Jaggesh: ರಾಘವೇಂದ್ರ ಸ್ಟೋರ್ಸ್‌ನ ಸಿಂಗಲ್‌ ಸುಂದ್ರ ಮೊದಲ ಸಾಂಗ್ ರಿಲೀಸ್

ನವರಸ ನಾಯಕ ಜಗ್ಗೇಶ್ (Jaggesh) ಅವರ ನಟನೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ರಾಘವೇಂದ್ರ ಸ್ಟೋರ್ಸ್ (Raghavendra Stores) ಚಿತ್ರದ ಮೊದಲ ಹಾಡು ‘ಸಿಂಗಲ್ ಸುಂದರ’ ಇದೇ ಏಪ್ರಿಲ್ 12ರಂದು ಸಂಜೆ 5ಕ್ಕೆ ಬಿಡುಗಡೆ ಆಗಿದೆ. ಅಜನೀಶ್ ಲೋಕನಾಥ್ ಸಂಗೀತವಿರುವ ಈ ಹಾಡನ್ನು ರಕ್ಷಿತ್ ಶೆಟ್ಟಿಯವರು (Rakshit Shetty) ಬಿಡುಗಡೆ ಮಾಡಿದ್ದಾರೆ.

ಹೊಂಬಾಳೆ ಸಂಸ್ಥೆಯಿಂದ ನಿರ್ಮಾಣವಾಗಿರುವ ಜಗ್ಗೇಶ್ (Jaggesh) ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ ಹಾಸ್ಯ ಮಿಶ್ರಿತ ಕೌಟುಂಬಿಕ ಚಿತ್ರ ರಾಘವೇಂದ್ರ ಸ್ಟೋರ್ ನ ಬ್ಯಾಚುಲರ್ ಗಳ ಹಾಡು ಇದಾಗಿದ್ದು ಈ ಹಾಡನ್ನು ವಿಶೇಷವಾಗಿ ಪ್ರಸ್ತುತ ಕನ್ನಡ ಇಂಡಸ್ಟ್ರಿಯ ಒಬ್ಬಂಟಿಗಳು ಬಿಡುಗಡೆ ಮಾಡಿದ್ದಾರೆ.

ಗುರುದೇವ (Gurudeva) ಹೊಯ್ಸಳ ಧನಂಜಯ್ ಮತ್ತು ಚಾರ್ಲಿ 777 (Charli) ರಕ್ಷಿತ್ ಶೆಟ್ಟಿ ಹಾಡಿನ ಬಿಡುಗಡೆ ಮಾಡಿದ್ದಾರೆ. ಹೊಂಬಾಳೆ ಸಂಸ್ಥೆಯ ನಿರ್ಮಾಣದ 12ನೇ ಸಿನಿಮಾ ಇದು. ಜಗ್ಗೇಶ್ ಜೊತೆ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ನಟಿ ಶ್ವೇತಾ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ರಾಮಚಾರಿ, ರಾಜಕುಮಾರ ಮತ್ತು ಯುವರತ್ನದಂತಹ ಕಥೆಗಳನ್ನು ಕೊಟ್ಟ ಸಂತೋಷ್ ಆನಂದ್ ರಾಮ್ ಈ ಚಿತ್ರದ ನಿರ್ದೇಶಕರು.

ಬಾಣಸಿಗನ ಜೀವನದ ಹಾಸ್ಯ ಮಿಶ್ರಿತ ಕೌಟುಂಬಿಕ ಚಿತ್ರ ಇದೇ ತಿಂಗಳ ಕೊನೆಯ ವಾರ (ಏಪ್ರಿಲ್ 28) ತೆರೆಗೆ ಬರಲಿದೆ. ಈ ಚಿತ್ರದ ಕಳೆದ ವರ್ಷ ವರಮಹಾಲಕ್ಷ್ಮಿ ಹಬ್ಬಕ್ಕೆ (5-8-2022) ತೆರೆಗೆ ಬರುವುದಾಗಿ ಘೋಷಿಸಿತ್ತು. ಆದರೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತ್ತು

Leave a Comment

error: Content is protected !!