Prabhas: ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರಂತೆ ಪ್ರಭಾಸ್ ಹಾಗೂ ಕೃತಿ ಸಾನನ್. ಯಾವಾಗ ಅಂತೆ ಗೊತ್ತಾ?

Prabhas Kriti Sanon ತೆಲುಗು ಚಿತ್ರರಂಗದ ರೆಬೆಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್(Darling Prabhas) ಅವರ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರಬಹುದು. ಬಾಹುಬಲಿ ಸರಣಿ ಸಿನಿಮಾಗಳ ನಂತರ ಪ್ರಭಾಸ್ ಅವರ ಮಾರುಕಟ್ಟೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹರಡಿದೆ. ಆರಂಭದಲ್ಲಿ ಇವರು ಅನುಷ್ಕಾ ಶೆಟ್ಟಿ(Anushka Shetty) ಅವರನ್ನು ಮದುವೆಯಾಗುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು ಆದರೆ ಈಗ ಅವರ ಹೆಸರು ಬಾಲಿವುಡ್ ನಟಿ ಕೃತಿ ಸನಾನ್(Kriti Sanon) ಅವರ ಜೊತೆಗೆ ಕೇಳಿ ಬರುತ್ತಿದೆ.

ಇದಕ್ಕೆ ಮತ್ತೊಂದು ಸೇರ್ಪಡೆ ಎನ್ನುವಂತೆ, ಡಾರ್ಲಿಂಗ್ ಪ್ರಭಾಸ್ ಹಾಗೂ ನಟಿ ಕೃತಿ ಸನೋನ್ ಇಬ್ಬರೂ ಕೂಡ ಮಾಲ್ಡಿವ್(Maldives) ದೀಪದಲ್ಲಿ ಮುಂದಿನ ವಾರದಲ್ಲಿ ನಿಶ್ಚಿತಾರ್ಥವನ್ನು ಮಾಡಿಕೊಳ್ಳಲಿದ್ದಾರೆ ಎನ್ನುವ ಸುದ್ದಿಗಳು ಓಡಾಡುತ್ತಿವೆ. ಈ ಸುದ್ದಿಗೆ ಕಾರಣ ಆಗಿರೋದು ಬಾಲಿವುಡ್ ಕ್ರಿಟಿಕ್ ಆಗಿರುವ ಉಮೈರ್ ಸಂಧು ಎನ್ನುವ ವ್ಯಕ್ತಿ. ಈ ವಿಚಾರವನ್ನು ಆತ ಮೊದಲ ಬಾರಿಗೆ ತನ್ನ ಟ್ವಿಟರ್ ಮುಖಾಂತರ ಜಗಜ್ಜಾಹೀರು ಮಾಡಿದ್ದು ಇದು ಎಲ್ಲಾ ಕಡೆ ವೈರಲಾಗುತ್ತಿದೆ. ಹಲವಾರು ಜನರು ಇದನ್ನು ಸುಳ್ಳು ಎಂದು ಆಪಾದನೆ ಮಾಡಿದ್ದು ಇಂತಹ ಗಾಳಿ ಸುದ್ದಿಯನ್ನು ಹರಡಬೇಡಿ ಎಂಬುದಾಗಿ ಎಚ್ಚರಿಕೆಯನ್ನು ನೀಡಿದ್ದಾರೆ.

Prabhas & Kriti Sanon

ಉಮೈರ್ ಸಂಧು(Umair Sandhurst) ಈಗಾಗಲೇ ಹಲವಾರು ಬಾರಿ ಬೇರೆ ಬೇರೆ ಸೆಲೆಬ್ರಿಟಿಗಳ ಬಗ್ಗೆ ತನಗೆ ತೋಚಿದಂತೆ ಟ್ವೀಟ್ ಮಾಡುವ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾನೆ. ಈತನ ಮೇಲೆ ಪೊಲೀಸ್ ಪ್ರಕರಣವೂ ಕೂಡ ದಾಖಲಾಗಿದ್ದು ಈ ಬಾರಿ ಪ್ರಭಾಸ್(Prabhas) ಹಾಗೂ ಕೃತಿ ಜೋಡಿಗಳ ಎಂಗೇಜ್ಮೆಂಟ್ ನಡೆಯಲಿದೆ ಎನ್ನುವುದಾಗಿ ಸುದ್ದಿಯನ್ನು ಬಿತ್ತರಿಸುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಸ್ ಅಭಿಮಾನಿಗಳು ಈತನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಸದ್ಯಕ್ಕೆ ಪ್ರಭಾಸ್ ಹಾಗೂ ಕೃತಿ ಸನೋನ್ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಆದಿಪುರುಷ್(Adipurush) ಸಿನಿಮಾ ಪಂಚಭಾಷೆಗಳಲ್ಲಿ ನಿರ್ಮಾಣ ಆಗಲಿ ಎಂದು ಸದ್ಯಕ್ಕೆ ಇದರ ಗ್ರಾಫಿಕ್ಸ್ ಹಾಗೂ ವಿ ಎಫ್ ಎಕ್ಸ್(Vfx) ಕೆಲಸಗಳು ಬರದಿಂದ ಸಾಗುತ್ತಿದ್ದು ವರ್ಷದ ಮಧ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಈ ರೀತಿಯ ಇನ್ನಷ್ಟು ಹೆಚ್ಚಿನ ಮಾಹಿತಿಗಳು ಆಗಿ ತಪ್ಪದೇ ನಮ್ಮ ಲೇಖನಿಯನ್ನು ಎಲ್ಲರೊಂದಿಗೆ ಶೇರ್ ಮಾಡಿ.

Leave a Comment

error: Content is protected !!