Mahesh Babu: ಮಹೇಶ್ ಬಾಬು ವಿರುದ್ಧ ಫೈಟ್ ಮಾಡೋಕೆ ಹೊರಟ್ರಾ ರೆಬೆಲ್ ಸ್ಟಾರ್ ಪ್ರಭಾಸ್?

Rebel Star Prabhas ರೆಬೆಲ್ ಸ್ಟಾರ್ ಪ್ರಭಾಸ್(Prabhas) ಈಗಾಗಲೇ ಬಾಹುಬಲಿ ಹಾಗೂ ಇನ್ನಿತರ ಫ್ಯಾನ್ ಇಂಡಿಯನ್ ಸಿನಿಮಾಗಳ ಮೂಲಕ ತಮ್ಮನ್ನು ತಾವು ಇಡೀ ಭಾರತ ಚಿತ್ರರಂಗದ ಮಾರುಕಟ್ಟೆಗೆ ಸೂಪರ್ ಸ್ಟಾರ್ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರ ಸಿನಿಮಾಗಳು ಗೆಲ್ಲಲಿ ಹಾಗೂ ಸೋಲಲಿ ಆದರೆ ಕಲೆಕ್ಷನ್ ವಿಚಾರದಲ್ಲಿ ಮಾತ್ರ ಯಾವುದೇ ಕಾರಣಕ್ಕೆ ಹಿಂದೆ ಬೀಳುವುದಿಲ್ಲ ಹಾಗೂ ಎಲ್ಲಾ ಭಾಷೆಯಲ್ಲಿ ಕೂಡ ಅವರ ಮಾರುಕಟ್ಟೆಯ ಹಿಡಿತ ಇದೆ.

ಆದರೆ ಈಗ ಪ್ರಭಾಸ್ ಅವರ ಹಾದಿಗೆ ಅಡ್ಡವಾಗಿ ತೆಲುಗು ಚಿತ್ರರಂಗದ ಮತ್ತೊಬ್ಬ ಸೂಪರ್ ಸ್ಟಾರ್ ಆಗಿರುವಂತಹ ಮಹೇಶ್ ಬಾಬು(Mahesh Babu ) ಅವರು ನಿಲ್ಲೋದಕ್ಕೆ ಹೊರಟಿದ್ದಾರೆ. ನಾವು ಹೀಗೆ ಅಂದ ಮಾತ್ರಕ್ಕೆ ನಿಜ ಜೀವನದಲ್ಲಿ ಹೀಗೆ ನಡೆಯುತ್ತಿದೆ ಎಂದು ಭಾವಿಸಬೇಡಿ ಬದಲಾಗಿ ಅವರ ಸಿನಿಮಾದ ಬಿಡುಗಡೆ ದಿನಾಂಕ ಒಂದಕ್ಕೊಂದು ಅಡ್ಡವಾಗಿ ನಿಂತಿದೆ. ಅಷ್ಟಕ್ಕೂ ಯಾವ ಸಿನಿಮಾ ಯಾವ ದಿನಾಂಕ ಎಂಬುದನ್ನು ತಿಳಿಯೋಣ ಬನ್ನಿ.

ಈಗಾಗಲೇ ಮಹೇಶ್ ಬಾಬು ಅವರ ತ್ರಿವಿಕ್ರಮ(Trivikrama) ಅವರ ಜೊತೆಗಿನ ಸಿನಿಮಾ ಈಗಾಗಲೇ ಚಿತ್ರೀಕರಣವನ್ನು ಪ್ರಾರಂಭಿಸಿದ್ದು ಮುಂದಿನ ಸಂಕ್ರಾಂತಿಗೆ ಬಿಡುಗಡೆಯಾಗುವ ಅಧಿಕೃತ ದಿನಾಂಕವನ್ನು ಕೂಡ ಘೋಷಿಸಿದ್ದು ಇದೇ ಸಂದರ್ಭದಲ್ಲಿ ಪ್ರಭಾಸ್ ಹಾಗೂ ಅಶ್ವಿನ್ ಕಾಂಬಿನೇಷನ್ನಲ್ಲಿ ಮೂಡಿಬಂದಿರುವ ಪ್ರಾಜೆಕ್ಟ್ ಕೆ(Project K) ಸಿನಿಮಾ ಕೂಡ ಬಿಡುಗಡೆ ಆಗುತ್ತಿದೆ.

ಈಗಾಗಲೇ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿರುವ ಪ್ರಭಾಸ್(Prabhas) ರವರ ಸಿನಿಮಾದ ವಿರುದ್ಧ ಗುದ್ದಾಟಕ್ಕೆ ಸಿದ್ಧವಾಗಿರುವ ಮಹೇಶ್ ಬಾಬು ರವರ ನಿರ್ಧಾರ ಎಷ್ಟರ ಮಟ್ಟಿಗೆ ಸರಿ ಎನ್ನುವುದಾಗಿ ಸಿನಿಮಾ ಪಂಡಿತರು ಪ್ರಶ್ನಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯಾರು ಸಿನಿಮಾದ ರಿಲೀಸ್ ಡೇಟ್ ಮುಂದಕ್ಕೆ ಅಥವಾ ಹಿಂದಕ್ಕೆ ಹೋಗುತ್ತದೆ ಎನ್ನುವುದನ್ನು ಕೂಡ ಕಾಯುತ್ತಿದ್ದಾರೆ.

Leave A Reply

Your email address will not be published.

error: Content is protected !!