Kabzaa: ಡಿ ಬಾಸ್ ಸಿನಿಮಾದಲ್ಲಿ ನಾಯಕಿಯಾಗಿದ್ದ ನಟಿ ತಾನ್ಯಾ ಹೋಪ್ ಕಬ್ಜಾ ಸಿನಿಮಾದಲ್ಲಿ ಐಟಂ ಡ್ಯಾನ್ಸ್ ಮಾಡೋಕೆ ಪಡೆದುಕೊಂಡ ಸಂಭಾವನೆ ಎಷ್ಟು ಗೊತ್ತಾ?

Tanya Hope ಯಜಮಾನ ಸಿನಿಮಾವನ್ನು ನೀವು ಗಮನಿಸಿದರೆ ಅಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರ ಜೊತೆಗೆ ಎರಡನೇ ನಾಯಕ ನಟಿಯಾಗಿ ನಟಿ ತಾನ್ಯ ಹೋಪ್ ರವರು ಕೂಡ ಕಾಣಿಸಿಕೊಳ್ಳುವ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಅವರು ಪಾದರ್ಪಣೆ ಮಾಡಿರುತ್ತಾರೆ‌. ಅದಾದ ನಂತರ ಅವರು ಕಾಣಿಸಿಕೊಂಡಿದ್ದೆ ಅಭಿಷೇಕ್ ಅಂಬರೀಶ್(Abhishek Ambareesh) ನಟನೆಯ ಅಮರ್ ಸಿನಿಮಾದಲ್ಲಿ.

ಅಮರ್ ಸಿನಿಮಾದಲ್ಲಿ ಕಾಣಿಸಿಕೊಂಡ ನಂತರ ಮತ್ತೆ ತಾನ್ಯ ಹೋಪ್(Tanya Hope) ಯಾವುದೇ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಅವರು ಮತ್ತೆ ಕಾಣಿಸಿಕೊಂಡಿರುವುದು ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಪ್ಯಾನ್ ಇಂಡಿಯನ್ ಸಿನಿಮಾ ಆಗಿರುವ ಕಬ್ಜಾ ಸಿನಿಮಾದ ಐಟಂ ಸಾಂಗ್ ನಲ್ಲಿ. ಇತ್ತೀಚಿಗಷ್ಟೇ ಕಬ್ಜಾ ಸಿನಿಮಾದಿಂದ ಬಿಡುಗಡೆ ಆಗಿರುವ ಚುಮುಚುಮು ಚಳಿ ಚಳಿ(Chumu Chumu Chali Chali) ಸಾಂಗ್ ನಲ್ಲಿ ತಾನ್ಯಾ ಹೋಪ್ ಸೊಂಟ ಬಳುಕಿಸಿದ್ದಾರೆ.

ಈಗಾಗಲೇ ಬಿಡುಗಡೆಯಾಗಿರುವ ಈ ಹಾಡು ಯೂಟ್ಯೂಬ್ ಹಾಗೂ ಸೋಶಿಯಲ್ ಮೀಡಿಯಾಗಳಲ್ಲಿ ಮಿಲಿಯನ್ಗಟ್ಟಲೆ ವೀಕ್ಷಣೆಯನ್ನು ಪಡೆದುಕೊಂಡಿದೆ. ಕೇವಲ ಹಾಡು ಮಾತ್ರವಲ್ಲದೆ ತಾನ್ಯ ಹೋಪ್ ಈ ಹಾಡಿನಲ್ಲಿ ಕಾಣಿಸಿಕೊಂಡಿರುವ ರೀತಿ ಕೂಡ ಪಡ್ಡೆ ಹೈಕಳ ಚಳಿ ಬಿಡಿಸುವ ರೀತಿಯಲ್ಲಿ ಇದೆ ಎಂದರೆ ತಪ್ಪಾಗಲಾರದು. ಯಜಮಾನ ಸಿನಿಮಾದಲ್ಲಿ ಕೂಡ ಬಸಣ್ಣಿ(Basanni) ಹಾಡಿಗೆ ತಾನ್ಯ ಹೋಪ್ ಇದೇ ರೀತಿಯಲ್ಲಿ ಮೈಚಳಿ ಬಿಟ್ಟು ಕುಣಿದಿದ್ದರು.

ಇನ್ನು ತಾನ್ಯಾ ಹೋಪ್(Tanya Hope) ಕಬ್ಜಾ(Kabzaa) ಸಿನಿಮಾದ ಈ ಹಾಡಿಗಾಗಿ ಭರ್ಜರಿ 15 ಲಕ್ಷ ರುಪಾಯಿ ಸಂಭಾವನೆಯನ್ನು ಪಡೆದುಕೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಹಾಡುಗಳಿಗಿಂತ ಹೆಚ್ಚಾಗಿ ತಾನ್ಯ ಹೋಪ್ ರವರನ್ನು ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ನೋಡಬೇಕೆಂದು ಕಾಯುತ್ತಿರುವ ಅಭಿಮಾನಿಗಳ ಸಂಖ್ಯೆ ಹೆಚ್ಚಿದೆ ಎಂಬುದನ್ನು ಕೂಡ ನಾವಿಲ್ಲಿ ಗಮನವಹಿಸಬೇಕಾಗುತ್ತದೆ.

Leave a Comment

error: Content is protected !!