Darshan Thoogudeepa: ದರ್ಶನ್ ಅವರ 56ನೇ ಸಿನಿಮಾದ ಲಾಂಚ್ ನಲ್ಲಿ ಇದ್ದಕಿದ್ದಂತೆ ಪ್ರತ್ಯಕ್ಷವಾದ ಕಿಚ್ಚ ಹಾಗೂ ವಿಷ್ಣುದಾದಾ! ಪೋಟೊ ಹಿಂದಿನ ಅಸಲಿಯತ್ತೇನು ಗೊತ್ತಾ.

Darshan Thoogudeepa ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ನಟನೆಯ 56ನೇ ಸಿನಿಮಾದ ಕುರಿತಂತೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳು ಹೆಚ್ಚಾಗಿವೆ. ಯಾಕೆಂದರೆ ಸಿನಿಮಾದ ಟೈಟಲ್ ಅನ್ನು ಇನ್ನು ಕೂಡ ಚಿತ್ರತಂಡ ಬಿಡುಗಡೆ ಮಾಡಿಲ್ಲ. ಹೀಗಾಗಿ ಸಿನಿಮಾದ ಟೈಟಲ್ ಏನಿರಬಹುದು ಎನ್ನುವ ಕುತೂಹಲ ಎಲ್ಲರಲ್ಲಿಯೂ ಕೂಡ ನಿರೀಕ್ಷೆಗಿಂತ ಹೆಚ್ಚಿದೆ.

ಇನ್ನು ಈ ಸಿನಿಮಾವನ್ನು ರಾಬರ್ಟ್ ಖ್ಯಾತಿಯ ತರುಣ್ ಸುಧೀರ್ ಅವರು ನಿರ್ದೇಶಸುತ್ತಿದ್ದು ರಾಕ್ ಲೈನ್ ವೆಂಕಟೇಶ್ ಅವರು ನಿರ್ಮಾಪಕರಾಗಿ ಕಾಣಿಸಿಕೊಳ್ಳಲಿದ್ದಾರೆ. ಮಾಲಾಶ್ರೀ ಅವರ ಮಗಳಾಗಿರುವ ರಾಧನ ರಾಮ್ ನಾಯಕಿಯಾಗಿ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಒಟ್ಟಾರೆಯಾಗಿ ಹತ್ತು ಹಲವರು ವಿಚಾರಗಳಿಗಾಗಿ ದರ್ಶನ್ ಅವರ 56ನೇ ಸಿನಿಮಾ ಸಖತ್ ಸುದ್ದಿಯಲ್ಲಿದೆ.

ಇದಕ್ಕೂ ಮುನ್ನವೇ ಸೋಶಿಯಲ್ ಮೀಡಿಯಾದಲ್ಲಿ ಒಂದು ಫೋಟೋ ಓಡಾಡುತ್ತಿದ್ದು ಎಲ್ಲರೂ ಕೂಡ ಈ ಫೋಟೋವನ್ನು ನೋಡಿ ಆಶ್ಚರ್ಯ ಚಕಿತರಾಗಿದ್ದಾರೆ. ಈ ಫೋಟೋದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಜೊತೆಗೆ ಡಿಸಿ ಪಾಟೀಲ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಜೊತೆಗೆ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್ ಅವರು ಕೂಡ ಇದ್ದಾರೆ. ಫೋಟೋ ನೋಡೋದಕ್ಕೆ ನಿಜವಾಗಿಯೂ ತೆಗೆದಿರುವಂತಹ ಫೋಟೋ ಎಂಬುದಾಗಿ ಭಾವಿಸಲಾಗುತ್ತದೆ ಆದರೆ ಅದರ ನಿಜವಾದ ರಹಸ್ಯ ಬೇರೇನೇ ಇದೆ.

ಹೌದು ಮಿತ್ರರೇ, ದರ್ಶನ್(Darshan) ಅವರ 56ನೇ ಶನಿವಾದ ಲಾಂಚ್ ನಲ್ಲಿ ತೆಗೆದಿರುವ ಫೋಟೋದ ರೀತಿಯಲ್ಲಿ ಕಲ್ಪನೆಯಲ್ಲಿ ಈ ಫೋಟೋವನ್ನು ಎಡಿಟ್ ಮಾಡಲಾಗಿದೆ. ಆದರೆ ಕಲಾವಿದನ ಕಲ್ಪನೆಯಲ್ಲಿ ಕಿಚ್ಚ ದಚ್ಚು(Kiccha Dacchu) ಹಾಗೂ ದಾದಾ(Dada) ಜೊತೆಯಾಗಿ ಕಾಣಿಸಿಕೊಂಡಿರುವುದು ನಿಜಕ್ಕೂ ಕೂಡ ತೃಪ್ತಿ ಸಮಾಧಾನವನ್ನು ನೀಡುತ್ತಿದೆ. ಈ ಕಾಲ್ಪನಿಕ ಎಡಿಟ್ ಮಾಡಲಾಗಿರುವ ಫೋಟೋ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ಈ ಫೋಟೋ ನಿಮಗೆ ಇಷ್ಟವಾಗಿದ್ದರೆ ತಪ್ಪದೆ ಎಲ್ಲರೊಂದಿಗೆ ಶೇರ್ ಮಾಡಿಕೊಳ್ಳಿ.

Leave a Comment

error: Content is protected !!