Ram Charan: ನನ್ನನ್ನು ಹಣಕ್ಕಾಗಿ ಮದುವೆಯಾಗಿದ್ದಾರೆ ಎಂದು ಶಾ’ ಕಿಂಗ್ ಹೇಳಿಕೆ ನೀಡಿದ ರಾಮಚರಣ್ ಪತ್ನಿ!

Ram Charan Wife ತೆಲುಗು ಚಿತ್ರರಂಗದ ಮೆಗಾಸ್ಟಾರ್ ಚಿರಂಜೀವಿ ಅವರ ಪುತ್ರ ಆಗಿರುವಂತಹ ಮೆಗಾ ಪವರ್ ಸ್ಟಾರ್ ರಾಮ್ ಚರಣ್(Mega Power Star Ram Charan) ಸಿನಿಮಾ ಹಿನ್ನೆಲೆ ಉಳ್ಳಂತಹ ಕುಟುಂಬದಿಂದ ಬಂದಿದ್ದರು ಕೂಡ ಚಿತ್ರರಂಗದಲ್ಲಿ ಅವರು ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಯಶಸ್ಸು ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿರುವುದು. ನಿಜಕ್ಕೂ ಕೂಡ ತೆಲುಗು ಚಿತ್ರರಂಗದ ಆಲ್-ರೌಂಡರ್ ರಾಮಚರಣ್(Ram Charan) ಎಂದರು ಕೂಡ ತಪ್ಪಾಗಲಾರದು ಅಷ್ಟರಮಟ್ಟಿಗೆ ಪ್ರತಿಭೆ ಎನ್ನುವುದು ಅವರಲ್ಲಿ ಹುದುಗಿದೆ.

ಇನ್ನು ಸಿನಿಮಾ ರಂಗಕ್ಕೆ ಬಂದು ಐದು ವರ್ಷಗಳಾದ ನಂತರ ಉಪಾಸನಾ(Upasana) ಅವರನ್ನು ನಟ ರಾಮಚರಣ್ ಅವರ ಮದುವೆಯಾಗುತ್ತಾರೆ. ಅಪೋಲೋ ಸಮೂಹ ಸಂಸ್ಥೆಗಳ ಒಡೆಯನ ಮೊಮ್ಮಗಳನ್ನು ರಾಮಚರಣ್ ರವರು ಕಾಮನ್ ಫ್ರೆಂಡ್ ಮುಖಾಂತರ ಬೇಟಿಯಾಗಿ ನಂತರ ಪರಸ್ಪರ ಪ್ರೀತಿಸಿ ಮನೆಯವರ ಒಪ್ಪಿಗೆ ಮೇರೆಗೆ ಇಬ್ಬರು ಕೂಡ ಮದುವೆ ಆಗಿರುತ್ತಾರೆ.

ಇನ್ನು ಮದುವೆಯಾದ ಆರಂಭದಲ್ಲಿ ಉಪಾಸನಾ ಅವರು ಸಾಕಷ್ಟು ದಪ್ಪ ಇದ್ದರೂ ಇದರ ಕುರಿತಂತೆ ಮೀಡಿಯಾಗಳಲ್ಲಿ ಆಗಾಗ ಟೀಕಾತ್ಮಕ ವಿಚಾರಗಳು ಪ್ರಸಾರ ಆಗುತ್ತಲೇ ಇತ್ತು. ಕೆಲವರು ರಾಮಚರಣ್(Ram Charan) ಅವರು ಉಪಾಸನ ಅವರನ್ನು ಕೇವಲ ಹಣಕ್ಕಾಗಿ ಮದುವೆಯಾಗಿದ್ದಾರೆ ಎನ್ನುವ ಮಾತುಗಳು ಕೂಡ ಕೇಳಿ ಬಂದಿತ್ತು. ನಂತರ ಕಾಲ ಕಳೆದಂತೆ ಉಪಾಸನ ಅವರು ಕೂಡ ಸಣ್ಣಗಾಗುತ್ತಾರೆ. ದಿನ ಕಳೆದಂತೆ ಜನರ ಮಾತುಗಳು ಕೂಡ ಬದಲಾಗಿ ಆ ಮಾತುಗಳನ್ನೆಲ್ಲ ಎದುರಿಸಿ ನಿಂತು ನಾನು ಇಂದು ಇಲ್ಲಿದ್ದೇನೆ ಎಂಬುದಾಗಿ ಉಪಾಸನ ಅವರು ಮಾಧ್ಯಮ ಒಂದರ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಸದ್ಯಕ್ಕೆ 10 ವರ್ಷಗಳ ದಾಂಪತ್ಯ ಜೀವನದ ನಂತರ ರಾಮ್ ಚರಣ್ ಹಾಗೂ ಉಪಾಸನ ದಂಪತಿಗಳಿಬ್ಬರೂ ಕೂಡ ಮಗುವಿನ ನಿರೀಕ್ಷೆಯಲ್ಲಿದ್ದು ಇತ್ತೀಚಿಗಷ್ಟೇ ಒಟ್ಟಾಗಿ ಅಮೆರಿಕಾದಲ್ಲಿ ನಡೆದಿರುವಂತಹ ಆಸ್ಕರ್ ಪ್ರಶಸ್ತಿ(Oscars Award) ಸಮಾರಂಭಗೂ ಕೂಡ ಹೋಗಿದ್ದಾರೆ. ಸದ್ಯಕ್ಕೆ ಇವರಿಬ್ಬರೂ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಇವರ ತಂದೆ ಆಗಿರುವಂತಹ ಮೆಗಾಸ್ಟಾರ್ ಚಿರಂಜೀವಿ(Megastar Chiranjeevi) ಅವರೇ ಅಧಿಕೃತವಾಗಿ ಸೋಶಿಯಲ್ ಮೀಡಿಯಾ ಮುಖಾಂತರ ಹಂಚಿಕೊಂಡಿದ್ದರು.

Leave a Comment

error: Content is protected !!