Darshan Thoogudeepa: ಅಪ್ಪು ದಚ್ಚು ಒಟ್ಟಾಗಿ ನಟಿಸಿದ್ದ ಅರಸು ಸಿನಿಮಾದಲ್ಲಿ ದರ್ಶನ್ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ?

Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರು ನೇರ ನಡೆ ಹಾಗೂ ನುಡಿಯನು ಉಳ್ಳವರು ಹೀಗಾಗಿ ತಮ್ಮ ಮನಸ್ಸಿನಲ್ಲಿ ಅಂದುಕೊಂಡದ್ದನ್ನು ನೇರವಾಗಿ ಹೇಳಿ ಬಿಡುತ್ತಾರೆ ಇದರಿಂದ ಕೆಲವರಿಗೆ ಮನಸ್ಸಲ್ಲಿ ಸ್ವಲ್ಪ ಇರಿಸು ಮುರಿಸಾಗಬಹುದು. ಆದರೆ ಅವರು ಹಿಂದೊಂದು ಮುಂದೊಂದು ಮಾತನಾಡುವಂತಹ ವ್ಯಕ್ತಿತ್ವವನ್ನು ಹೊಂದಿಲ್ಲ ಇದರಲ್ಲಿ ಯಾವುದೇ ಅನುಮಾನ ಬೇಡ. ಇನ್ನು ಇಲ್ಲಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಡಿ ಬಾಸ್(Dboss) ಅವರ ಗೆಳೆಯ ಅಪ್ಪು(Appu) ಅವರ ಜೊತೆಗೆ ಮಾಡಿರುವ ಒಂದು ಸಿನಿಮಾದ ಬಗ್ಗೆ.

ಹೌದು ಅರಸು(Arasu) ಸಿನಿಮಾದ ಬಗ್ಗೆನೇ ನಾವು ಮಾತನಾಡೋಕೆ ಹೊರಟಿರುವುದು. ಅರಸು ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್(Power Star Puneeth Rajkumar) ನಾಯಕನಟನಾಗಿ ಹಾಗೂ ನಟಿ ರಮ್ಯಾ(Ramya) ಮತ್ತು ಜಾಸ್ಮಿನ್(Jasmine) ಇಬ್ಬರೂ ಕೂಡ ನಾಯಕ ನಟಿಯರಾಗಿ ಕಾಣಿಸಿಕೊಂಡಿದ್ದರು. ಈ ಸಿನಿಮಾದಲ್ಲಿ ಕೊನೆಗೆ ಅಂದರೆ ಕ್ಲೈಮ್ಯಾಕ್ಸ್ ನಲ್ಲಿ ಅತಿಥಿ ಪಾತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಡೆಡ್ಲಿ ಆದಿತ್ಯ(Deadly Adithya) ಕಾಣಿಸಿಕೊಳ್ಳುತ್ತಾರೆ.

Darshan With Puneeth Rajkumar

ದರ್ಶನ್ ಅವರನ್ನು ಈ ಪಾತ್ರದಲ್ಲಿ ನಟಿಸಲು ಚಿತ್ರದ ನಿರ್ಮಾಪಕರು ಆಗಿರುವ ರಾಘವೇಂದ್ರ ರಾಜಕುಮಾರ್(Raghavendra Rajkumar) ಅವರು ಕೇಳಿಕೊಂಡಿದ್ದರಂತೆ. ಆ ಸಂದರ್ಭದಲ್ಲಿ ದರ್ಶನ್(Darshan) ಅವರು ಒಂದು ಕಂಡಿಶನ್ ಅನ್ನು ಹಾಕಿದ್ದರು ಅದೇನೆಂದರೆ ಈ ಸಿನಿಮಾಗೆ ನಾನು ಯಾವುದೇ ಸಂಭಾವನೆಯನ್ನು ಪಡೆಯುವುದಿಲ್ಲ ಹೀಗಿದ್ದರೆ ಮಾತ್ರ ನಟಿಸುತ್ತೇನೆ ಎಂಬುದಾಗಿ ಹೇಳಿದ್ದಾರೆ.

ಆದರೆ ಸಿನಿಮಾ ಮುಗಿದ ನಂತರ ಮಾತ್ರ ರಾಘಣ್ಣ(Raghanna) ಹಾಗೂ ಪುನೀತ್(Puneeth) ಇಬ್ಬರಿಗೂ ಕೂಡ ಮನಸು ಸಮಾಧಾನವಾಗದೆ ಸಿನಿಮಾದಲ್ಲಿ ನಟಿಸಿದ್ದಕ್ಕಾಗಿ ದರ್ಶನ್(Darshan) ಅವರಿಗೆ ದುಬಾರಿ ಬೆಲೆ ಬಾಳುವಂತಹ ವಾಚ್ ಒಂದನ್ನು ಉಡುಗೊರೆಯಾಗಿ ನೀಡುತ್ತಾರೆ. ಆ ರೀತಿಯಲ್ಲಿತ್ತು ದರ್ಶನ್ ಹಾಗೂ ದೊಡ್ಡ ಮನೆಯವರ ಸ್ನೇಹ ಸಂಬಂಧ. ಆದರೆ ಇತ್ತೀಚಿನ ದಿನಗಳಲ್ಲಿ ಎರಡು ಕಡೆಯ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಮಾಡುತ್ತಿರುವಂತಹ ಜಗಳಗಳು ನಿಜಕ್ಕೂ ಕೂಡ ಬೇಸರವನ್ನು ಮೂಡಿಸುತ್ತದೆ.

Leave a Comment

error: Content is protected !!