
Appu movies : ಅಪ್ಪು ಬದುಕಿದ್ದರೆ ಮಾಡಬೇಕಾಗಿದ್ದ ಸಿನಿಮಾಗಳು ಯಾವುವು ಗೊತ್ತಾ?
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ( Puneet rajkumar ) ಅವರು ತಮ್ಮ ವೃತ್ತಿಯ ಉತ್ತುಂಗದಲ್ಲಿದ್ದಾಗಲೇ ನಮ್ಮನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬದುಕಿದ್ದರೆ ಯಾವೆಲ್ಲ Appu movies ಸಿನಿಮಾಗಳನ್ನು ಮಾಡಬೇಕಾಗಿತ್ತು ಎಂಬುದನ್ನು ಇಂದಿನ ಈ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ಮೊದಲಿಗೆ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ ಮತ್ತೊಂದು ಸಿನಿಮಾವನ್ನು ಯುವರತ್ನ ಸಿನಿಮಾದ ನಂತರ ಮಾಡುವ ಪ್ಲಾನ್ ಆಗಿತ್ತು ಆದರೆ ಅದನ್ನು ಮಾಡಲು ಸಾಧ್ಯವಾಗಲಿಲ್ಲ.
ಲೂಸಿಯಾ ಪವನ್ ಕುಮಾರ್ ನಿರ್ದೇಶನದಲ್ಲಿ ದ್ವಿತ್ವ ಸಿನಿಮಾವನ್ನು ಕೂಡ ಮಾಡಬೇಕಾಗಿತ್ತು ಈ ಸಿನಿಮಾವನ್ನು ಅಧಿಕೃತವಾಗಿ ಅನೌನ್ಸ್ ಕೂಡ ಮಾಡಲಾಗಿತ್ತು. ಹೆಬ್ಬುಲಿ ಪೈಲ್ವಾನ್ ಹಾಗೂ ಗಜಕೇಸರಿ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಕೃಷ್ಣ ನಿರ್ದೇಶನ ಹಾಗೂ ನಿರ್ಮಾಣದಲ್ಲಿ ಮೂಡಿ ಬರಬೇಕಾಗಿದ್ದ ಸಿನಿಮಾದಲ್ಲಿ ಕೂಡ ನಟಿಸಲು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಒಪ್ಪಿಗೆಯನ್ನು ನೀಡಿ ಫಸ್ಟ್ ಲುಕ್ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ರಾ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಬೇಕಾಗಿತ್ತು.

Incomplete appu movies list
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಹೋದರ ಆಗಿರುವ ತೂಗುದೀಪ ಶ್ರೀನಿವಾಸ್ ನಿರ್ದೇಶನದಲ್ಲಿ ಹಾಗೂ ಜಯಣ್ಣ ನಿರ್ಮಾಣದಲ್ಲಿ ಮೂಡಿ ಬರಬೇಕಾಗಿದ್ದ ಇನ್ನೂ ಹೆಸರಿಡದ ಸಿನಿಮಾದಲ್ಲಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಟಿಸುವುದು ನಿಗದಿಯಾಗಿತ್ತು.
ಕೇವಲ ಇಷ್ಟು ಮಾತ್ರವಲ್ಲದೆ ಅಭಿಮಾನಿಗಳ ಮನಸ್ಸಿನಲ್ಲಿ ಅಪ್ಪು ಯಾವುದಾದರೂ ಒಂದು ಪಕ್ಕ ಆಕ್ಷನ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸಬೇಕು ಎಂಬ ಆಸೆ ಇತ್ತು ಮಾತ್ರವಲ್ಲದೆ ತಮ್ಮ ಸಹೋದರ ಆಗಿರುವ ಶಿವಣ್ಣನ ಜೊತೆಗೆ ಕೂಡ ಒಂದು ಸಿನಿಮಾದಲ್ಲಿ ನಟಿಸಲಿ ಎಂಬ ಮಹಾದಾಸೆಯನ್ನು ಹೊಂದಿದ್ದರು. ಈ ಎಲ್ಲಾ ಆಸೆಗಳನ್ನು ತೀರಿಸುವ ಮುನ್ನವೇ ಪವರ್ ಸ್ಟಾರ್ ನಮ್ಮನ್ನೆಲ್ಲಾ ಬಿಟ್ಟು ಹೋಗಿರುವುದು ನಿಜಕ್ಕೂ ಕೂಡ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ.