ಇನ್ಮೇಲೆ ಕಿಸ್ಸಿಂಗ್ ಮತ್ತು ಬೆಡ್ ರೂಂ ಸೀನ್ ಗಳಲ್ಲಿ ನಟಿಸಲ್ಲ ಎಂದು ಹೇಳಿದ ನಯನತಾರಾ ಕಾರಣವೇನು ಗೊತ್ತಾ

ಲೇಡೀಸ್ ಸೂಪರ್ ಸ್ಟಾರ್ ಮಾಡಿದ ನಿರ್ಧಾರ ಕೇಳಿ ಕಳವಳಗೊಂಡ ಕಾಲಿವುಡ್! ತಮಿಳು ಸಿನಿ ರಂಗದಲ್ಲಿ ನಟಿ ನಯನತಾರ ಅವರದು ಬಹಳ ದೊಡ್ಡ ಹೆಸರು. ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿರುವ ನಯನತಾರಾ ಇತ್ತೀಚಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೇ ತಿಂಗಳ ಜೂನ್ 9ರಂದು ನಯನತಾರಾ ಅವರು ತಾವು ಬಹುಕಾಲದಿಂದ ಪ್ರೀತಿಸುತ್ತಿದ್ದ, ಚಲನಚಿತ್ರ ನಿರ್ದೇಶಕ ವಿಘ್ನೇಶ್ ಶಿವನ್ ಅವರನ್ನು ಮದುವೆಯಾದರು. ಮಹಾಬಲಿಪುರಂನಲ್ಲಿ ಬಹಳ ಅದ್ದೂರಿಯಾಗಿ ನಯನತಾರಾ ಹಾಗೂ ವಿಘ್ನೇಶ್ ಶಿವನ ಅವರ ವಿವಾಹ ಮಹೋತ್ಸವ ಜರುಗಿತ್ತು. ಇನ್ನು ಈ ಮದುವೆಗೆ ಸ್ಟಾರ್ ಬಳಗವೇ ಆಗಮಿಸಿತ್ತು. ಬೋನಿ ಕಪೂರ್, ಶಾರುಖ್ ಖಾನ್ ಮೊದಲಾದವರು ಆಗಮಿಸಿದ್ದು ಬಹಳ ದೊಡ್ಡಮಟ್ಟದಲ್ಲಿ ಸುದ್ದಿಯಾಗಿತ್ತು.

ಮದುವೆಯಾಗಿರುವ ಗುಡ್ ನ್ಯೂಸ್ ಕೊಟ್ಟಿರುವ ನಯನತಾರ ಇದರ ಹಿನ್ನೆಲೆಯಲ್ಲೇ ಇನ್ನೊಂದು ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ. ಅದೇನು ಗೊತ್ತಾ? ಲೇಡಿ ಸೂಪರ್ ಸ್ಟಾರ್ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ತಮ್ಮ ಪ್ರೀತಿಗೆ ಮದುವೆಯ ಬಂಧವನ್ನ ಹೆಣೆದಿದ್ದಾರೆ. ಹೀಗಾಗಿ ನಟಿ ನಯನತಾರಾ ಅವರ ವೈಯಕ್ತಿಕ ಜೀವನದಲ್ಲಿ ಬಹು ದೊಡ್ಡ ಬದಲಾವಣೆಯಾಗಿದೆ. ಆದರೆ ಅವರ ವೃತ್ತಿಜೀವನದಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ ಎಂದುಕೊಂಡವರಿಗೆ, ಒಂದು ಅಚ್ಚರಿ ಕಾದಿದೆ. ನಯನತಾರಾ ಅವರ ವೈಯಕ್ತಿಕ ಜೀವನ ಜೊತೆ ವೃತ್ತಿ ಜೀವನವು ಬದಲಾಗಲಿದೆಯಂತೆ.

ನಟಿ ನಯನತಾರಾ ಎಂತಹ ಅದ್ಭುತ ಅಭಿನೇತ್ರಿ ಎನ್ನುವುದು ಎಲ್ಲರಿಗೂ ಗೊತ್ತು. ತಾನು ಆಯ್ದುಕೊಂಡ ಎಲ್ಲಾ ಪಾತ್ರಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿಭಾಯಿಸಿದ ಕೀರ್ತಿ ಇವರದ್ದು. ರೋಮ್ಯಾಂಟಿಕ್ ಸೀನ್ ಆಗಿರಲಿ, ಎಮೋಷನಲ್ ಸೀನ್ ಆಗಿರಲಿ, ಅಥವಾ ಅಂಗ್ರಿ ವುಮನ್ ಆಗಿಯಾಗಲಿ, ನಯನತಾರಾ ಮಾತ್ರ ಪರ್ಫೆಕ್ಟ್ ನಟಿ ಎನಿಸಿಕೊಂಡಿದ್ದಾರೆ. ಆದ್ರೆ ಇದೀಗ ಅವರು ಮದುವೆಯಾಗಿದ್ದಾರೆ. ಹಾಗಾಗಿ ಅವರು ಇನ್ನು ಮುಂದೆ ಸಿನಿಮಾಗಳಲ್ಲಿ ತನ್ನ ಜೊತೆ ಅಭಿನಯಿಸುವ ಪುರುಷನೊಂದಿಗೆ ಯಾವುದೇ ರೊಮ್ಯಾಂಟಿಕ್ ಸೀನ್ ಗಳಲ್ಲಿ ಕಾಣಿಸುವುದಿಲ್ಲವಂತೆ.

ಹೌದು ನಯನತಾರಾ ಅವರು ಇನ್ನು ಮುಂದೆ ಇಂಟಿಮೇಟ್ ದೃಶ್ಯಗಳನ್ನಾಗಲಿ ಕಿಸ್ಸಿಂಗ್ ಸನ್ನಿವೇಶಗಳನ್ನಾಗಲಿ ಮಾಡುವುದಿಲ್ಲವಂತೆ. ಇದು ಅವರ ಅಭಿಮಾನಿಗಳಲ್ಲಿ ಕೊಂಚ ಬೇಸರ ಮೂಡಿಸಿದೆ. ಆದರೆ ಈ ಬಗ್ಗೆ ಅಧಿಕೃತವಾಗಿ ನಯನತಾರ ಹೇಳಿಕೊಂಡಿಲ್ಲ. ಹೀಗಂತ ಬಾಲಿವುಡ್ ನ ಹಂಗಾಮ ವರದಿ ಮಾಡಿದೆ. ಮದುವೆಯಾದ ಮೇಲೆ ಹಲವು ನಟ-ನಟಿಯರ ವೃತ್ತಿಜೀವನದಲ್ಲಿ ಬದಲಾವಣೆಗಳು ಆಗುವುದು ಸಹಜ. ಅಲ್ಲದೆ ನಯನತಾರಾ ಹೀಗೆ ನಿರ್ಧಾರ ಮಾಡಿದರೆ ಅದು ಅವರ ವೈಯಕ್ತಿಕ ವಿಚಾರ. ಹಾಗಾಗಿ ಅವರಿಗೆ ಬೇಕಾದ ನಿರ್ಧಾರವನ್ನು ತೆಗೆದುಕೊಳ್ಳುವ ರೈಟ್ಸ್ ಅವರಿಗೆ ಇದೆ.

ಆದರೆ ಇಂತಹ ಸನ್ನಿವೇಶಗಳಲ್ಲಿ ನಟಿಸುವುದಿಲ್ಲ ಎಂದು ನಯನತಾರಾ ಅವರ ಮುಂದಿನ ವೃತ್ತಿಜೀವನದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದೇ ದೊಡ್ಡ ಪ್ರಶ್ನೆ. ಯಾಕೆಂದರೆ ಯಾವುದೇ ರೋಮ್ಯಾಂಟಿಕ್ ಸನ್ನಿವೇಶಗಳಲ್ಲಿಯೂ ನಯನತಾರ ಅಭಿನಯಿಸದೆ ಇದ್ದರೆ ಅವರಿಗೆ ತಕ್ಕ ಹಾಗೆ ಕಥೆಯನ್ನು ನಿರ್ದೇಶಕರು ಸಿದ್ಧಪಡಿಸಬೇಕು. ಇದು ಎಲ್ಲಾ ಸಮಯದಲ್ಲಿ ಸಾಧ್ಯವಾಗುವುದಿಲ್ಲ. ಹಾಗಾಗಿ ಲೇಡಿ ಸೂಪರ್ ಸ್ಟಾರ್ ನಿರ್ಧಾರ ಅವರ ವೃತ್ತಿ ಜೀವನಕ್ಕೆ ಏನಾದರೂ ಹಾನಿ ಉಂಟುಮಾಡುತ್ತದೆಯೇ ಎನ್ನೋದು ಅವರ ಅಭಿಮಾನಿಗಳ ಆತಂಕ.

Leave a Comment

error: Content is protected !!