ಅಪ್ಪು ಜೊತೆಗೆ ನಟಿಸುವ ಅವಕಾಶ ಇದ್ದರೂ ಕೂಡ ಮೇಘನಾ ರಾಜ್ ಅವರಿಗೆ ತಂದೆ ಸುಂದರ್ ರಾಜ್ ಬೇಡ ಎಂದಿದ್ದೇಕ್ಕೆ ಗೊತ್ತಾ?

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಶ್ರೇಷ್ಠ ಕಲಾವಿದ ಹಾಗೂ ವ್ಯಕ್ತಿತ್ವಗಳಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಪುನೀತ್ ರಾಜಕುಮಾರ್ ಅವರು ಮಾಡಿದ ಪಾತ್ರಗಳಿಲ್ಲ ನಿರ್ವಹಿಸದ ಜವಾಬ್ದಾರಿಗಳಿಲ್ಲ ಎಂದು ಹೇಳಬಹುದಾಗಿದೆ. ಇನ್ನು ಅವರು ಮಾಡಿರುವಂತಹ ಸಾಮಾಜಿಕ ಕಾರ್ಯಗಳ ಕುರಿತಂತೆ ಅವರ ಮರಣ ನಂತರ ಪ್ರತಿಯೊಬ್ಬರಿಗೂ ಕೂಡ ತಿಳಿದು ಬಂದಿದೆ.

ಇನ್ನು ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕುರಿತಂತೆ ಯಾರಿಗೂ ಕೂಡ ಗೊತ್ತಿರದ ಒಂದು ವಿಷಯ ತಿಳಿದು ಬಂದಿದ್ದು ಪ್ರತಿಯೊಬ್ಬರೂ ಕೂಡ ಆಶ್ಚರ್ಯ ವ್ಯಕ್ತಪಡಿಸುವಂತೆ ಆಗಿದೆ. ಹೌದು ಗೆಳೆಯರೆ ಅದು ನಟಿ ಮೇಘನಾ ರಾಜ್ ಅವರ ವಿಚಾರದ ಕುರಿತಂತೆ.

ನಟಿ ಮೇಘನಾ ರಾಜ್ ಅವರ ತಂದೆ ನಟ ಸುಂದರ್ ರಾಜ್ ಅವರು ಕನ್ನಡ ಚಿತ್ರರಂಗ ಕಂಡಂತಹ ಹೆಸರಾಂತ ಪೋಷಕ ನಟರಲ್ಲಿ ಒಬ್ಬರಾಗಿದ್ದಾರೆ. ಹೀಗಾಗಿ ಮೊದಲಿನಿಂದಲೂ ಕೂಡ ಕನ್ನಡ ಚಿತ್ರರಂಗವನ್ನು ನಟಿ ಮೇಘನಾ ರಾಜ್ ಅವರು ಚೆನ್ನಾಗಿ ಬಲ್ಲವರು. ಒಂದು ಬಾರಿ ಚಿಕ್ಕವರಿರಬೇಕಾದರೆ ಅಣ್ಣ ಅವರ ಮನೆಗೆ ಹೋಗಿದ್ದ ಸಂದರ್ಭದಲ್ಲಿ ಅಣ್ಣಾವ್ರ ಮನೆಯಲ್ಲಿದ್ದವರು ಹಾಗೂ ಅಣ್ಣಾವ್ರು ಸೇರಿದಂತೆ ಎಲ್ಲರೂ ಕೂಡ ಅಪ್ಪು ಜೊತೆಗೆ ಸಿನಿಮಾದ ಮೂಲಕ ಈಕೆಯನ್ನು ಪರಿಚಯಿಸಬೇಕು ಎಂಬುವ ಮಾತನ್ನು ಆಡಿದ್ದರಂತೆ.

ಆದರೆ ಸುಂದರ್ ರಾಜ್ ಅವರು ಮನೆಗೆ ಬಂದ ನಂತರ ಮೇಘನಾ ರಾಜ್ ಅವರು ಇನ್ನಷ್ಟು ಚೆನ್ನಾಗಿ ಓದಲಿ ಎಂಬ ಆಶಯದಿಂದ ಸಿನಿಮಾ ರಂಗಕ್ಕೆ ಹೋಗಲು ಬಿಡಲಿಲ್ಲ ಇಲ್ಲದಿದ್ದರೆ ಪುನೀತ್ ರಾಜಕುಮಾರ್ ಅವರ ಮೊದಲ ಸಿನಿಮಾದಲ್ಲಿ ಮೇಘನಾ ರಾಜ್ ಅವರೇ ನಾಯಕಿಯಾಗಿ ಲಾಂಚ್ ಆಗಬೇಕಾಗಿತ್ತು ಎಂಬುದು ಈಗ ಸಾಕಷ್ಟು ಬಲವಾಗಿ ಓಡಾಡುತ್ತಿರುವ ಸುದ್ದಿಯಾಗಿದೆ.

Leave a Comment

error: Content is protected !!