Darshan Thoogudeepa ಡಿಬಾಸ್ ಹಾಗೂ ವಿಜಯಲಕ್ಷ್ಮಿ ರವರ ಮದುವೆ ಕಾರ್ಡ್ ವೈರಲ್. 23 ವರ್ಷ ಹಳೇ ಮದುವೆ ಕಾರ್ಡ್ ಹೀಗಿತ್ತು ನೋಡಿ.

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ಆಗಿದ್ದ ತೂಗುದೀಪ್ ಶ್ರೀನಿವಾಸ್ ಅವರ ಮಗ. ಚಿತ್ರರಂಗದ ಸಂಬಂಧ ಇದ್ದರೂ ಕೂಡ ಅವರಿಗೆ ಚಿತ್ರರಂಗ ಚಿನ್ನದ ಹಾಸಿಗೆ ಹಾಕಿ ಕೈ ತುಂಬಾ ಅವಕಾಶ ನೀಡಲಿಲ್ಲ. ತುಂಬಾನೇ ಕಷ್ಟಪಟ್ಟು ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ಇಲ್ಲಿಯ ತನಕ ಬೆಳೆದು ಬಂದಿದ್ದು. ಇಂದು ಜನರು ಅವರನ್ನು ರಾಜನಂತೆ ತಮ್ಮ ಹೆಗಲ ಮೇಲೆ ಇಟ್ಟು ಮೆರೆಸುತ್ತಿದ್ದಾರೆ.

ಇನ್ನು ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಮಾಧ್ಯಮಗಳ ವಿರೋಧದ ನಡುವೆಯೂ ಕೂಡ ಕ್ರಾಂತಿ(Kranti) ಸಿನಿಮಾ ಅಭಿಮಾನಿಗಳ ಪ್ರಚಾರದಿಂದಲೇ ಬಾಕ್ಸ್ ಆಫೀಸ್ ನಲ್ಲಿ ದೊಡ್ಡಮಟ್ಟಿಗೆ ಕಲೆಕ್ಷನ್ ಮಾಡಿತ್ತು. ಇನ್ನು ದರ್ಶನ್ ಅವರ ವೈಯಕ್ತಿಕ ಜೀವನದ ಕುರಿತಂತೆ ಒಂದು ಸಂತೋಷದ ಸುದ್ದಿಯನ್ನು ನಾವು ಈ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ. ಹೌದು ದರ್ಶನ್ ತೂಗುದೀಪ್ ಶ್ರೀನಿವಾಸ್ ಹಾಗೂ ವಿಜಯಲಕ್ಷ್ಮಿ(Vijayalakshmi Darshan) ಅವರ ಮದುವೆ ಕಾರ್ಡಿನ ಬಗ್ಗೆ ನಾವು ಮಾತನಾಡಲು ಹೊರಟಿದ್ದೇವೆ.

ಹೌದು ಮಿತ್ರರೇ ಡಿ ಬಾಸ್(Dboss) ಅವರು ನಿಮಗೆಲ್ಲರಿಗೂ ಗೊತ್ತಿರಬಹುದು ಅಥವಾ ಇನ್ನು ಕೆಲವರಿಗೆ ಗೊತ್ತಿರದೆ ಇರಬಹುದು, 2000ನೇ ಇಸವಿಯಲ್ಲಿ ವಿಜಯಲಕ್ಷ್ಮಿ ಅವರನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮನೆಯವರ ಸಮ್ಮುಖದಲ್ಲಿ ವಿವಾಹ ಆಗಿದ್ದರು. 2000ನೇ ಇಸವಿಯಲ್ಲಿ ಮೇ 14ರಂದು ಧರ್ಮಸ್ಥಳದಲ್ಲಿ ಇಬ್ಬರೂ ವಿವಾಹ ಆಗಿದ್ದರು. ಈಗ ಈ ಮದುವೆಯ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.

ಈ ವರ್ಷದ ಮೇ ತಿಂಗಳು ಬಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ವಿಜಯಲಕ್ಷ್ಮಿ ದರ್ಶನ್(Vijayalakshmi Darshan) ರವರ ಮದುವೆಯಾಗಿ ಭರ್ಜರಿ 23 ವರ್ಷಗಳು ಕಳೆದಂತಾಗುತ್ತದೆ. ಇವರಿಬ್ಬರ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳು ಕಂಡುಬಂದರೂ ಕೂಡ ಇಂದಿಗೂ ಅವರ ಜೊತೆಯಾಗಿರುವುದು ಹಲವಾರು ಜನರಿಗೆ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು. ಈ ದಂಪತಿಗಳ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಒಂದೆರಡು ವಾಕ್ಯಗಳಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!