Taraka Ratna: ಜೂನಿಯರ್ ಎನ್ಟಿಆರ್ ಅವರ ಸಹೋದರ ತಾರಕ ರತ್ನ ಅವರ ಮರಣಕ್ಕೆ ನಿಜವಾದ ಕಾರಣ ಏನು ಗೊತ್ತಾ?

Nandamuri Taraka Ratna ತೆಲುಗು ಚಿತ್ರರಂಗದ ಲೆಜೆಂಡರಿ ನಟ ಹಾಗೂ ಮುಖ್ಯಮಂತ್ರಿ ಆಗಿ ಕಾಣಿಸಿಕೊಂಡಿದ್ದ ಎನ್ ಟಿ ಆರ್(NTR) ಅವರ ಮೊಮ್ಮಗ ಹಾಗೂ ತೆಲುಗು ಚಿತ್ರರಂಗದ ಅತ್ಯಂತ ಜನಪ್ರಿಯ ನಟ ಆಗಿರುವ ಜೂನಿಯರ್ ಎನ್ಟಿಆರ್(Jr Ntr) ಅವರ ಸಹೋದರ ಆಗಿರುವ ನಂದಮೂರಿ ತಾರಕ ರತ್ನ(Taraka Ratna) ಅವರು ಕೇವಲ 39ನೇ ವಯಸ್ಸಿನಲ್ಲಿ ಮರಣವನ್ನು ಹೊಂದಿರುವುದು ಎಲ್ಲರ ಮನಸ್ಸಿಗೆ ದುಃ’ಖವನ್ನು ನೀಡಿದೆ. ಈಗಾಗಲೇ ಅವರನ್ನು ರಾಜಕಾರಣಿಗಳು ಹಾಗೂ ಚಿತ್ರರಂಗದ ಹಲವಾರು ಗಣ್ಯರು ಅಂತಿಮ ದರ್ಶನವನ್ನು ಪಡೆದು ನಮನವನ್ನು ಸಲ್ಲಿಸಿದ್ದಾರೆ.

ಜನವರಿ 27ರಂದು ಹೃದಯ ಸ್ತಂ’ಭನ ಆದ ಕೂಡಲೇ ಅವರನ್ನು ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಸಾಕಷ್ಟು ದಿನಗಳ ನುರಿತ ವೈದ್ಯಕೀಯ ತಜ್ಞರ ಚಿಕಿತ್ಸೆಯ ಪರಿಣಾಮದಿಂದಲೂ ಕೂಡ ಅವರನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಂದಮೂರಿ ತಾರಕ ರತ್ನ(Nandamuri Taraka Ratna) ಅವರನ್ನು ಕಳೆದುಕೊಂಡಿರುವ ನಂದಮೂರಿ ಕುಟುಂಬ ಇದ ಕತ್ತಲೆಯಲ್ಲಿ ಕಾಲವನ್ನು ಕಳೆಯುವಂತಾಗಿದೆ.

Late Taraka Ratna

ಎನ್ಟಿಆರ್ ಅವರ ಮೊಮ್ಮಗ ಆಗಿರುವ ತಾರಕ ರತ್ನ ಅವರು ಜೂನಿಯರ್ ಎನ್ಟಿಆರ್ ಹಾಗೂ ಅವರ ಸಹೋದರ ಕಲ್ಯಾಣ್ ರಾಮ್(Kalyan Ram) ಅವರಿಗೆ ಸಂಬಂಧದಲ್ಲಿ ಸೋದರ ಆಗುತ್ತಾರೆ. ಸಿನಿಮಾ ರಂಗದಲ್ಲಿ ಕೂಡ ಜನಪ್ರಿಯತೆಯನ್ನು ಹೊಂದಿರುವ ಇವರು ರಾಜಕೀಯದಲ್ಲಿ ಕೂಡ ಟಿ ಡಿ ಪಿ ಪಕ್ಷದ ಪರವಾಗಿ ತಮ್ಮ ಬೆಂಬಲವನ್ನು ಈಗಾಗಲೇ ಸೂಚಿಸುತ್ತಾ ಬಂದಿದ್ದಾರೆ.

ತೆಲುಗು ದೇಶಂ ಪಾರ್ಟಿ(Telugu Desham Party) ಪಕ್ಷದ ಅಭ್ಯರ್ಥಿ ಒಬ್ಬರ ಪ್ರಚಾರಾರ್ಥ ಕಾರ್ಯವಾಗಿ ನಂದಮೂರಿ ತಾರಕ್ ರತ್ನ ರವರು ಪ್ರಚಾರ ಮಾಡುತ್ತಿದ್ದ ಸಂದರ್ಭದಲ್ಲಿಯೇ ಅವರಿಗೆ ಹೃದಯ ಸ್ತಂಭ’ನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬಂದು ಹಲವಾರು ದಿನಗಳ ಕಾಲ ಚಿಕಿತ್ಸೆಯನ್ನು ನೀಡಿದರು ಕೂಡ ಚಿಕಿತ್ಸೆಗೆ ಸ್ಪಂದಿಸದೆ ತಾರಕ್ ರತ್ನ ನಮ್ಮನ್ನೆಲ್ಲ ಅಗಲಿ ದೂರಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರಕಲಿ ಹಾಗೂ ಅವರ ಕುಟುಂಬಕ್ಕೆ ಅವರನ್ನು ಕಳೆದುಕೊಂಡಿರುವ ದುಃ’ಖವನ್ನು ಬರಿಸುವ ಶಕ್ತಿ ಆ ದೇವರು ನೀಡಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!