ಕೋಟಿ ಕೋಟಿ ಕೊಡುತ್ತೇನೆ ನನಗೇ ನಿರ್ದೇಶನ ಮಾಡಿ ಎಂದ ತೆಲುಗಿನ ರಾಮ್ ಚರಣ್ ಮತ್ತು ಅಲ್ಲು ಅರ್ಜುನ್. ಇದಕ್ಕೆ ರಿಷಬ್ ಶೆಟ್ಟಿ ಕೊಟ್ಟ ಉತ್ತರ ಏನು ನೋಡಿ

ಕಿರಿಕ್ ಪಾರ್ಟಿ, ಸ.ಹಿ.ಪ್ರಾ. ಶಾಲೆ ಕಾಸರಗೋಡು ಇಂತಹ ಹಿಟ್ ಚಿತ್ರಗಳನ್ನು ನೀಡಿದ ರಿಷಬ್ ಶೆಟ್ಟಿಯವರು ಉಳಿದವರು ಕಂಡಂತೆ, ಬೆಲ್ ಬಾಟಮ್, ಹೀರೋ ಚಿತ್ರಗಳ ಮೂಲಕ ನಟನೆಗೂ ಸೈ ಎನಿಸಿಕೊಂಡಿದ್ದಾರೆ. ಕಾಂತಾರದಲ್ಲಿನ ರಿಷಬ್ ಶೆಟ್ಟಿಯವರನ್ನು ನೋಡಿದವರು ಅವರೊಳಗಿನ ನಿಜವಾದ ‘ಹೀರೋ’ ಈಗ ಹೊರ ಬಂದಿದ್ದಾನೆ ಎಂದಿದ್ದಾರಂತೆ. ಒಟ್ಟಿನಲ್ಲಿ ಕಾಂತಾರವು ರಿಷಬ್ ಶೆಟ್ಟಿ ಅವರ ಪಾಲಿಗೆ ಹೊಸ ಆಯಾಮವನ್ನು ಬರೆದಿದ್ದಂತು ನಿಜ..

ಹೊಂಬಾಳೆ ಫಿಲಂಸ್ ನಡಿಯಲ್ಲಿ ನಿರ್ಮಾಣಗೊಂಡಿದ್ದ ಕಾಂತಾರ ಚಿತ್ರವು ದೇಶ ವಿದೇಶಗಳಲ್ಲಿ ಹೆಸರು ಮಾಡಿ, ಕೋಟಿ ಕೋಟಿ ಲಾಭ ತಂದುಕೊಟ್ಟಿತ್ತು. ಕನ್ನಡ ಭಾಷೆಯಲ್ಲಿ ಗೆದ್ದ ನಂತರ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಆದ ಈ ಚಿತ್ರವು ದಕ್ಷಿಣ ಭಾರತದ ಹೆಮ್ಮೆಯ ಚಿತ್ರವೆನಿಸಿಕೊಂಡಿತ್ತು. ಸ್ಯಾಂಡಲ್ ವುಡ್ ನಲ್ಲಿ 9.99 ರೇಟಿಂಗ್ಸ್ ಪಡೆದು ಪರಭಾಷಿಗರಿಗೂ ಕುತೂಹಲ ಕೆರಳಿಸಿತ್ತು. ಅಕ್ಟೋಬರ್ 20ರಂದು ಕಾಂತಾರ ಚಿತ್ರವು ಮಲಯಾಳಂ ಭಾಷೆಯಲ್ಲಿ ರಿಲೀಸ್ ಆಗಿತ್ತು. ರಿಲೀಸ್ ಆದ ಮೊದಲ ದಿನವೇ ಜೋರಾಗಿ ಸದ್ದು ಮಾಡುತ್ತಿದೆ.

ತೆಲುಗು ಭಾಷೆಯಲ್ಲಿ ಕಾಂತಾರ ಚಿತ್ರವನ್ನು ಅಲ್ಲು ಅರವಿಂದ್ ಹಂಚಿಕೆ ಮಾಡಿದ್ದಾರೆ. ಮೂರು ಕೋಟಿಗೆ ಖರೀದಿಸಲಾದ ಈ ಚಿತ್ರವು ಒಳ್ಳೆಯ ಲಾಭ ತಂದು ಕೊಟ್ಟಿದ್ದು, ಅಲ್ಲು ಅರವಿಂದ್ ಅವರ ‘ಗೀತಾ ಆರ್ಟ್ಸ್’ ಗೆ ಉತ್ತಮ ಬಿಜಿನೆಸ್ ಆಗಿದೆ. ಇದರ ಗಳಿಕೆ ನೋಡಿ ಖುಷಿಯಾದವರು ರಿಷಬ್ ಜೊತೆ ಸಿನಿಮಾ ಮಾಡುವ ಮನದಾಸೆಯನ್ನು ಹೇಳಿಕೊಂಡಿದ್ದರು. ಸುಮಾರು ಹತ್ತು ಕೋಟಿಗೂ ಅಧಿಕ ಸಂಭಾವನೆ ನೀಡುವ ಮಾತು ಕತೆ ಆಗಿತ್ತು. ಇದೇ ಸಂದರ್ಭದಲ್ಲಿ ತೆಲುಗಿನ ಖ್ಯಾತ ನಟ ರಾಮ್ ಚರಣ್ ಅವರು ಕೂಡ ಕೋಟಿ ಕೋಟಿ ಹಣ ಕೊಡುತ್ತೇನೆ ನನಗೆ ನಿರ್ದೇಶನ madi ಎಂದು ಕೇಳಿ ಕೊಂಡಿದ್ದರು.

ಇತ್ತೀಚಿಗಷ್ಟೇ ಮಾಧ್ಯಮದಲ್ಲಿ ಅಲ್ಲು ಅರವಿಂದ್ ಈ ವಿಚಾರವಾಗಿ ಮಾತನಾಡಿದ್ದಾರೆ. “ನಾನು ‘ಗೀತಾ ಆರ್ಟ್ಸ್ ಬ್ಯಾನರ್ ನ ಅಡಿಯಲ್ಲಿ ನಿಮ್ಮ ಜೊತೆ ಒಂದು ಸಿನಿಮಾ ಮಾಡಬೇಕೆಂದಿರುವೆ’ ಎಂಬ ಆಸೆಯನ್ನು ರಿಷಬ್ ಅವರಲ್ಲಿ ವ್ಯಕ್ತಪಡಿಸಿದೆ. ಅದನ್ನು ಕೇಳಿದ ರಿಷಬ್ ಅವರು ತಕ್ಷಣವೇ ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಸ್ವಲ್ಪ ದಿನಗಳ ಸಮಯಾವಕಾಶ ಬೇಕು ಎಂದು ಹೇಳಿದರು . ಶೀಘ್ರದಲ್ಲೇ ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ” ಎಂದಿದ್ದಾರೆ.. ಬೇರೆ ಬೇರೆ ಭಾಷೆಗಳಿಂದಲೂ ರಿಷಬ್ ಅವರಿಗೆ ಬೇಡಿಕೆಗಳು ಹೆಚ್ಚಾಗಿವೆಯಂತೆ. ಆದರೆ ಸ್ವತಃ ರಿಷಬ್ ಶೆಟ್ಟಿ ಅವರು ಈ ವಿಷಯದ ಕುರಿತು ಶಾಕಿಂಗ್ ರಿಯಾಕ್ಷನ್ ನೀಡಿದ್ದಾರೆ ನಾನು ಯಾವುದೇ ಬೇರೆ ಭಾಷೆಯ ನಟರಿಗೆ ನಿರ್ದೇಶನ ಮಾಡಲು ರೆಡಿ ಇಲ್ಲ. ಕಾಂತಾರ ಚಿತ್ರದ ನಂತರ ನಾನು ಕನ್ನಡ ಭಾಷೆಯಲ್ಲಿ ನಟನೆ ಮಾಡುತ್ತೇನೆ ಮತ್ತು ನಿರ್ದೇಶನವನ್ನು ಮಾಡುತ್ತೇನೆ ಕನ್ನಡ ನಟರಿಗೆ ನಾನು ಹೆಚ್ಚು ನಿರ್ದೇಶನ ಮಾಡುವ ಆಸಕ್ತಿ ಇದೆ ಕನ್ನಡವನ್ನು ಬಿಟ್ಟು ನಾನು ಎಲ್ಲಿಗೂ ಹೋಗುವುದಿಲ್ಲ ಎಂದು ತಮ್ಮ ಅಭಿಮಾನವನ್ನು ಹೊರಹಾಕಿದರು. ರಿಶಬ್ ಶೆಟ್ಟಿ ಅವರು ಟ್ವಿಟ್ಟರ್ ನಲ್ಲಿ ತಾನು ಕನ್ನಡ ಭಾಷೆಯನ್ನು ಬಿಟ್ಟು ಹೋಗುವುದಿಲ್ಲ ಎಂದು ಹೇಳಿದ ಟ್ವಿಟ್ ಇದೀಗ ಎಲ್ಲ ಕಡೆ ವೈರಲ್ ಆಗುತ್ತಿದ್ದು ರಿಷಭ್ ಅವರ ಮೇಲಿನ ಪ್ರೀತಿ ಮತ್ತು ಅಭಿಮಾನ ಇನ್ನಷ್ಟು ಹೆಚ್ಚಿಸಿದೆ.

Leave a Comment

error: Content is protected !!