ಪವಿತ್ರ ಲೋಕೇಶ್ ಹೆಗಲ ಮೇಲೆ ಕೈ ಹಾಕಿ ರಾತ್ರಿಯಿಂದ ತುಂಬಾ ಖುಷಿಯಾಗ್ತಿದೆ ಎಂದ ನರೇಶ್! ವಿಡಿಯೋ ವೈರಲ್

ಕೆಲವು ತಿಂಗಳುಗಳ ಹಿಂದೆ ಹೋದರೆ ನಿಮಗೆ ಕನ್ನಡ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಪೋಷಕ ನಟಿಯಾಗಿ ತಮ್ಮದೇ ಆದಂತಹ ಚಾಪನ್ನು ಮೂಡಿಸಿರುವ ನಟಿ ಪವಿತ್ರ ಲೋಕೇಶ್ ಅವರು ಹಾಗೂ ತೆಲುಗಿನ ಖ್ಯಾತ ನಟ ನರೇಶ್ ಅವರ ಬೇಡದ ಸಂಬಂಧದ ಕುರಿತಂತೆ ಹಲವಾರು ಚರ್ಚೆಗಳು ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆ ಆಗಿದ್ದವು.

ಇವರಿಬ್ಬರೂ ಬೇಡದ ಸಂಬಂಧವನ್ನು ಹೊಂದಿದ್ದಾರೆ ಎಂಬುದಾಗಿ ನರೇಶ್ ಅವರ ಮೂರನೇ ಪತ್ನಿ ಆಗಿರುವ ಕನ್ನಡತಿಯೇ ಆಗಿರುವ ರಮ್ಯಾ ರಘುಪತಿ ಅವರು ಆರೋಪಿಸಿದ್ದರು. ನಂತರ ಇವರಿಬ್ಬರೂ ಮೈಸೂರಿನಲ್ಲಿ ರಾತ್ರಿ ಒಂದೇ ಹೋಟೆಲ್ ರೂಮಿನಲ್ಲಿ ತಂಗಿದ್ದನ್ನು ಕೂಡ ರೆಡ್ ಹ್ಯಾಂಡ್ ಆಗಿ ರಮ್ಯಾ ರಘುಪತಿ ಅವರು ಮಾಧ್ಯಮಗಳ ಸಮ್ಮುಖದಲ್ಲಿಯೇ ಹಿಡಿದಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ನ್ಯೂಸ್ ವಾಹಿನಿಗಳಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಅದಾದ ನಂತರ ಇಬ್ಬರು ಎಲ್ಲೂ ಕೂಡ ಹೆಚ್ಚು ಮಾಧ್ಯಮಗಳ ಎದುರಿಗೆ ಕಾಣಿಸಿಕೊಂಡಿರಲಿಲ್ಲ.

ಆದರೆ ಈಗ ಮತ್ತೆ ಇಬ್ಬರು ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಹೌದು ಮಿತ್ರರೇ ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಇಬ್ಬರು ಕೂಡ ಇತ್ತೀಚಿಗಷ್ಟೇ ಹೆಗಲ ಮೇಲೆ ಕೈ ಹಾಕಿಕೊಂಡು ಸಲುವೆಯಿಂದ ರಾತ್ರಿಯಿಂದ ತುಂಬಾ ಖುಷಿಯಾಗ್ತಿದೆ ಎಂಬುದಾಗಿ ಮಾತನಾಡುವ ಮೂಲಕ ಎಲ್ಲರೂ ಇರಿಸು ಮುರಿಸಾಗುವ ಹಾಗೆ ಮಾಡಿಕೊಂಡಿದ್ದಾರೆ. ರಾತ್ರಿಯಿಂದ ಖುಷಿಯಿಂದ ಮಾತ್ರಕ್ಕೆ ನೀವು ತಪ್ಪಾಗಿ ಭಾವಿಸುವ ಅಗತ್ಯವಿಲ್ಲ ಆದರೆ ಸದ್ಯಕ್ಕೆ ಇಲ್ಲಿ ಮಾತ್ರ ಅರ್ಥ ಬೇರೇನೆ ಇದೆ. ಹಾಗಿದ್ದರೆ ಅದೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇತ್ತೀಚಿಗಷ್ಟೇ ಪವಿತ್ರ ಲೋಕೇಶ್ ಹಾಗೂ ನರೇಶ್ ಇಬ್ಬರೂ ಕೂಡ ತೆಲುಗು ಚಿತ್ರರಂಗದ ಖ್ಯಾತ ಕಾಮಿಡಿ ನಟ ಆಗಿರುವ ಆಲಿ ನಿರ್ಮಾಣದಲ್ಲಿ ಮೂಡಿ ಬಂದಿರುವ ಅಂದರು ಬಾಗುಂಡಾಲಿ ಅಂದುಲೋ ನಾನುಂಡಾಲಿ ಎನ್ನುವ ಸಿನಿಮಾದಲ್ಲಿ ಗಂಡ ಹೆಂಡತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಈ ಸಿನಿಮಾ ಆಹಾ ಡಿಜಿಟಲ್ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿದೆ. ರಾತ್ರಿಯಿಂದ ಎಲ್ಲರೂ ಕೂಡ ಮೆಸೇಜ್ ಹಾಗೂ ಕರೆಗಳನ್ನು ಮಾಡಿ ಸಿನಿಮಾ ಚೆನ್ನಾಗಿದೆ ಎಂಬುದಾಗಿ ಇಬ್ಬರಿಗೂ ಕೂಡ ಕಾಂಪ್ಲಿಮೆಂಟ್ ಅನ್ನು ನೀಡುತ್ತಿದ್ದಾರೆ ಇದಕ್ಕಾಗಿ ರಾತ್ರಿಯಿಂದ ಖುಷಿಯಿಂದ ಇದ್ದೇವೆ ಎಂಬುದಾಗಿ ಹೇಳುತ್ತಿದ್ದಾರೆ. ಆದರೆ ಇವರು ಕ್ಯಾಮೆರಾ ಕಣ್ಣಿನಲ್ಲಿ ಸಾಕಷ್ಟು ಆತ್ಮೀಯ ರಾಗಿದದ್ದು ಕೊಂಚಮಟ್ಟಿಗೆ ಇವರಿಬ್ಬರ ನಡುವೆ ಏನೋ ಸಂಬಂಧ ಇದೆ ಎನ್ನುವ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

Leave a Comment

error: Content is protected !!