ಪೂಜಾ ಹೆಗ್ಡೆ ಸೊಂಟ ಬಳುಕಿಸಿರುವ ವಿಡಿಯೋ ವೈರಲ್. ವೀಡಿಯೋ ನೋಡಿ ಬಾಯ್ಬಿಟ್ಟ ಜನ.

Pooja Hegde: ನಮ್ಮ ಕರಾವಳಿ ಮೂಲದಿಂದ ಪರಭಾಷೆಗಳಿಗೆ ಹೋಗಿ ಅಲ್ಲಿ ನಟಿಸಿ ಸಾಕಷ್ಟು ಜನಪ್ರಿಯ ರಾಗಿರುವ ನಟ ನಟಿಯರು ನಿಮಗೆ ಹಲವಾರು ಜನ ಸಿಗಬಹುದು. ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವ ಪೂಜಾ ಹೆಗ್ಡೆ ಕೂಡ ಒಬ್ರು. ಮಂಗಳೂರು ಮೂಲದವರಾಗಿರುವ ಇವರು ಈಗ ಬಾಲಿವುಡ್ ಹಾಗೂ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಬೇಡಿಕೆಯನ್ನು (Most Demanding ) ಹೊಂದಿದ್ದಾರೆ ಎಂದರೆ ತಪ್ಪಾಗಲಾರದು. ಹೃತಿಕ್ ರೋಷನ್ ನಟನೆಯ ಮೊಹೆಂಜೋದಾರೋ ಸಿನಿಮಾದ ಮೂಲಕ ನಾಯಕನಟಿಯಾಗಿ ಹಿಂದಿ ಸಿನಿಮಾರಂಗದಿಂದ ತಮ್ಮ ಸಿನಿಮಾ ಜರ್ನಿಯನ್ನು ಇವರು ಪ್ರಾರಂಭಿಸುತ್ತಾರೆ.

ಆದರೆ ನಿಜವಾಗಿ ಅವರ ಅದೃಷ್ಟ ಖುಲಾಯಿಸೋದು ತೆಲುಗು ಚಿತ್ರರಂಗದಲ್ಲಿ ಅನ್ನಬಹುದಾಗಿದೆ. ಹೌದು ಗೆಳೆಯರೇ ತೆಲುಗು ಚಿತ್ರರಂಗದಲ್ಲಿ ಸತ್ಯವಾಗಿ ಸೂಪರ್ ಹಿಟ್ ಸಿನಿಮಾಗಳನ್ನು ಪೂಜಾ ಹೆಗಡೆ ಇದುವರೆಗೂ ನೀಡಿದ್ದು ಅದರಲ್ಲೂ ವಿಶೇಷವಾಗಿ ಕೆಲವು ವರ್ಷಗಳ ಹಿಂದಷ್ಟೇ ಬಿಡುಗಡೆ (Release ) ಆಗಿರುವ ಅಲ್ಲು ಅರ್ಜುನ್ ನಟನೆಯ ಅಲಾ ವೈಕುಂಠಂಪುರಂಲೋ ಸಿನಿಮಾ ಅಂತೂ ಸೂಪರ್ ಹಿಟ್ ಆಗಿದೆ. ಇದೇ ರೀತಿ ಹತ್ತು ಹಲವಾರು ಸಿನಿಮಾಗಳನ್ನು ತೆಲುಗು ಹಿಂದಿ ಹಾಗೂ ತಮಿಳು ಸಿನಿಮಾರಂಗಗಳಲ್ಲಿ ಪೂಜಾ ನೀಡಿದ್ದಾರೆ.

ಇನ್ನು ಇತ್ತೀಚಿನ ವರ್ಷಗಳಲ್ಲಿ ಕೊಂಚಮಟ್ಟಿಗೆ ಯಶಸ್ವಿ ಸಿನಿಮಾಗಳನ್ನು ನೀಡುವಲ್ಲಿ ಪೂಜಾ ಹೆಗ್ಡೆ ವಿಫಲರಾಗಿದ್ದಾರೆ ಎಂದು ಹೇಳಬಹುದಾಗಿದೆ. ಸದ್ಯಕ್ಕೆ ಬಾಲಿವುಡ್ ನಲ್ಲಿ ಸಲ್ಮಾನ್ ಖಾನ್ ಅವರ ಕಿಸಿ ಕಾ ಭಾಯ್ ಕಿಸಿ ಕಾ ಜಾನ್ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದು ಇವರಿಬ್ಬರ ನಡುವೆ ಏನೋ ನಡೆಯುತ್ತಿದೆ ಎಂಬುದಾಗಿ ಕೂಡ ಗುಸು-ಗುಸು (Gossips ) ಸುದ್ದಿಗಳು ಹರಿದಾಡುತ್ತಿವೆ.

ಇದನೊಮ್ಮೆ ಓದಿ..ಸಂಗಾತಿ ಬೇಕನಿಸುತ್ತೆ ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ ಖ್ಯಾತ ನಟಿ.

ಇನ್ನು ಪೂಜಾ ಹೆಗ್ಡೆ ಯಾವುದು ವೇದಿಕೆ ಮೇಲೆ ಕಾರ್ಯಕ್ರಮಕ್ಕಾಗಿ ಅಥವಾ ಸಿನಿಮಾದ ರಿಹರ್ಸೆಲ್ (Rehearsal ) ಗಾಗಿ ವೇದಿಕೆ ಮೇಲೆ ಡಾನ್ಸ್ ಪ್ರಾಕ್ಟೀಸ್ ( Practice ) ಮಾಡುತ್ತಿರುವಂತಹ ವಿಡಿಯೋ ಈಗ ವೈರಲ್ ಆಗಿದ್ದು ವಿಡಿಯೋದಲ್ಲಿ ಅವರು ಕಾಣಿಸಿಕೊಂಡಿರುವ ರೀತಿಗೆ ವೀಕ್ಷಕರು ನಿಬ್ಬೆರಗಾಗಿದ್ದಾರೆ ಎಂದು ಹೇಳಬಹುದಾಗಿದೆ. ನೀವು ಕೂಡ ಈ ವಿಡಿಯೋವನ್ನು ನೋಡಬಹುದಾಗಿದ್ದು ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡಿ.

Leave a Comment

error: Content is protected !!