ಕಾಂತಾರದಲ್ಲಿ ಅಪ್ಪು ನಟಿಸಿದ್ದರೆ ಹೇಗೆ ಕಾಣಿಸಿಕೊಳ್ಳುತ್ತಿದ್ದರು ಗೊತ್ತಾ? ವೈರಲ್ ಆಯ್ತು ಅಪ್ಪು ಕಾಂತಾರ ಪೋಸ್ಟರ್.

ನಿಮಗೆಲ್ಲರಿಗೂ ಗೊತ್ತಿರಬಹುದು ಗೆಳೆಯರೇ ಕಾಂತಾರ ಸಿನಿಮಾದ ಬಿಡುಗಡೆಗು ಮುನ್ನವೇ ಚಿತ್ರದ ನಿರ್ದೇಶಕ ಹಾಗೂ ನಾಯಕ ನಟನಾಗಿರುವ ರಿಷಬ್ ಶೆಟ್ಟಿ ಅವರು ಹೇಳಿದರು ಈ ಕಥೆಯನ್ನು ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಾಯಕನಾಗಿ ನಟಿಸಬೇಕಾಗಿದ್ದು ಆದರೆ ಅವರ ಬ್ಯುಸಿ ಶೆಡ್ಯೂಲ್ ನಲ್ಲಿ ಈ ಸಿನಿಮಾಗೆ ಟೈಮ್ ನೀಡಲು ಸಾಧ್ಯವಾಗಲಿಲ್ಲ ಹೀಗಾಗಿ ನಾನು ನಟಿಸಿದೆ ಎಂಬುದಾಗಿ ಹೇಳುತ್ತಾರೆ.

ನಿಜಕ್ಕೂ ಇಂತಹ ಅದ್ಭುತ ಸಿನಿಮಾದಲ್ಲಿ ಅಪ್ಪು ಅವರನ್ನು ನೋಡುವುದು ನಿಜಕ್ಕೂ ಅವರ ಅಭಿಮಾನಿಗಳು ಸೇರಿದಂತೆ ಕನ್ನಡ ಸಿನಿಮಾ ಪ್ರೇಕ್ಷಕರ ಕನಸಾಗಿತ್ತು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈಗಾಗಲೇ ಕಾಂತಾರ ಸಿನಿಮಾ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ವಿಶ್ವಾದ್ಯಂತ ಸಿನಿಮಾ ಥಿಯೇಟರ್ ಗಳಲ್ಲಿ ಅಗ್ರಸ್ಥಾನದಲ್ಲಿ ರಾರಾಜಿಸುತ್ತಿದೆ ಎನ್ನುವುದು ನಿಜಕ್ಕೂ ಕೂಡ ಕನ್ನಡ ಪ್ರೇಕ್ಷಕನಾಗಿ ನಮಗೆಲ್ಲರಿಗೂ ಹೆಮ್ಮೆ ಎಂದು ಹೇಳಬಹುದು.

ಇನ್ನು ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕಾಂತಾರ ಸಿನಿಮಾದಲ್ಲಿ ನಟಿಸಿದ್ದರೆ ಹೇಗೆ ಕಾಣಿಸಿಕೊಳ್ಳುತ್ತಿದ್ದರು ಎಂಬ ಬಗ್ಗೆ ಒಂದು ಪೋಸ್ಟರ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಕುಶಲ್ ಎನ್ನುವ ವ್ಯಕ್ತಿ ಅಪ್ಪು ಅವರನ್ನು ಕಾಂತಾರದ ಶಿವನ ಪಾತ್ರದಲ್ಲಿ ಎಡಿಟ್ ಮಾಡಿ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು ಎಲ್ಲರೂ ಕೂಡ ವ್ಯಾಪಕವಾಗಿ ಮೆಚ್ಚುಗೆಯನ್ನು ಸೂಚಿಸುತ್ತಿದ್ದಾರೆ.

ಒಂದು ವೇಳೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಬದುಕಿದ್ದು ಕಾಂತಾರ ಸಿನಿಮಾದಲ್ಲಿ ನಟಿಸದಿದ್ದರೂ ಕೂಡ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದ ಗೆಲುವನ್ನು ನೋಡಿ ಖಂಡಿತವಾಗಿ ಮನಸ್ಪೂರ್ತಿಯಾಗಿ ಅಭಿನಂದನೆಗಳನ್ನು ಸಲ್ಲಿಸಿ ಖುಷಿಪಡುತ್ತಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಬೇರೆ ನಟರ ಗೆಲುವನ್ನು ಕಂಡು ಯಾವುದೇ ಅಸೂಯೆ ಇಲ್ಲದೆ ಸಂತೋಷ ಪಡುವಂತಹ ನಿಷ್ಕಲ್ಮಶ ವ್ಯಕ್ತಿತ್ವ ಅಂದರೆ ಅದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾತ್ರ ಎಂದು ಹೇಳಬಹುದಾಗಿದೆ.

Leave a Comment

error: Content is protected !!