ದೀಪಿಕಾ ಪಡುಕೋಣೆ ಗಂಡ ರಣವೀರ್ ಸಿಂಗ್ ಹಾಕಿಕೊಂಡಿದ್ದ ಇಯರ್ ರಿಂಗ್ ಬೆಲೆ ಎಷ್ಟು ಬಾರಿ ಗೊತ್ತಾ?

ರಣವೀರ್ ಸಿಂಗ್ ಬಾಲಿವುಡ್ ಚಿತ್ರರಂಗದ ಅತ್ಯಂತ ಭರವಸೆಯ ನಟ ಎಂದರೆ ತಪ್ಪಾಗಲಾರದು. ಮಾಡರ್ನ್ ಐತಿಹಾಸಿಕ ಹೀಗೇ ಯಾವುದೇ ಪಾತ್ರಗಳನ್ನು ನೀಡಿದರು ಕೂಡ ಅದಕ್ಕೆ ನ್ಯಾಯ ಒದಗಿಸುವಂತಹ ನಟನೆಯನ್ನು ಮಾಡಬಲ್ಲಂತಹ ಅದ್ಭುತ ಪ್ರತಿಭೆ ಎನ್ನಬಹುದಾಗಿದೆ. ಈ ಕಾರಣಕ್ಕಾಗಿ ಸಾಲು ಸಾಲು ಅವಾರ್ಡ್ಗಳು ಅವರನ್ನು ಹುಡುಕಿಕೊಂಡು ಬರುತ್ತದೆ.

ಸದಾಕಾಲ ಸೋಲುವ ಬಾಲಿವುಡ್ ಸಿನಿಮಾಗಳ ನಡುವೆ ರಣವೀರ್ ಸಿಂಗ್ ನಾಯಕನಾಗಿ ನಟಿಸುವ ಬಾಲಿವುಡ್ ಸಿನಿಮಾಗಳು ಪ್ರೇಕ್ಷಕರ ಮನರಂಜಿಸಲು ಸದಾ ಕಾಲ ಯಶಸ್ವಿಯಾಗುತ್ತವೆ ಎನ್ನಬಹುದಾಗಿದೆ. ಇನ್ನು ಎಲ್ಲದಕ್ಕಿಂತ ಪ್ರಮುಖವಾಗಿ ದೀಪಿಕಾ ಪಡುಕೋಣೆ ಕರ್ನಾಟಕ ಮೂಲದವರಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕಕ್ಕೂ ಹಾಗೂ ರಣವೀರ್ ಸಿಂಗ್ ಅವರಿಗೂ ಕೂಡ ಅವಿನಾಭಾವ ಸಂಬಂಧ ಇದೆ ಎಂದು ಹೇಳಬಹುದು.

ಹೀಗಾಗಿ ಅವರನ್ನು ಕರ್ನಾಟಕದ ಅಳಿಯ ಎನ್ನುವುದಾಗಿ ಕೂಡ ಕೆಲವೊಮ್ಮೆ ಕರೆಯಲಾಗುತ್ತದೆ. ಎಲ್ಲದಕ್ಕಿಂತ ಪ್ರಮುಖವಾಗಿ ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಮೊದಲ ಬಾರಿಗೆ ನಡೆದಿರುವ ಹತ್ತನೇ ವರ್ಷದ ಸೈಮ ಅವಾರ್ಡ್ಸ್ ಕಾರ್ಯಕ್ರಮಕ್ಕೆ ರಣವೀರ್ ಸಿಂಗ್ ಅವರು ಆಗಮಿಸಿದ್ದರು. ಅವರಿಗೆ ದಕ್ಷಿಣ ಭಾರತ ಚಿತ್ರರಂಗ ಮೆಚ್ಚುವಂತಹ ಬಾಲಿವುಡ್ ನಟ ಎಂಬ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಸಂದರ್ಭದಲ್ಲಿ ಅವರು ಕಿವಿಯಲ್ಲಿ ಧರಿಸಿದ್ದ ಡೈಮಂಡ್ ಇಯರ್ ರಿಂಗ್ ಕ್ಯಾಮರಾ ಕಣ್ಣನ್ನು ಕುಕ್ಕಿತ್ತು ಎಂದು ಹೇಳಬಹುದಾಗಿದೆ.

ಇನ್ನು ಈ ಡೈಮಂಡ್ ನ ಒಂದು ಪೀಸ್ ಬೆಲೆ ಬರೋಬರಿ 3 ಲಕ್ಷ ರೂಪಾಯಿ ಎಂಬುದಾಗಿ ತಿಳಿದು ಬಂದಿದೆ. ಹ್ಯಾಂಡ್ ಮೇಡ್ ಡಿಸೈನ್ ಅನ್ನು ಹೊಂದಿರುವ ಈ ಡೈಮಂಡ್ ಇಯರ್ ರಿಂಗ್ ಅತ್ಯಂತ ದುಬಾರಿ ಡೈಮಂಡ್ ಇಯರ್ ರಿಂಗ್ಗಳಲ್ಲಿ ಒಂದರ ವಿಧವಾಗಿದೆ ಎಂಬುದಾಗಿ ತಿಳಿದು ಬಂದಿದ್ದು ಈಗ ಇದರ ಬೆಲೆ ಎನ್ನುವುದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ. ಸೆಲೆಬ್ರಿಟಿಗಳು ಎಂದ ಮೇಲೆ ಇಷ್ಟೊಂದು ದುಬಾರಿ ಬೆಳೆಯ ವಸ್ತುಗಳನ್ನು ಧರಿಸುವುದು ಹಾಗೂ ಖರೀದಿಸುವುದು ಸರ್ವೇಸಾಮಾನ್ಯವಾಗಿದೆ ಎನ್ನಬಹುದಾಗಿದೆ.

Leave a Comment

error: Content is protected !!