Jr Ntr: ಒಂದೇ ಸಿನಿಮಾದಲ್ಲಿ ಹ್ರತಿಕ್ ರೋಷನ್ ಜೂನಿಯರ್ ಎನ್ಟಿಆರ್! ಬಾಕ್ಸ್ ಆಫೀಸ್ ದಾಖಲೆ ಯಾವುದು ಕೂಡ ಉಳಿಯಲ್ಲ.

Hrithik Roshan ತೆಲುಗು ಚಿತ್ರರಂಗದ ಖ್ಯಾತ ನಟ ಆಗಿರುವಂತಹ ಜೂನಿಯರ್ ಎನ್ಟಿಆರ್(Jr Ntr) ಅವರು ನಿಮಗೆ ತಿಳಿದಿರುವ ಹಾಗೆ ನಟನೆ ನೃತ್ಯ ಸಾಹಸ ದೃಶ್ಯಗಳಲ್ಲಿ ಪರ್ಫೆಕ್ಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಈಗಾಗಲೇ ಇಡೀ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅದರಲ್ಲೂ ವಿಶೇಷವಾಗಿ RRR ಸಿನಿಮಾದಲ್ಲಿ ನಟಿಸುವ ಮೂಲಕ ಇಡೀ ಜಗತ್ತು ಅವರನ್ನು ಗುರುತಿಸುವಂತೆ ಅಭಿನಯದ ಪ್ರದರ್ಶನವನ್ನು ಮಾಡಿದ್ದಾರೆ.

ಇನ್ನು ಈ ಕಡೆ ಬಾಲಿವುಡ್ ಚಿತ್ರರಂಗದ ಗ್ರೀಕ್ ಗಾಡ್ ಎಂದೇ ಬಿರುದಾಂಕಿತರಾಗಿರುವ ಹೃತಿಕ್ ರೋಷನ್(Hrithik Roshan) ಕೂಡ ತಮ್ಮ ಹ್ಯಾಂಡ್ಸಮ್ ಲುಕ್ ಹಾಗೂ ಡೆಡಿಕೇಶನ್ ಮತ್ತು ನೃತ್ಯದ ಮೂಲಕ ಕೇವಲ ಭಾರತದಲ್ಲಿ ಮಾತ್ರವಲ್ಲದೆ ಪರದೇಶಗಳಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿಗಳನ್ನು ಹೊಂದಿದ್ದಾರೆ. ಇವರಿಬ್ಬರೂ ಒಂದೇ ಸಿನಿಮಾದಲ್ಲಿ ನಟಿಸಿದರೆ ಖಂಡಿತವಾಗಿ ಯಾವ ರೀತಿ ಅಭಿಮಾನಿಗಳು ಹುಚ್ಚೆದ್ದು ಕಾಯಬಹುದು ಎಂಬುದನ್ನು ನೀವು ಕೇವಲ Imagination ಮೂಲಕವೇ ಅರ್ಥ ಮಾಡಿಕೊಳ್ಳಬಹುದಾಗಿದೆ.

ಅಷ್ಟಕ್ಕೂ ಇವರಿಬ್ಬರೂ ಒಂದೇ ಸಿನಿಮಾದಲ್ಲಿ ನಟನೆ ಮಾಡುವ ಕುರಿತಂತೆ ಯಾಕೆ ಮಾತನಾಡುತ್ತಿದ್ದೇವೆ ಎಂಬುದನ್ನು ನೀವು ಕೂಡ ಅಂದಾಜು ಮಾಡಿಕೊಳ್ಳಬಹುದಾಗಿದೆ. ಯಶ್ ರಾಜ್ ಫಿಲಂಸ್(Yash Raj Films) ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬಂದಿರುವ ವಾರ್ ಸಿನಿಮಾ ಈಗಾಗಲೇ ಹೃತಿಕ್ ರೋಷನ್ ರವರ ನಟನೆಯಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈಗ ಅದೇ ಸರಣಿಯಲ್ಲಿ ಮತ್ತೊಂದು ಸಿನಿಮಾ ಕೂಡ ಅತಿ ಶೀಘ್ರದಲ್ಲಿ ಮೂಡಿ ಬರಲಿದೆ.

ಬ್ರಹ್ಮಾಸ್ತ್ರ ಸಿನಿಮಾವನ್ನು ನಿರ್ದೇಶನ ಮಾಡಿರುವಂತಹ ಅಯಾನ್ ಮುಖರ್ಜಿ(Ayan Mukherji) ನಿರ್ದೇಶನದಲ್ಲಿ ಹೃತಿಕ್ ರೋಷನ್ ಹಾಗೂ ಜೂನಿಯರ್ ಎನ್ಟಿಆರ್ ಕಾಂಬಿನೇಷನ್ ನಲ್ಲಿ War 2 ಸಿನಿಮಾ ಮೂಡಿಬರಲಿದೆ ಎಂಬುದಾಗಿ ಅಧಿಕೃತವಾಗಿ ಅನೌನ್ಸ್ಮೆಂಟ್ ಕೂಡ ನಡೆದಿದೆ. ಖಂಡಿತವಾಗಿ ಇವರಿಬ್ಬರೂ ಒಂದೇ ಸಿನಿಮಾದಲ್ಲಿ ಇದ್ದರೆ ಬಾಕ್ಸ್ ಆಫೀಸ್ ರೆಕಾರ್ಡ್ಗಳು ಒಂದಾದ ಮೇಲೊಂದರಂತೆ ಮುರಿಯೋದ್ರಲ್ಲಿ ಯಾವುದೇ ಅನುಮಾನವಿಲ್ಲ.

Leave a Comment

error: Content is protected !!