ತಾನು ಧರಿಸುವ ದೈಮಂಡ್ ನೆಕ್ಲೆಸ್ ನ ಸಿಕ್ರೇಟ್ ಬಿಚ್ಚಿಟ್ಟ ಮೇಘನಾ ರಾಜ್. ಮೇಘನಾ ಧರಿಸುವ ದೈಮಂಡ್ ನೆಕ್ಲೆಸ್ ಬೆಲೆ ಎಷ್ಟು ಗೊತ್ತಾ

ನಟಿ ಮೇಘನಾ ರಾಜ್ ಅವರು ಅಭಿನಯದ ಜೊತೆಗೆ ಜಾಹೀರಾತುಗಳಲ್ಲಿ ಈಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿನ್ನಾಭರಣಗಳನ್ನು ತೊಟ್ಟು, ಸೀರೆಯುಟ್ಟು ನಿಂತರೆ ಸುಂದರವಾಗಿ ಕಾಣುವ ಇವರಿಗೆ ಸೀರೆ ಮಳಿಗೆಗಳಿಂದ, ಆಭರಣ ಅಂಗಡಿಗಳಿಂದ ತುಂಬಾನೇ ಬೇಡಿಕೆಯಿದೆ.

ಮೇಘನಾ ರಾಜ್ ಅವರು ಬೆಂಗಳೂರಿನಲ್ಲಿ ನಡೆದ ಅತಿ ದೊಡ್ಡ ಚಿನ್ನಾಭರಣಗಳ ಪ್ರದರ್ಶನವೊಂದರಲ್ಲಿ ಕಾಣಿಸಿಕೊಂಡಿದ್ದರು. ಬಂಗಾರದ ಬಣ್ಣದ ಸೀರೆಯನ್ನುಟ್ಟು ಬಂದ ಇವರು ಪ್ರದರ್ಶನದಲ್ಲಿ ಈ ರೀತಿಯಾಗಿ ಮಾತನಾಡಿದರು; ‘ಜುವೆಲ್ಸ್ ಆಫ್ ಇಂಡಿಯಾ ಎನ್ನುವ ಎಕ್ಸಿಬಿಷನ್ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಚಿತ್ರರಂಗಕ್ಕೆ ಎಂಟ್ರಿ ಕೊಡುವ ಸಮಯದಲ್ಲಿ ಇದೇ ಎಕ್ಸಿಬಿಷನ್ ಗೆ ಆಭರಣಗಳನ್ನು ವೀಕ್ಷಿಸಿ ಖರೀದಿಸಲು ಬಂದಿದ್ದೆ. ಒಳ್ಳೆಯ ಕ್ವಾಲಿಟಿಯ ಎಲ್ಲಾ ಜ್ಯುವೆಲ್ಸ್ ಗಳು ಒಂದೇ ಕಡೆ ಸಿಗುತ್ತವೆ ಎಂದರೆ ಯಾವ ಹೆಣ್ಣು ಮಕ್ಕಳು ತಾನೆ ಬಿಡುತ್ತಾರೆ?? ಆಗ ಗೊತ್ತಿರ್ಲಿಲ್ಲ; ಹಲವು ವರ್ಷ ಕಳೆದ ಮೇಲೆ ಅದೇ ಜುವೆಲ್ಸ್ ಆಫ್ ಇಂಡಿಯಾಗೆ ಜುವೆಲ್ಸ್ ಬ್ರಾಂಡ್ ನ ಎಂಬಾಸಿಡರ್ ನಾನೇ ಆಗಿರ್ತೀನಿ ಅಂತ. ಇದೊಂದು ರೀತಿಯಲ್ಲಿ ನನ್ನ ಕನಸು ನನಸಾದಂತಿದೆ. ನಾನು ನೋಡಿದಂತಹ ಒಂದು ಉತ್ತಮ ಆಭರಣಗಳ ಪ್ರದರ್ಶನವಿದು. ನಾನು ಬ್ರಾಂಡ್ ಅಂಬಾಸಿಡರ್ ಆಗಿರುವುದು ಒಳ್ಳೆಯ ಅನುಭವ ನೀಡಿದೆ. ಹೊಸ ಹೊಸ ಡಿಸೈನ್ ಮತ್ತು ಒಳ್ಳೆಯ ಕ್ವಾಲಿಟಿಯೊಂದಿಗೆ ಇವರು ಬೆಳೆಯುತ್ತಲೇ ಇರುತ್ತಾರೆ ಎಂಬ ನಂಬಿಕೆ ನನಗಿದೆ’ ಎಂದರು.

ಸೆಲೆಬ್ರಿಟಿಗಳೆ ಆಗಲಿ ಅಥವಾ ಜನಸಾಮಾನ್ಯರೇ ಆಗಲಿ ಅವರ ಪ್ರೀತಿಪಾತ್ರರಿಂದ ದೊರೆಯುವ ಉಡುಗೊರೆಗಳು ತುಂಬಾನೇ ಸ್ಪೆಷಲ್ ಆಗಿರುತ್ತದೆ. ಆ ಉಡುಗೊರೆಯ ಮೊತ್ತ ಚಿಕ್ಕದಿರಲಿ, ದೊಡ್ಡದಿರಲಿ ಆದರೆ ಪ್ರೀತಿಯಿಂದ ನೀಡುತ್ತಿದ್ದಾರೆ ಎಂಬುದೇ ಅತಿ ಮುಖ್ಯ. ಅವರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಇಂಥದ್ದೊಂದು ಮರೆಯಲಾಗದ ಉಡುಗೊರೆಯ ಬಗ್ಗೆ ಮೇಘನಾ ರಾಜ್ ಅವರು ಅದೇ ಚಿನ್ನಾಭರಣಗಳ ಪ್ರದರ್ಶನದಲ್ಲಿ ಭಾವುಕರಾಗಿ ಹೇಳಿಕೊಂಡಿದ್ದಾರೆ.

‘ನಿಮ್ಮ ಜುವೆಲ್ಸ್ ಗಳ ಪೈಕಿ ನಿಮಗೆ ಸದಾ ಕಾಲ ನೆನಪಲ್ಲಿರುವ ಕಾಸ್ಟ್ಲಿ ಗಿಫ್ಟ್ ಯಾವುದು?’ ಎಂದು ಸಂದರ್ಶನಗಾರರೊಬ್ಬರು ಪ್ರಶ್ನಿಸುತ್ತಾರೆ. ಅದಕ್ಕೆ ಮೇಘನಾ ರಾಜ್ ಅವರು ‘ಉಡುಗೊರೆ ಯಾವುದೇ ಇರಲಿ, ಪ್ರೀತಿಯಿಂದ ಕೊಡುವ ಅದರ ಮೌಲ್ಯ ತುಂಬಾನೆ ಜಾಸ್ತಿ. ನನಗೆ ನನ್ನ ಪತಿ ಚಿರು ಅವರು ಮದುವೆಯ ದಿನದ ಮೊದಲ ವರ್ಷದ ಸಂಭ್ರಮದಂದು ನೀಡಿದ ಡೈಮಂಡ್ ಹಾರವು ಎಂದಿಗೂ ಮರೆಯಲಾರದ್ದು. ಈ ಡೈಮಂಡ್ ಹಾರದ ಬೆಲೆ ಸುಮಾರು ಎರಡೂವರೆ ಕೋಟಿ. ಇಂದಿಗೂ ಅದು ತುಂಬಾನೇ ಸ್ಪೆಷಲ್. ಆ ನೆಕ್ಲೆಸ್ ಅನ್ನು ನೋಡಿದಾಗಲೆಲ್ಲ ಚಿರು ಅವರು ಪ್ರೀತಿಯಿಂದ ನೀಡಿದ ಸನ್ನಿವೇಶಗಳು ಕಣ್ಣೆದುರಿಗೆ ಬರುತ್ತವೆ’ ಎಂದು ಮುಕ್ತವಾಗಿ ಮಾತನಾಡಿದ್ದಾರೆ.

Leave a Comment

error: Content is protected !!