Puneeth Rajkumar: ಪುನೀತ್ ರಾಜಕುಮಾರ್ ರಸ್ತೆ ಬಿಡುಗಡೆಯ ಬ್ಯಾನರ್ ನಲ್ಲಿ ಅಪ್ಪುಗೆ ಅವಮಾನ ಮಾಡಿದ ಸರ್ಕಾರ?

Puneeth Rajkumar Road ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್(Power Star Puneeth Rajkumar) ರವರ ಹೆಸರಿನಲ್ಲಿ ಈಗಾಗಲೇ ಹಲವಾರು ಹೋಟೆಲ್ ಸರ್ಕಲ್ ಸೇರಿದಂತೆ ಹಲವಾರು ಸ್ಥಳಗಳಿಗೆ ಅವರ ಹೆಸರನ್ನು ನೀಡಲಾಗಿದೆ. ಅಪ್ಪು(Appu) ತಮ್ಮ ಜೀವಿತಾವಧಿಯಲ್ಲಿ ಮಾಡಿದಂತಹ ಕೆಲಸಗಳಿಂದಾಗಿ ಈಗ ಅವರು ಜನರ ದೃಷ್ಟಿಯಲ್ಲಿ ದೇವರಿಗಿಂತ ಹೆಚ್ಚಾಗಿದ್ದಾರೆ. ಹೀಗಾಗಿಯೇ ಅವರು ಸಿನಿಮಾ ಹಾಗೂ ಜನಸೇವೆ ಕ್ಷೇತ್ರದಲ್ಲಿ ಮಾಡಿದಂತಹ ಮಹತ್ತರವಾದ ಸಾಧನೆಯನ್ನು ಗುರುತಿಸಿ ಕರ್ನಾಟಕ ರಾಜ್ಯದ ಅತ್ಯಂತ ಉನ್ನತ ಪುರಸ್ಕಾರ ಆಗಿರುವ ಕರ್ನಾಟಕ ರತ್ನ(Karnataka Ratna) ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡಲಾಗಿದೆ.

ಕೇವಲ ಇಷ್ಟು ಮಾತ್ರವಲ್ಲದೆ ಹಲವಾರು ಸಂಘ ಸಂಸ್ಥೆಗಳು ಕೂಡ ಮರಣೋತ್ತರ ಸನ್ಮಾನ ಪ್ರಶಸ್ತಿಯನ್ನು ನೀಡಿವೆ. ಡಾಕ್ಟರೇಟ್ ಪದವಿಯನ್ನು ಕೂಡ ಅವರಿಗೆ ಪುರಸ್ಕರಿಸಿವೆ. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಮತ್ತೊಂದು ಮಹತ್ವವಾದ ನಿರ್ಧಾರವನ್ನು ಕೈಗೊಂಡಿದ್ದು ಫೆಬ್ರವರಿ 7ರಂದು ಲೋಕಾರ್ಪಣೆ ಕೂಡ ಮಾಡಿ ಆಗಿದೆ. ಹೌದು ಗೆಳೆಯರೇ ಅದೇ ಪುನೀತ್ ರಾಜಕುಮಾರ್ ರಸ್ತೆಯ(Puneeth Rajkumar Road) ಉದ್ಘಾಟನೆ.

Puneeth Rajkumar Road

ಹೌದು ಗೆಳೆಯರೇ, ಮೈಸೂರು ರೋಡ್ ನಿಂದ ಹಿಡಿದು ಬನ್ನೇರುಘಟ್ಟ ರಸ್ತೆಯವರೆಗೂ ಇರುವಂತಹ ರಸ್ತೆಯನ್ನೇ ರಾಜ್ಯ ಸರ್ಕಾರ ಈಗ ಡಾ ಪುನೀತ್ ರಾಜಕುಮಾರ್ ರಸ್ತೆ ಎಂಬುದಾಗಿ ಮರುನಾಮಕರಣ ಮಾಡಿ ಪುನೀತ್ ರಾಜಕುಮಾರ್ ಅವರ ಸೇವೆಯನ್ನು ಅರ್ಥಪೂರ್ಣವಾಗಿ ಗೌರವಿಸಿದೆ. ಇದು ಒಟ್ಟಾರೆಯಾಗಿ 12 ಕಿಲೋಮೀಟರ್ ಉದ್ದವನ್ನು ಹೊಂದಿದೆ. ಚಲನಚಿತ್ರ ನಟರ ಹೆಸರಿನಲ್ಲಿ ಇರುವಂತಹ ರಸ್ತೆಗಳಲ್ಲಿ ಇದು ಕೂಡ ಅತ್ಯಂತ ದೊಡ್ಡ ರಸ್ತೆಗಳ ಹೆಸರಿನಲ್ಲಿ ಶಾಮೀಲಾಗಿದೆ.

ಆದರೆ ಈ ಸಂದರ್ಭದಲ್ಲಿ ರಸ್ತೆ ಉದ್ಘಾಟನೆಯ ಸ್ಥಳದಲ್ಲಿ ಹಾಕಿರುವಂತಹ ಬ್ಯಾನರ್ ಒಂದರಲ್ಲಿ ರಾಜ್ಯ ಸರ್ಕಾರ ಅಪ್ಪು(Appu) ಅವರಿಗೆ ಅವಮಾನ ಆಗುವಂತಹ ಒಂದು ಕೆಲಸವನ್ನು ಮಾಡಿದೆ ಎಂಬುದಾಗಿ ಬೆಳಕಿಗೆ ಬಂದಿದೆ. ಅದೇನೆಂದರೆ ಬ್ಯಾನರ್ ನಲ್ಲಿ ಕೇವಲ ನರೇಂದ್ರ ಮೋದಿ ಜಿ ಬಸವರಾಜ ಬೊಮ್ಮಾಯಿ ಆರ್ ಅಶೋಕ್ ಹಾಗೂ ತೇಜಸ್ವಿ ಸೂರ್ಯ ಅವರ ಫೋಟೋವನ್ನು ಮಾತ್ರ ಹಾಕಿದ್ದು ಪುನೀತ್ ರಾಜಕುಮಾರ್ ಅವರ ಹೆಸರಿನಲ್ಲಿ ರಸ್ತೆ ಬಿಡುಗಡೆ ಆಗುತ್ತಿದ್ದರು ಕೂಡ ಅವರ ಒಂದೇ ಒಂದು ಫೋಟೋವನ್ನು ಕೂಡ ಹಾಕಿಲ್ಲ. ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ಅಪ್ಪು ಅಭಿಮಾನಿಗಳ(Appu Fans) ಕೆಂಗಣ್ಣಿಗೆ ಗುರಿಯಾಗಿದೆ.

Leave a Comment

error: Content is protected !!