Darshan Thoogudeepa: ಈ ಬಾರಿ ದರ್ಶನ್ ಅವರ ಬರ್ತಡೆಗೆ ನಡೆಯಲಿದೆ ಒಂದು ಸ್ಪೆಷಲ್ ಕೆಲಸ. ಏನದು?

Dboss Birthday ಕರ್ನಾಟಕದಲ್ಲಿ ಎಲ್ಲೇ ಕೇಳಲಿ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಯಾರು ಎಂದು ಕೇಳಿದಾಗ ಕೇಳಿ ಬರುವಂತಹ ಒಂದೇ ಒಂದು ಉತ್ತರ ಅದು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಡಿ ಬಾಸ್ ಎನ್ನುವುದಾಗಿ. ಅದರಲ್ಲೂ ವಿಶೇಷವಾಗಿ ಮಾಸ್ ಅಭಿಮಾನಿಗಳ ವಿಚಾರಕ್ಕೆ ಬಂದರೆ ದರ್ಶನ್(Darshan) ಅವರನ್ನು ಮೀರಿಸುವಂತಹ ಮತ್ತೊಬ್ಬ ನಟ ಕನ್ನಡ ಚಿತ್ರರಂಗದಲ್ಲಿ ಇಲ್ಲ. ಹೌದು ಮಿತ್ರರೇ, ಇದರಲ್ಲಿ ಯಾವ ಅನುಮಾನವೂ ಬೇಡ.

ಇನ್ನು ಫೆಬ್ರವರಿ 16ರಂದು ಪ್ರತಿ ವರ್ಷ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬೆಳಗ್ಗೆಯಿಂದ ಪ್ರಾರಂಭವಾಗಿ ರಾತ್ರಿಯ ತನಕವೂ ಕೂಡ ಸಾವಿರಾರು ಲಕ್ಷಾಂತರ ಅಭಿಮಾನಿಗಳ ಜೊತೆಗೆ ತಮ್ಮ ನಿವಾಸದ ಎದುರುಗಡೆ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಾರೆ. ಡಿ ಬಾಸ್ ಅವರನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದಲೂ ಕೂಡ ಫೆಬ್ರವರಿ 16ರಂದು ಅವರ ರಾಜರಾಜೇಶ್ವರಿ ನಗರದ( Rajarajeshwari) ನಿವಾಸದ ಎದುರುಗಡೆ ಮುಂಚಿನ ದಿನ ರಾತ್ರಿಯೆ ಕೂಡಿರುತ್ತಾರೆ.

dboss Birthday

ಇನ್ನು ಪ್ರತಿಬಾರಿಯಂತೆ ಈ ಬಾರಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜನ್ಮದಿನಾಚರಣೆಯನ್ನು ಅವರ ಅಭಿಮಾನಿ ಸೆಲಬ್ರೆಟಿಗಳು ಅರ್ಥಪೂರ್ಣವಾಗಿ ಆಚರಿಸಲು ಸಿದ್ದರಾಗಿ ನಿಂತಿದ್ದಾರೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಈ ಬಾರಿಯ ಬರ್ತಡೇಗೆ ಏನು ಮಾಡಬೇಕು ಎನ್ನುವುದನ್ನು ಮೊದಲೇ ನಿಶ್ಚಯಿಸಿಕೊಂಡಿದ್ದಾರೆ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅವರಿಂದಲೂ ಕೂಡ ಈ ಕುರಿತಂತೆ ಒಂದು ಸಂದೇಶ ಹೊರ ಬಂದಿದೆ ಎಂದು ಹೇಳಬಹುದಾಗಿದೆ.

ಅಭಿಮಾನಿಗಳು ಬರ್ತಡೆಗೆ ಬರುವ ಸಂದರ್ಭದಲ್ಲಿ ಯಾವುದೇ ಹೋಗುಚ್ಚ ಹಾರ ಅಥವಾ ಕೇಕ್ ಗಳನ್ನು ತರುವ ಅಗತ್ಯವಿಲ್ಲ. ಬದಲಾಗಿ ಅಕ್ಕಿ ದವಸ ಧಾನ್ಯಗಳನ್ನು ಹಾಗೂ ಬಡವರಿಗೆ ಉಪಯುಕ್ತವಾಗುವಂತಹ ವಸ್ತುಗಳನ್ನು ತೊಂದರೆ ಅದನ್ನು ಸರ್ಕಾರಿ ಶಾಲೆಗಳು ಅನಾಥಾಶ್ರಮ ಹಾಗೂ ವೃದ್ಧಾಶ್ರಮಕ್ಕೆ ತಲುಪಿಸುವಂತಹ ಕಾರ್ಯವನ್ನು ಮಾಡೋಣ ಎಂಬುದಾಗಿ ಪರೋಕ್ಷವಾಗಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹೇಳಿದ್ದಾರೆ. ಹೀಗಾಗಿ ಈ ಬಾರಿಯ ಬರ್ತಡೇ ಸೆಲೆಬ್ರೇಶನ್ ನಲ್ಲಿ ಕೂಡ ಟನ್ಗಟ್ಟಲೆ ಅಕ್ಕಿ ಮೂಟೆಗಳು ಬರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಈ ರೀತಿ ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ಡಿ ಬಾಸ್(Dboss) ಗೆ ಹೃದಯಪೂರ್ವಕ ಧನ್ಯವಾದಗಳನ್ನು ಕೋರೋಣ.

Leave a Comment

error: Content is protected !!