ನಾನು ಡಬ್ಬಾ ಫಿಲಂ ಮಾಡಿದ್ದೀನಿ ಎಂಬುದಾಗಿ ಓಪನ್ ಆಗಿಯೇ ಹೇಳಿದ ಡಿ ಬಾಸ್, ತಬ್ಬಿಬ್ಬಾದ ಅಭಿಮಾನಿಗಳು.

Darshan Thoogudeepa: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಕ್ರಾಂತಿ ಸಿನಿಮಾದ ನಾಲ್ಕನೇ ಹಾಡಾಗಿರುವ ಡೋಂಟ್ ಮೆಸ್ ವಿತ್ ಹಿಮ್(Dont Mess With Him) ಹಾಡನ್ನು ಜನವರಿ 14ರ ಮಕರ ಸಂಕ್ರಾಂತಿಯ ಶುಭ ದಿನದಂದು ತುಮಕೂರಿನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಿದ್ದಾರೆ. ಉಳಿದ ಮೂರು ಹಾಡುಗಳಂತೆ ಈ ಹಾಡು ಕೂಡ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿದ್ದು ಲಕ್ಷಾನುಗಟ್ಟಲೆ ವೀಕ್ಷಣೆಗಳನ್ನು(Views) ಪಡೆದುಕೊಂಡಿದೆ. ದಿನೇ ದಿನೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಸಿನಿಮಾ ರಾಜ್ಯಾದ್ಯಂತ ಅಭಿಮಾನಿಗಳಲ್ಲಿ ಹಾಗೂ ಸಿನಿಮಾ ರಸಿಕರಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಹಾಗೂ ಪ್ರಚಾರವನ್ನು ಪಡೆದುಕೊಳ್ಳುತ್ತಿದೆ.

ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಕರ್ನಾಟಕ ರಾಜ್ಯದಲ್ಲಿ ಸಂಪಾದಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತುಮಕೂರಿನಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿದ್ದಾರೆ. ತುಮಕೂರಿನಲ್ಲಿ ಹಾಡನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಹಾಗೂ ಕ್ರಾಂತಿ ಚಿತ್ರತಂಡ ಬಂದಿದ್ದ ಬಸ್(Bus) ಮೇಲೆ ನಿಂತು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾರೆ.

Darshan Thoogudeepa
Darshan Thoogudeepa

ಈ ಸಂದರ್ಭದಲ್ಲಿ ಹಾಡನ್ನು ಕೂಡ ರವಿ ಎನ್ನುವ ತಮ್ಮ ಅಭಿಮಾನಿ ಒಬ್ಬರ ಕೈಯಿಂದಲೇ ಬಿಡುಗಡೆ(Release) ಮಾಡಿಸುತ್ತಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ನನ್ನ ಡಬ್ಬ ಹಾಗೂ ಆವರೇಜ್ ಫಿಲಂ ಗಳನ್ನು ಕೂಡ ನೋಡಿ ನನಗೆ ಅನ್ನ ಹಾಕಿದ ಎಲ್ಲಾ ಅನ್ನದಾತರಿಗೂ ನಮಸ್ಕಾರಗಳು ಎನ್ನುವುದಾಗಿಯೇ ಮಾತನ್ನು ಪ್ರಾರಂಭಿಸುತ್ತಾರೆ. ಅಂದರೆ ಇದರ ಅರ್ಥ ಎಂತಹ ಕೆಟ್ಟ ಸಿನಿಮಾ ಇದ್ದರೂ ಕೂಡ ನೀವು ನನ್ನನ್ನು ಗೆಲ್ಲಿಸಿದ್ದೀರಾ ಎಂಬುದಾಗಿದೆ.

ಇದನ್ನೂ ಓದಿ..ರೆಕಾರ್ಡ್ಗಳನ್ನು ಕ್ರಿಯೇಟ್ ಮಾಡಿದ್ದರೂ ಕೂಡ ಕ್ರಾಂತಿ ಟ್ರೈಲರ್ ಗೆ ವ್ಯಕ್ತವಾಗುತ್ತಿದೆ ವ್ಯಾಪಕ ಟೀಕೆ. ಸಿನಿಮಾ ಕಾಪೀನಾ?

ಚಾಲೆಂಜಿಂಗ್ ಸ್ಟಾರ್(Challenging Star) ದರ್ಶನ್ ನಾಯಕನಾಗಿ ಹಾಗೂ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಾಯಕಿಯಾಗಿ ಕಾಣಿಸಿಕೊಂಡಿರುವ ಕ್ರಾಂತಿ ಸಿನಿಮಾ ಇದೇ ಜನವರಿ 26ರಂದು ಅದ್ದೂರಿಯಾಗಿ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ವಿ ಹರಿಕೃಷ್ಣ ಅವರ ಸಂಗೀತ ಹಾಗೂ ನಿರ್ದೇಶನ ಚಿತ್ರಕಿದ್ದು ಶೈಲಜಾ ನಾಗ್ ಅವರು ನಿರ್ಮಾಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಸಮಯಗಳ ಹಿಂದೆನೇ ಬಿಡುಗಡೆ ಆಗಬೇಕಾಗಿದ್ದ ಈ ಸಿನಿಮಾ ಕೊನೆಗೂ ಈಗ ಬಿಡುಗಡೆ ಆಗುತ್ತಿದ್ದು ಅಭಿಮಾನಿಗಳ ನಡುವೆ ಚಿತ್ರದ ಕುರಿತಂತೆ ನಿರೀಕ್ಷೆ ಆಕಾಶ ಮಟ್ಟಕ್ಕೆ ಇದೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!