Rajkumar: ಅಣ್ಣಾವ್ರು ನಟಿಸಿದ್ದ ಈ ಸಿನಿಮಾ ಅವರಿಗೇ ಇಷ್ಟ ಆಗಿರಲಿಲ್ಲ ಆದರೆ ಆ ಸಿನಿಮಾ ದಾಖಲೆಯನ್ನೇ ನಿರ್ಮಿಸಿತ್ತು. ಯಾವುದು ಆ ಸೂಪರ್ ಹಿಟ್ ಸಿನಿಮಾ?

Dr Rajkumar ಅಣ್ಣಾವ್ರು ಯಾವುದೇ ಪಾತ್ರವನ್ನು ಮಾಡಿದರೂ ಕೂಡ ಅದು ಅವರಿಗೆ ಹೇಳಿ ಮಾಡಿಸಿದಂತಿರುತ್ತಿತ್ತು. ಪೌರಾಣಿಕ ಐತಿಹಾಸಿಕ ಮಾಡರ್ನ್ ಹೀಗೆ ಯಾವುದೇ ಪಾತ್ರದಲ್ಲಿ ಕೂಡ ಪರಿಪಕ್ವವಾಗಿ ಕಾಣಿಸಿಕೊಳ್ಳಬಲ್ಲಂತಹ ಭಾರತೀಯ ಚಿತ್ರರಂಗದ ಏಕೈಕ ನಟ ಯಾರಾದರೂ ಇದ್ದರೆ ಅದು ಡಾ. ರಾಜ್‌ಕುಮಾರ್(Dr Rajkumar) ಅವರ ಮಾತ್ರ ಆಗಿರಲು ಸಾಧ್ಯ ಎಂಬುದಾಗಿ ಹೇಳಬಹುದಾಗಿದೆ. ಅದಕ್ಕೆ ತಾನೆ ಅವರನ್ನು ಕನ್ನಡ ಚಿತ್ರರಂಗದ ದೇವರು ಎನ್ನುವುದಾಗಿ ಕರೆಯೋದು.

ರಾಜಕುಮಾರ್(Rajkumar) ರವರು ಯಾವುದೇ ಸಿನಿಮಾ ಮಾಡಿದರೂ ಕೂಡ ಅವರು ಆ ಸಿನಿಮಾದಲ್ಲಿ ಇದ್ದರೆ ಸಾಕು ಅಭಿಮಾನಿ ದೇವರುಗಳು ಥಿಯೇಟರ್ ಗೆ ನುಗ್ಗಿ ಹೌಸ್ ಫುಲ್ ಪ್ರದರ್ಶನ ಮಾಡಿ ಸಿನಿಮಾವನ್ನು ಗೆಲ್ಲಿಸಿ ತಮ್ಮ ಆರಾಧ್ಯ ದೈವನನ್ನು ಕಣ್ತುಂಬಿಕೊಂಡು ಬರುತ್ತಿದ್ದರು. ಇನ್ನು ಒಂದು ಬಾರಿ ಆ ಸಿನಿಮಾವನ್ನು ಸ್ವತಹ ರಾಜ್ ಕುಮಾರ್ ಅವರು ಇಷ್ಟಪಡದಿದ್ದರೂ ಕೂಡ ಅವರ ಆ ಸಿನಿಮಾವನ್ನು ಅಭಿಮಾನಿಗಳು ನೋಡಿ ಗೆಲ್ಲಿಸಿದ್ದರಂತೆ. ಹಾಗಿದ್ದರೆ, ಆ ಸಿನಿಮಾ ಯಾವುದು ಎಂಬುದನ್ನು ತಿಳಿಯೋಣ ಬನ್ನಿ.

Bhagyada Bagil – Dr Rajkumar

ಪ್ರತಿಯೊಬ್ಬ ಕಲಾವಿದನ ಜೀವನದಲ್ಲಿ ಕೂಡ 100ನೇ ಸಿನಿಮಾ ಎನ್ನುವುದು ಸಾಕಷ್ಟು ವಿಶೇಷವಾಗಿರುತ್ತದೆ ಹಾಗೆಯೇ ರಾಜಕುಮಾರ್ ಅವರ ಸಿನಿಮಾ ಜೀವನದ ನೂರನೇ ಸಿನಿಮಾ ಆಗಿರುವ ಭಾಗ್ಯದ ಬಾಗಿಲು(Bhagyada Bagilu) ಸಿನಿಮಾ ಕೂಡ ಅವರ ಅಭಿಮಾನಿಗಳಿಗೆ ಸಾಕಷ್ಟು ವಿಶೇಷವಾಗಿತ್ತು. ಅಣ್ಣಾವ್ರ ನೂರನೇ ಸಿನಿಮಾ ಎನ್ನುವ ಕಾರಣಕ್ಕಾಗಿ ಭಾಗ್ಯದ ಬಾಗಿಲು ಅಭಿಮಾನಿಗಳ ಪ್ರೀತಿಯಿಂದ ತೆರೆದಿತ್ತು ಎಂದರೆ ತಪ್ಪಾಗಲಾರದು. ಪ್ರತಿಯೊಬ್ಬ ಪ್ರೇಕ್ಷಕ ಹಾಗೂ ಅಣ್ಣಾವ್ರ ಅಭಿಮಾನಿ ಕೂಡ ಈ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ಹೌಸಫುಲ್ ಪ್ರದರ್ಶನಗಳೊಂದಿಗೆ ನೋಡಿದ್ದರು.

ಈ ವಿಚಾರವನ್ನು ಆ ದಿನಗಳ ಸಂದರ್ಶನದಲ್ಲಿಯೇ ಅಣ್ಣಾವ್ರು ಬಿಚ್ಚಿಟ್ಟಿದ್ದರು. ಸಿನಿಮಾ ಚೆನ್ನಾಗಿಲ್ಲದಿದ್ದರೂ ಕೂಡ ನನ್ನ ಮೇಲಿನ ಪ್ರೀತಿಯಿಂದಾಗಿ ಆ ಸಿನಿಮಾವನ್ನು ದೊಡ್ಡ ಮಟ್ಟದ ಯಶಸ್ಸು ಕಾಣುವಂತೆ ನನ್ನ ಅಭಿಮಾನಿ ದೇವರುಗಳು ಮಾಡಿದ್ದಾರೆ ಎಂಬುದಾಗಿ ಅಭಿಮಾನಿಗಳ ಮೇಲಿನ ಪ್ರೀತಿಯನ್ನು ಬಹಿರಂಗವಾಗಿ ಅಣ್ಣಾವ್ರು(Annavru) ಹಂಚಿಕೊಂಡಿದ್ದರು. ನೀವು ಕೂಡ ಭಾಗ್ಯದ ಬಾಗಿಲು ಸಿನಿಮಾವನ್ನು ವೀಕ್ಷಿಸಿದ್ದರೆ ಸಿನಿಮಾದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!