Darshan Thoogudeepa: ದರ್ಶನ್ ರವರ 56ನೇ ಸಿನಿಮಾದ ವಿಲನ್ ರಿವೀಲ್. ಖಡಕ್ ವಿಲನ್ ಗುರು.

D56 ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸಿರುವ ಕ್ರಾಂತಿ ಸಿನಿಮಾದ ನಂತರ ಡಿ ಬಾಸ್ ಅಭಿಮಾನಿಗಳಿಗೆ ನಿರೀಕ್ಷೆಯನ್ನು ಹುಟ್ಟು ಹಾಕಿರುವ ಸಿನಿಮಾ ಎಂದರೆ ಅದು ಡಿ56 ಸಿನಿಮಾ. ಈ ಸಿನಿಮಾದ ಟೈಟಲ್ ಹಾಗೂ ಪ್ರಮುಖ ವಿಚಾರಗಳು ಇದೇ ಫೆಬ್ರವರಿ 16ರಂದು ದರ್ಶನ್(Darshan) ಅವರ ಜನ್ಮದಿನದ ವಿಶೇಷವಾಗಿ ಹೊರಬರಲಿದ್ದು ಅಭಿಮಾನಿಗಳಲ್ಲಿ ಕುತೂಹಲ ಎನ್ನುವುದು ಗರಿಗೆದರಿದೆ.

ಈ ಸಿನಿಮಾದಲ್ಲಿ ನಾಯಕ ನಟಿಯಾಗಿ ರಾಧನಾ ರಾಮ್(Radhana Ram) ಪಾದರ್ಪಣೆ ಮಾಡುತ್ತಿದ್ದು ಸಿನಿಮಾವನ್ನು ರಾಬರ್ಟ್ ನಿರ್ದೇಶಕ ತರುಣ್ ಸುಧೀರ್(Tharun Sudhir) ಅವರು ನಿರ್ದೇಶಸುತ್ತಿದ್ದಾರೆ. ನಿರ್ಮಾಪಕನಾಗಿ ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕರಲ್ಲಿ ಒಬ್ಬರಾಗಿರುವ ರಾಕ್ ಲೈನ್ ವೆಂಕಟೇಶ್(Rockline Venkatesh) ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ ಸಿನಿಮಾ ಹಲವಾರು ವಿಚಾರಗಳಿಂದ ವಿಶೇಷತೆಯನ್ನು ಹೊಂದಿದೆ ಅದರಲ್ಲಿ ಪ್ರಮುಖವಾಗಿ ಸಿನಿಮಾ ನಿಜವಾದ ಘಟನೆಗಳಿಂದ ಪ್ರೇರಿತವಾಗಿದೆ ಎಂಬುದು ಕೂಡ ಒಂದಾಗಿದೆ.

ಇನ್ನು ಸಿನಿಮಾದಲ್ಲಿ ಖಳನಾಯಕನಾಗಿ ಕೂಡ ಪರಭಾಷೆ ಚಿತ್ರರಂಗದ ಖ್ಯಾತ ಖಳನಾಯಕ ಒಬ್ಬರು ನಟಿಸಲಿದ್ದಾರೆ ಎಂಬುದು ಈಗ ಅಧಿಕೃತವಾಗಿ ಕೇಳಿ ಬಂದಿದೆ. ಈ ಖಳನಾಯಕ ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಾಯಕ ನಟನಾಗಿ ನಟಿಸಿರುವ ರಾಬರ್ಟ್(Roberrt) ಸಿನಿಮಾದಲ್ಲಿ ಕೂಡ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ.

ಹೌದು ತೆಲುಗು ಚಿತ್ರರಂಗದ ಖ್ಯಾತ ಖಳನಾಯಕ ಜಗಪತಿ ಬಾಬು(Jagapathi Babu) ರವರು ಈ ಸಿನಿಮಾದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುವುದು ಅಧಿಕೃತವಾಗಿದೆ. ಇಂದು ಅವರ ಜನ್ಮ ದಿನಾಚರಣೆಯ ಅಂಗವಾಗಿ ಚಿತ್ರತಂಡ ಈ ವಿಚಾರವನ್ನು ಹೊರಹಾಕಿದೆ. ಮತ್ತೊಮ್ಮೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಜಗಪತಿ ಬಾಬು ಕಾಂಬಿನೇಷನ್ ಈ ಸಿನಿಮಾದ ಮೂಲಕ ಪ್ರೇಕ್ಷಕರ ಮನ ಗೆಲ್ಲುವುದು ನಿಶ್ಚಿತವಾಗಿದೆ.

Leave a Comment

error: Content is protected !!