ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅರ್ಜುನ್ ಜನ್ಯಾಗೆ ಇಷ್ಟು ದೊಡ್ಡ ಮಗಳು ಇದ್ದಾಳಾ? ಹಲವು ವರ್ಷಗಳ ಬಳಿಕ ವೀಕ್ಷಿಸಿದ ಅಭಿಮಾನಿಗಳು

ಅರ್ಜುನ್ ಜನ್ಯ ಅವರು ಮ್ಯೂಸಿಕ್ ಡೈರೆಕ್ಟರ್ ಆಗಿ ಕರ್ನಾಟಕದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲ್ಲದೆ ಇವರು ಗಾಯಕರು ಕೂಡ ಹೌದು. ಯಶಸ್ವಿ ಚಿತ್ರಗಳಾದ ಬಿರುಗಾಳಿ, ವಜ್ರಕಾಯ, ವರದನಾಯಕ, ಕೆಂಪೇಗೌಡ, ಸಂಚಾರಿ, ವಿಕ್ಟರಿ, ಮುಕುಂದ ಮುರಾರಿ, 99 ಹೀಗೆ ಸಾಲು ಸಾಲು ಚಿತ್ರಗಳಲ್ಲಿ ಸಂಗೀತವನ್ನು ಸಂಯೋಜಿಸಿದ್ದು, ಇವರನ್ನು ಸಂಗೀತ ಮಾಂತ್ರಿಕರೆಂದೆ ಕರೆಯಲಾಗುತ್ತದೆ.

ಬೆಸ್ಟ್ ಮ್ಯೂಸಿಕ್ ಡೈರೆಕ್ಟರ್ ಆಗಿ ಹಲವು ಬಾರಿ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅರ್ಜುನ್ ಜನ್ಯ ಅವರು ಕಂಪೋಸ್ ಮಾಡಿರುವ ಹಾಡುಗಳು ಜನರಿಂದ ಮೆಚ್ಚುಗೆ ಪಡೆಯುತ್ತಿದ್ದು, ಸಕ್ಕತ್ ಫೇಮಸ್ ಆಗ್ತಿದೆ. ಅರ್ಜುನ್ ಜನ್ಯ ಅವರ ಸಂಗೀತಕ್ಕೆ ಮತ್ತು ಅವರಿಗಿರುವ ಅಭಿಮಾನಿ ಬಳಗವು ವಿಸ್ತಾರವಾದದ್ದು. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಶೋ ನ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿ ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಯಂಗ್ ಅಂಡ್ ಎನರ್ಜಿಟಿಕ್ ಆಗಿರುವ ಅರ್ಜುನ್ ಜನ್ಯ ಅವರು ಯಾವಾಗಲೂ ಆಕ್ಟಿವ್ ಆಗಿರುತ್ತಾರೆ.

ಸರಿಗಮಪ ಶೋದಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವ ಅನುಶ್ರೀ ಯವರ ಮತ್ತು ಅರ್ಜುನ್ ಜನ್ಯ ಅವರ ತಮಾಷೆಗಾಗಿ ಸರಿಗಮಪ ಶೋ ನೋಡುವ ವೀಕ್ಷಕರೂ ಕಾಣಸಿಗುತ್ತಾರೆ. ಅರ್ಜುನ್ ಜನ್ಯ ಅವರು ಗೀತಾ ಎಂಬುವರನ್ನು ವಿವಾಹವಾಗಿದ್ದು, ಈ ದಂಪತಿಗಳಿಗೆ ರಚಿತಾ ಎನ್ನುವ ಸುಂದರ ಮಗಳಿದ್ದಾಳೆ. ತಂದೆಯಂತೆ ರಚಿತ ಕೂಡ ಸಂಗೀತದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ತನ್ನ ಚಿಕ್ಕ ವಯಸ್ಸಿನಲ್ಲಿಯೇ ಪಿಯಾನು ನುಡಿಸುವುದನ್ನು ಕಲಿತಿದ್ದಳು.

ರಚಿತಾ ಚಿಕ್ಕವಳಿರುವಾಗ ಅರ್ಜುನ್ ಜನ್ಯ ಅವರು ಹಲವಾರು ಸಭೆ ಸಮಾರಂಭಗಳಿಗೆ, ಕಾರ್ಯಕ್ರಮಗಳಿಗೆ ತಮ್ಮ ಮಗಳನ್ನು ಕರೆದುಕೊಂಡು ಬಂದು ಪರಿಚಯಿಸಿದ್ದರು. ಆದರೆ ಕೆಲ ವರ್ಷಗಳಿಂದ ಅರ್ಜುನ್ ಜನ್ಯ ಹಾಗೂ ಗೀತಾ ದಂಪತಿಗಳು ತಮ್ಮ ಮಗಳನ್ನು ಎಲ್ಲಿಯೂ ಅಷ್ಟಾಗಿ ಕಾಣಿಸಿರಲಿಲ್ಲ. ಈ ಕುರಿತಾಗಿ ಅಭಿಮಾನಿಗಳು ಅರ್ಜುನ್ ಜನ್ಯ ಅವರಲ್ಲಿ ‘ನಿಮ್ಮ ಮಗಳು ಎಲ್ಲಿ?’ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದರು.

ಇದೀಗ ಈ ಪ್ರಶ್ನೆಗಳಿಗೆ ಉತ್ತರ ನೀಡಿದ ಅರ್ಜುನ್ ಜನ್ಯ ಅವರು ತಮ್ಮ instagram ಖಾತೆಯಲ್ಲಿ ರಚಿತ ಅವರ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಮಗಳು ರಚಿತಾ, ಅವಳ ಸ್ನೇಹಿತರೊಂದಿಗೆ ಒಡಗೂಡಿ ತೆಗೆಸಿಕೊಂಡಿರುವ ಫೋಟೋಗಳನ್ನು ಎಡಿಟ್ ಮಾಡಿ ಅದಕ್ಕೆ ಹಾಡೊಂದನ್ನು ಹಾಕಿ ಆ ವಿಡಿಯೋವನ್ನು ತಮ್ಮ instagram ಖಾತೆಯಲ್ಲಿ ಹಾಕಿಕೊಂಡಿದ್ದರು. ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ಅರ್ಜುನ್ ಜನ್ಯ ಅವರಿಗೆ ಹಲವಾರು ಕಾಮೆಂಟ್ಸ್ ಗಳು ಬಂದಿವೆಯಂತೆ.

ವಿಡಿಯೋವನ್ನು ವೀಕ್ಷಿಸಿದ ಬಳಿಕ ಅಭಿಮಾನಿಗಳು ‘ನಿಮ್ಮ ಮಗಳು ಇಷ್ಟು ದೊಡ್ಡವಳಾ ಸರ್?’ ಎಂದು ಪ್ರಶ್ನಿಸಿದ್ದಾರಂತೆ. ಅಲ್ಲದೆ ‘ನಿಮ್ಮ ಮಗಳು ಸಖತ್ ಕ್ಯೂಟ್ ಆಗಿದ್ದಾಳೆ; ಅವಳಲ್ಲಿ ದೈವಿಕಳೆ ಕಾಣುತ್ತಿದೆ’ ಎಂದಿದ್ದಾರಂತೆ. ‘ವಿಡಿಯೋ ಕೂಡ ತುಂಬಾ ಚೆನ್ನಾಗಿ ಮೂಡಿ ಬಂದಿದೆ; ನಿಮ್ಮ ಮಗಳು ಸಂಗೀತದಲ್ಲಿ ಆಸಕ್ತಿಯನ್ನು ಹೊಂದಿದ್ದಾಳೆ ಎಂಬ ವಿಷಯ ತಿಳಿದು ಖುಷಿಯಾಗುತ್ತಿದೆ’ ಎಂದಿದ್ದಾರಂತೆ. ಅಲ್ಲದೆ ಕಾಮೆಂಟ್ಸ್ ಗಳ ಮೂಲಕ ಅರ್ಜುನ್ ಜನ್ಯ ಅವರಿಗೆ ಮತ್ತು ಅವರ ಮಗಳು ರಚಿತಾಳಿಗೆ ಶುಭ ಹಾರೈಸಿದ್ದರಂತೆ.

Arjun janya daughter photo
Arjun janya daughter photo

Leave a Comment

error: Content is protected !!