Prabhas: ರೆಬೆಲ್ ಸ್ಟಾರ್ ಪ್ರಭಾಸ್ ಸಿನಿಮಾದಲ್ಲಿ ನಟಿಸಲು ದೀಪಿಕಾ ಪಡುಕೋಣೆ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ? ಒಂದು ಸಿನಿಮಾ ಮಾಡ್ಬೋದು.

Deepika Padukone ರೆಬಲ್ ಸ್ಟಾರ್ ಪ್ರಭಾಸ್(Rebel Star Prabhas) ಅವರ ಸಿನಿಮಾ ಅಂದ್ರೆ ಖಂಡಿತವಾಗಿ ಅಲ್ಲಿ ಬಜೆಟ್ ವಿಚಾರಕ್ಕೆ ತಲೆ ಹಾಕೋದಕ್ಕೆ ಹೋಗಲೇಬಾರದು ಯಾಕೆಂದರೆ ಖಂಡಿತವಾಗಿ ಅದೊಂದು ಬಿಗ್ ಬಜೆಟ್ ಸಿನಿಮಾ ಆಗಿರಲಿದ್ದು ಎಲ್ಲಾ ವಿಚಾರದಲ್ಲಿ ಕೂಡ ಶ್ರೀಮಂತ ಗುಣವನ್ನು ಆ ಸಿನಿಮಾ ಹೊಂದಿರುತ್ತದೆ ಎನ್ನುವುದನ್ನು ನಾವು ಮೊದಲು ತಿಳಿದುಕೊಳ್ಳಬೇಕಾಗುತ್ತದೆ. ಇನ್ನು ಈ ಬಾರಿ ರೆಬೆಲ್ ಸ್ಟಾರ್ ಪ್ರಭಾಸ್ ಅವರ ಪ್ರಾಜೆಕ್ಟ್ ಕೆ(Project K) ಸಿನಿಮಾದಲ್ಲಿ ಬಾಲಿವುಡ್ ಚಿತ್ರರಂಗದ ಹಲವಾರು ಸೆಲೆಬ್ರೆಟಿಗಳು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಅವರಲ್ಲಿ ಮೊದಲಿಗೆ ಕಾಣಿಸಿಕೊಳ್ಳುವುದು ಬಾಲಿವುಡ್ ಚಿತ್ರರಂಗದ ಲೆಜೆಂಡರಿ ನಟ ಆಗಿರುವ ಅಮಿತಾಬ್ ಬಚ್ಚನ್(Amitabh Bachchan). ನಂತರ ಸಿನಿಮಾದಲ್ಲಿ ನಾಯಕ ನಟಿಯಾಗಿ ಕರ್ನಾಟಕ ಮೂಲದ ಬಾಲಿವುಡ್ ಚಿತ್ರರಂಗದ ಟಾಪ್ ನಟಿ ಆಗಿರುವ ದೀಪಿಕಾ ಪಡುಕೋಣೆ(Deepika Padukone) ಕಾಣಿಸಿಕೊಳ್ಳುತ್ತಾರೆ. ಇದೇ ಮೊದಲ ಬಾರಿಗೆ ಪ್ರಾಜೆಕ್ಟ್ ಕೆ ಸಿನಿಮಾದ ಮೂಲಕ ಪ್ರಭಾಸ್ ಹಾಗೂ ದೀಪಿಕಾ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ಪ್ರಾಜೆಕ್ಟ್ ಕೆ ಸಿನಿಮಾ ಸಾಕಷ್ಟು ಟೆಕ್ನಿಕಲ್ ಅಂಶವನ್ನು ಹೊಂದಿದ್ದು ಅತ್ಯಧುಮುಖವಾಗಿ ಮೂಡಿಬರಲಿದೆ ಎನ್ನುವ ಮಾತುಕತೆ ಕೇಳಿ ಬರುತ್ತಿದ್ದು ಈ ಸಿನಿಮಾವನ್ನು ಮಹಾನಟಿ ಸಿನಿಮಾದ ನಿರ್ದೇಶಕ ಆಗಿರುವ ನಾಗ್ ಅಶ್ವಿನ್(Nag Ashwin) ಅವರು ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಈ ಸಿನಿಮಾದಲ್ಲಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲು ದೀಪಿಕಾ ಪಡುಕೋಣೆ(Deepika Padukone) ಪಡೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಎಂದು ಕೇಳಿದರೆ ಖಂಡಿತವಾಗಿ ನೀವು ಕೂಡ ಬೆರಗಾಗ್ತೀರಾ.

ಹೌದು ಮಿತ್ರರೇ ರೆಬೆಲ್ ಸ್ಟಾರ್ ಪ್ರಭಾಸ್(Prabhas) ರವರಿಗೆ ಪ್ರಾಜೆಕ್ಟ್ ಕೆ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಳ್ಳಲು ಬಾಲಿವುಡ್ ಬೆಳಗಿ ದೀಪಿಕಾ ಪಡುಕೋಣೆ, ಭರ್ಜರಿ 10 ಕೋಟಿ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಇದನ್ನು ಕೇಳಿರುವ ಅಭಿಮಾನಿಗಳು ಈ ಹಣದಲ್ಲಿ ಒಂದು ಸಿನಿಮಾವನ್ನೇ ನಿರ್ಮಿಸಬಹುದು ಎಂಬುದಾಗಿ ಆಶ್ಚರ್ಯಪಟ್ಟಿದ್ದಾರೆ. ಈ ಸಿನಿಮಾಗಾಗಿ ದೀಪಿಕಾ ಪಡುಕೋಣೆ ರವರು ಪಡೆದುಕೊಳ್ಳುತ್ತಿರುವ ಸಂಭಾವನೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!