನಿಮಾದ ನಿಜವಾದ ಟೈಟಲ್ ಬಗ್ಗೆ ಹಲವಾರು ಜನರಿಗೆ ಕುತೂಹಲ ಹಾಗೂ ಗೊಂದಲಗಳು ಇದ್ದವು. ಈ ಸಿನಿಮಾ ತರುಣ್ ಸುಧೀರ್(Tharun Sudhir) ನಿರ್ದೇಶನ ಹಾಗೂ ರಾಕ್ ಲೈನ್ ವೆಂಕಟೇಶ್(Rockline Venkatesh) ಅವರ ನಿರ್ಮಾಣವನ್ನು ಹೊಂದಿದೆ. ಈಗಾಗಲೇ ಸಿನಿಮಾದ ಮುಹೂರ್ತ ಕೂಡ ನಡೆದಿದ್ದು ಮಾಲಾಶ್ರೀ(Malashree) ಅವರ ಮಗಳು ರಾಧನಾ ರಾಮ್(Radhana Ram) ನಾಯಕಿಯಾಗಿ ಕೂಡ ಈಗಾಗಲೇ ಆಯ್ಕೆ ಆಗಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ.

D56

ಈಗಾಗಲೇ ಸಿನಿಮಾದ ಕೆಲವು ಹಂತದ ಚಿತ್ರೀಕರಣಗಳು ಪೂರ್ಣಗೊಂಡಿದ್ದು ಸಿನಿಮಾದ ಟೈಟಲ್ ಇನ್ನೂ ಅನೌನ್ಸ್ ಆಗೋದು ಬಾಕಿ ಇತ್ತು. ಆದರೆ ಅದಕ್ಕೂ ಮೊದಲೇ ಈ ಸಿನಿಮಾದ ಟೈಟಲ್ ಏನಿರಬಹುದು ಎನ್ನುವುದರ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಗುಸು-ಗುಸು ಮಾತುಗಳು ಆರಂಭವಾಗಿವೆ. ಅದರಲ್ಲೂ ಒಂದು ಗುಂಪತೂ ಖಂಡಿತವಾಗಿ ಸಿನಿಮಾದ ಹೆಸರು ಇದೇ ಎಂಬುದಾಗಿ ಕಾನ್ಫಿಡೆಂಟ್ ಆಗಿದೆ. ಹಾಗಿದ್ದರೆ ದರ್ಶನ್(Darshan) ಅವರ 56ನೇ ಸಿನಿಮಾದ ಟೈಟಲ್ ಲೀಕ್ ಆಗಿರುವುದು ಏನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಿತ್ರರೇ ತಿಳಿದು ಬಂದಿರುವ ಸುದ್ದಿಯ ಪ್ರಕಾರ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಹಾಗೂ ತರುಣ್ ಸುಧೀರ್ ಕಾಂಬಿನೇಷನ್ ನಲ್ಲಿ ಮೂಡಿ ಬರಲಿರುವ ದರ್ಶನ್ ಅವರ 56ನೇ ಸಿನಿಮಾದ ಟೈಟಲ್ ಕಾಟೇರ(Katera) ಎಂಬುದಾಗಿ ಫೈನಲ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ಇದರ ಅನೌನ್ಸ್ಮೆಂಟ್ಗೆ ಹೆಚ್ಚಿನ ದಿನಗಳು ಬೇಕಾಗಿಲ್ಲ ಯಾಕೆಂದರೆ ಫೆಬ್ರವರಿ 16ರಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮದಿನಾಚರಣೆ ಇರುವ ಕಾರಣ ಇದು ಅತಿ ಶೀಘ್ರದಲ್ಲೇ ಹೊರಬರುವುದಂತೂ ಖಚಿತ.

Leave a Comment

error: Content is protected !!