ಚಿರು ಅವರು ಇಚ್ಚಿಸಬೇಕು ಯಾವಾಗ ಬರಬೇಕು ಎಂದು ಮೇಘನಾ ಮಾತು

ಚಿರಂಜೀವಿ ಸರ್ಜಾ ಎನ್ನುತ್ತಲೆ ನಮಗೆ ನೆನಪಾಗುವುದು ಅವರ ನಿಷ್ಕಲ್ಮಷ ನಗು. ಕಳೆದ ಮೂರು ತಿಂಗಳ ಹಿಂದೆ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಮ್ಮನ್ನು ಅಗಲಿದರು. ಅವರ ನಿಧನದ ವೇಳೆ ಚಿರು ಪತ್ನಿ ಮೇಘನಾ ರಾಜ್ ಆರು ತಿಂಗಳ ಗರ್ಭಿಣಿ. ಈಗ ಅವರಿಗೆ ಒಂಬತ್ತು ತಿಂಗಳು. ಡಿಲೆವರಿ ದಿನಾಂಕ ಕೂಡಾ ಕೊಟ್ಟಿದ್ದಾರೆ. ಈಗ ಅವರು ಮಗುವಿನ ಬಗೆಗೆ ಏನು ಹೇಳಿದ್ದಾರೆ ತಿಳಿಯೋಣ‌.

ಅಕ್ಟೋಬರ್ ಹದಿನೇಳು ಚಿರಂಜೀವಿ ಸರ್ಜಾ ಅವರ ಹುಟ್ಟಿದ ದಿನ. ಇದರ ಪ್ರಯುಕ್ತ ಮೇಘನಾ ರಾಜ್ ಅವರು ಪೂಜೆ ಮಾಡಿಸಬೇಕೆಂದು ಬಂದ ಸಮಯದಲ್ಲಿ ಪಬ್ಲಿಕ್ ಮ್ಯೂಸಿಕ್ ಅವರ ಕೆಲವು ಪ್ರಶ್ನೆಗಳಿಗೆ ಮೇಘನಾ ಉತ್ತರಿಸುತ್ತಾರೆ. ಕಳೆದ ಬಾರಿ ಚಿರಂಜೀವಿ ಅವರೊಂದಿಗೆ ತುಂಬಾ ಸುಂದರವಾಗಿ ಹುಟ್ಟಿದ ಹಬ್ಬವನ್ನು ಆಚರಿಸಿದ್ದಿರಿ. ಈಗ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದಿರಾ ಎಂದಾಗ ಮೇಘನಾ ರಾಜ್, ಮಿಸ್ ಮಾಡಿಕೊಳ್ಳೊದು ಅಂತ ಹೇಗೆ ಹೇಳುವುದು. ಎಲ್ಲರಿಗೂ ಗೊತ್ತು ಏನು ಎಂದು. ಈಗ ಪೂಜೆ ಮಾಡಿಸುವ ಸಲುವಾಗಿ ಬಂದಿದ್ದೆವೆ ಎಂದರು. ಚಿರಂಜೀವಿ ಅವರು ಮತ್ತೆ ಮಗುವಿನ ರೂಪದಲ್ಲಿ ನಮ್ಮೆಲ್ಲರ ಮಧ್ಯೆ ಬರುತ್ತಾರೆ ಎಂಬ ನೀರಿಕ್ಷೆ ಇದೆ ಎಲ್ಲರಿಗೂ ಇದರ ಬಗ್ಗೆ ಅಭಿಪ್ರಾಯ ಕೇಳಿದಾಗ. ಮೇಘನಾ ರಾಜ್, ಖಂಡಿತವಾಗಿ ಚಿರು ಅವರು ಮತ್ತೆ ಬರುತ್ತಾರೆ ಎನ್ನುತ್ತಾರೆ.

ಚಿರಂಜೀವಿ ಅವರ ಹುಟ್ಟಿದ ದಿನದಂದೆ ಚಿರು ಮತ್ತೆ ಅಭಿಮಾನಿಗಳಿಗಾಗಿ ಬರುತ್ತಾರಾ ಎಂದು ಕೇಳಿದಾಗ, ಅದು ಚಿರು ಅವರು ನಿರ್ಧಾರ ಮಾಡಬೇಕು. ಯಾವಾಗ ಬರಬೇಕು ಎಂಬುದು ಅವರ ನಿರ್ಧಾರ. ಅದನ್ನು ನಾನು ಹೇಗೆ ಹೇಳಲು ಸಾಧ್ಯ ಬಂದರು ಬರಬಹುದು ಎಂದು ಮೇಘನಾ ರಾಜ್ ಹೇಳಿದರು. ಚಿರಂಜೀವಿ ಅವರ ಆಸೆಯಂತೆ ಬೇಬಿ ಶವರ್ ಮಾಡಿದಾಗ, ಅವರ ಆಸೆ ಈಡೇರಿದ ಅನುಭವ ಹೇಗಿತ್ತು ಎಂಬ ಪ್ರಶ್ನೆಗೆ ಮೇಘನಾ ರಾಜ್ ಅವರು ಹೇಳುತ್ತಾರೆ. ಬೇಬಿ ಶವರ್ ಧ್ರುವ ದಂಪತಿ ಹಾಗೂ ಅಪ್ಪ, ಅಮ್ಮ ಎಲ್ಲಾ ಸೇರಿ ಮಾಡಿರುವುದು. ಇದರಿಂದ ಚಿರು ಕನಸು ಈಡೇರಿದೆ. ನನಗಂತೂ ಖುಷಿಯಾಗಿದೆ. ಚಿರು ಅವರಿಗೂ ಖಂಡಿತ ತುಂಬಾ ಖುಷಿಯಾಗಿರುತ್ತದೆ. ನಂತರ ಧ್ರುವಾ ಹಾಗೂ ಮೇಘನಾರ ಎಮೊಷನಲ್ ವಿಡಿಯೋ ವೈರಲ್ ಆದ ಬಗ್ಗೆ ಕೇಳಿದಾಗ, ಅದು ಬೇಬಿ ಶವರ್ ದಿನ ನಡೆದ ಘಟನೆ. ತುಂಬಾ ವಿಶೇಷವಾದ ದಿನ. ಸ್ವರ್ಗದಂತೆ ಅನಿಸಿತ್ತು ಎಂದರು ಮೇಘನಾ ರಾಜ್. ಅವಳಿ ಮಕ್ಕಳ ಆಸೆಯಲ್ಲಿ ಇದ್ದಾರೆ ಅಭಿಮಾನಿಗಳು ಅದರ ಬಗೆಗೆ ಅಭಿಪ್ರಾಯ ಕೇಳಿದಾಗ, ಆದರೂ ಆಗಬಹುದು ಕಾದುನೋಡಬೇಕು ಎಂದು ಹೇಳಿದರು ಮೇಘನಾ ರಾಜ್.

ತನ್ನ ಮಡಿಲಿಗೆ ಮತ್ತೆ ಚಿರಂಜೀವಿ ಅವರೆ ಹುಟ್ಟಿ ಬರುತ್ತಾರೆ ಎಂಬ ನಂಬಿಕೆಯಿಂದ ಇರುವ ಮೇಘನಾ ಅವರ ಕನಸು ನಿಜವಾಗಲಿ. ತುಂಬಾ ಸಣ್ಣ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಬದುಕುವುದು ತುಂಬಾ ಕಷ್ಟ. ಆದರೂ ಮೇಘನಾ ರಾಜ್ ಅವರನ್ನು ಖುಷಿಯಾಗಿಡಲು ಧ್ರುವಾ ಸರ್ಜಾ ಹಾಗೂ ಕುಟುಂಬದವರು ಪ್ರಯತ್ನ ಮಾಡುತ್ತಿದ್ದಾರೆ. ಮೇಘನಾ ರಾಜ್ ಅವರಿಗೆ ಒಳ್ಳೆಯದಾಗಲಿ ಎಂದು ಬಯಸೋಣ.

Leave A Reply

Your email address will not be published.

error: Content is protected !!