ಧ್ರುವ ಸರ್ಜಾ ಅವರ ಮಗಳನ್ನು ನೋಡಲು ಬಂದ ಡಿ ಬಾಸ್. ನೀಡಿದ ದುಬಾರಿ ಉಡುಗೊರೆ ಏನು ಗೊತ್ತಾ?

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪ್ರೇರಣಶಂಕರ್ ದಂಪತಿಗಳು ಇತ್ತೀಚಿಗಷ್ಟೇ ಹೆಣ್ಣು ಮಗುವೊಂದನ್ನು ಪಡೆದಿದ್ದು ಅವರ ಜೀವನದಲ್ಲಿ ಹೆಣ್ಣು ಮಗುವಿನ ಆಗಮನದಿಂದಾಗಿ ಖುಷಿ ಹೆಚ್ಚಾಗಿದೆ ಎಂದರು ತಪ್ಪಾಗಲಾರದು. ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ಗೊತ್ತಿರಬಹುದು ಧ್ರುವ ಸರ್ಜಾ ತಮ್ಮ ಅಜ್ಜಿ ಅಂದರೆ ಶಕ್ತಿಪ್ರಸಾದ್ ಅವರ ಪತ್ನಿ ಹಾಗೂ ಅರ್ಜುನ್ ಸರ್ಜಾ ಅವರ ಅಮ್ಮ ಅವರನ್ನು ಕಳೆದುಕೊಂಡಿದ್ದರು.

ಅವರನ್ನು ಕಳೆದುಕೊಂಡ ಕೆಲವೇ ದಿನಗಳಲ್ಲಿ ಪ್ರೇರಣಶಂಕರ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿರುವುದು ಅವರ ಅಜ್ಜಿಯ ಪುನರ್ಜನ್ಮವೆ ಅವರ ಮಗಳಾಗಿ ಬಂದಿರಬಹುದು ಎಂಬಷ್ಟರ ಮಟ್ಟಿಗೆ ಸಂತೋಷವನ್ನು ಪಟ್ಟಿದ್ದರು. ಇನ್ನು ಧ್ರುವ ಸರ್ಜಾ ಅವರ ಹೆಣ್ಣುಮಗಳ ಜನನ ಅಂತ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ಹಾಗು ಕಿರುತೆರೆ ಕ್ಷೇತ್ರದ ಹಲವಾರು ಸೆಲೆಬ್ರಿಟಿಗಳು ಧ್ರುವ ಸರ್ಜಾ ಅವರನ್ನು ಭೇಟಿಯಾಗಿ ಹಾಗೂ ಇನ್ನು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಶುಭ ಹಾರೈಕೆಯನ್ನು ತಿಳಿಸಿದರು.

ನಿಮಗೆಲ್ಲ ತಿಳಿದೇ ಇರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಧ್ರುವ ಸರ್ಜಾ ಹಾಗೂ ಅವರ ಮನೆಯವರಿಗೆ ಸಾಕಷ್ಟು ಆಪ್ತ ಬಳಗದಲ್ಲಿ ಇರುವಂತವರು. ಧ್ರುವ ಸರ್ಜಾ ಹೆಣ್ಣು ಮಗುವಿನ ತಂದೆಯಾಗಿರುವ ಹಿನ್ನೆಲೆಯಲ್ಲಿ ಮೊದಲಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕರೆ ಮಾಡಿ ಶುಭಾಶಯಗಳನ್ನು ತಿಳಿಸುತ್ತಾರೆ. ನಂತರ ಇರುವಂತಹ ಚಿತ್ರೀಕರಣವನ್ನು ಪೂರೈಸಿಕೊಂಡ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಿಡುವು ಮಾಡಿಕೊಂಡು ಧ್ರುವ ಸರ್ಜಾ ಅವರ ಮನೆಗೆ ಕೂಡ ಹೋಗಿ ಬಂದಿದ್ದಾರೆ.

ಈ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಧ್ರುವ ಸರ್ಜಾ ಅವರ ಮಗಳಿಗೆ ಬರೋಬ್ಬರಿ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ದುಬಾರಿ ಬೆಲೆಯ ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ತಮ್ಮ ಪ್ರೀತಿ ಪಾತ್ರರಿಗೆ ಈ ರೀತಿಯ ದುಬಾರಿ ಬೆಳೆಯ ಉಡುಗೊರೆ ನೀಡುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಸ್ನೇಹಿತ ಬಳಗದ ಮುಖದಲ್ಲಿ ಇರುವಂತಹ ನಗುವಿನಿಂದಲೇ ತಮ್ಮ ಸಂತೋಷವನ್ನು ಕಾಣುತ್ತಾರೆ. ಈ ಸಂದರ್ಭದಲ್ಲಿ ಮಗುವನ್ನು ಚೆನ್ನಾಗಿ ನೋಡಿಕೊಳ್ಳಲಿ ಆಕೆಗೆ ಒಳ್ಳೆಯದಾಗಲಿ ಚಾಮುಂಡೇಶ್ವರಿ ತಾಯಿ ಆಶೀರ್ವಾದ ಸದಾ ಕಾಲ ಇರುತ್ತದೆ ಎಂಬುದಾಗಿ ಹರಸಿ ಬಂದಿದ್ದಾರೆ.

Leave a Comment

error: Content is protected !!