Rachita Ram: ಡಿಬಾಸ್ ರವರ ನಾನ್ ವೆಜ್ ವಿಚಾರವನ್ನು ಬಿಚ್ಚಿಟ್ಟ ಡಿಂಪಲ್ ಕ್ವೀನ್!

Darshan Thoogudeepa ಡಿಂಪಲ್ ಕ್ವೀನ್ ರಚಿತಾ ರಾಮ್ ರವರು ನಿಮಗೆಲ್ಲರಿಗೂ ತಿಳಿದಿರಬಹುದು ಮೊದಲಿಗೆ ಬಿಂದ್ಯಾ ರಾಮ ಆಗಿ ಕಿರುತೆರೆಯ ಧಾರವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು ಆದರೆ ಅವರನ್ನು ಕನ್ನಡ ಚಿತ್ರರಂಗಕ್ಕೆ ನಾಯಕ ನಟಿಯಾಗಿ ಪರಿಚಯಿಸಿದ್ದು ಮಾತ್ರ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು. 200 ಜನ ಹುಡುಗಿಯರಲ್ಲಿ ರಚಿತಾ ರಾಮ್(Rachita Ram) ಅವರು ಬುಲ್ ಬುಲ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗುವ ಮೂಲಕ ತಮ್ಮ ಅದೃಷ್ಟವನ್ನೇ ಬದಲಾಯಿಸಿಕೊಳ್ಳುತ್ತಾರೆ.

ಒಮ್ಮೆ ಬುಲ್ ಬುಲ್ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ನಂತರ ಮತ್ತೆ ರಚಿತಾ ರಾಮ್ ಅವರು ಚಿತ್ರರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಬಹುತೇಕ ದರ್ಶನ್ ಸುದೀಪ್ ಅಪ್ಪು(Appu) ಸೇರಿದಂತೆ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರರಿಗೂ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೂ ಕೂಡ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಸಂಭಾವನೆಯನ್ನು ಹಾಗೂ ಅತ್ಯಂತ ಬೇಡಿಕೆಯನ್ನು ಹೊಂದಿರುವ ನಟಿಯಾಗಿದ್ದಾರೆ.

ಇತ್ತೀಚಿಗಷ್ಟೇ ದರ್ಶನ್ ಅವರ ಜೊತೆಗೆ ಕ್ರಾಂತಿ ಸಿನಿಮಾದಲ್ಲಿ ಮತ್ತೊಮ್ಮೆ ನಾಯಕಿಯಾಗಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಹಾಗೂ ಡಿ ಬಾಸ್ ಅಭಿಮಾನಿಗಳ ಮನೆಗೆಲ್ಲಲು ಯಶಸ್ವಿಯಾಗುತ್ತಾರೆ. ಕ್ರಾಂತಿ ಸಿನಿಮಾದ ಸಂದರ್ಭದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ನಾನ್ವೆಜ್ ಸ್ಟೋರಿಯನ್ನು ಕೂಡ ಸಂದರ್ಶನದ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ಕ್ರಾಂತಿ(Kranti) ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ದರ್ಶನ್(Darshan) ಅವರು ಚಿತ್ರೀಕರಣದಲ್ಲಿ ಪಾಲ್ಗೊಳ್ಳುವ ಎಲ್ಲಾ ಕಲಾವಿದರು ಹಾಗೂ ತಂತ್ರಜ್ಞರಿಗೆ ತಾವೇ ಊಟ ಮಾಡಿಸಿ ಇರಿಸುತ್ತಿದ್ದರಂತೆ.

ಮಟನ್ ಚಿಕನ್ ಸೇರಿದಂತೆ ಕರಾವಳಿ ಶೈಲಿಯ ಸಿ ಫುಡ್ ಗಳನ್ನು ಕೂಡ ದರ್ಶನ್ ರವರ ಮಾಡಿಸುತ್ತಿದ್ದರಂತೆ. ಎಲ್ಲರಿಗೂ ಹೊಟ್ಟೆ ತುಂಬ ತಿನಿಸಿ ತಾವು ಸಂತೋಷ ಪಡುತ್ತಿದ್ದರು ಆದರೆ ತಾನು ಮಾತ್ರ ಹೆಚ್ಚು ಊಟ ಮಾಡುತ್ತಿರಲಿಲ್ಲ ಎಂಬುದನ್ನು ರಚಿತಾರಾಮ್ ರವರು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ದರ್ಶನ್ ರವರ ಈ ನಾನ್ವೆಜ್ ಸ್ಟೋರಿ ರಚಿತಾ ರಾಮ್(Rachita Ram) ಅವರ ಸಂದರ್ಶನದ ಮೂಲಕ ಎಲ್ಲಾ ಕಡೆ ವೈರಲ್ ಆಗುತ್ತಿದೆ.

Leave a Comment

error: Content is protected !!