ಮಗ ಮುಂದೆ ಏನಾಗಬೇಕು ಎಂಬ ಪ್ರಶ್ನೆಗೆ ರೇವತಿ ನಿಖಿಲ್ ಕುಮಾರಸ್ವಾಮಿ ಕೊಟ್ಟ ಉತ್ತರವೇನು ನೋಡಿ

ಇದೀಗ ದೇವೇಗೌಡರ ಕುಟುಂಬದಲ್ಲಿ ಸಡಗರ ಸಂಭ್ರಮ. ಕಳೆದ ಎರಡು ವರ್ಷಗಳಿಂದ ದೇವೆಗೌಡರ ಫ್ಯಾಮಿಲಿಯಲ್ಲಿ ಪ್ರತಿವರ್ಷವೂ ಕೂಡ ಸಡಗರ ಸಂಭ್ರಮದಿಂದ ತುಂಬಿದೆ. ನೇ ವರ್ಷದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಮದುವೆಯಾಯ್ತು. ನಂತರ ಸೆಪ್ಟೆಂಬರ್ 2021 ರಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ರೇವತಿ ಗೆ ಗಂಡು ಮಗುವಾಗಿದೆ. ಇದೀಗ 2022 ರಲ್ಲಿ ನಿಖಿಲ್ ಮಗನ ನಾಮಕರಣದ ಸಡಗರ ಸಂಭ್ರಮ. ಇದೀಗ ನಿಖಿಲ್ ಮಗನ ನಾಮಕರಣ ಅದ್ಧೂರಿಯಾಗಿ ನಡೆದಿದೆ.

ಶಾಸ್ತ್ರದ ಪ್ರಕಾರ ನಿಕ್ಕಿನ್ ಮಗನ ನಾಮಕರಣ ಬೆಂಗಳೂರಿನ ಜೆಪಿ ನಗರದ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿದೆ. ಜನನ ಶಾಂತಿ, ನಾಮಕರಣ, ಕನಕಾಭಿಷೇಕ ಹಾಗೂ ಇನ್ನಿತರ ವಿಶೇಷ ಪೂಜೆಗಳನ್ನು ಕೂಡ ಮಾಡಿಸಲಾಗಿದೆ. ಸುಮಾರು ಒಂಬತ್ತು ತಿಂಗಳುಗಳ ನಂತರ ನಿಖಿಲ್ ಅವರು ಮಾಧ್ಯಮಗಳಿಗೆ ತಮ್ಮ ಮಗನ ಮುಖವನ್ನು ತೋರಿಸಿದ್ದಾರೆ. ತುಂಬಾ ಮುದ್ದಾಗಿರುವ ಗೌಡರ ಕುಟುಂಬದ ಪಾಪು ನೋಡಲು ಮುದ್ದಾಗಿದೆ. ಕುಮಾರಸ್ವಾಮಿ ಮತ್ತು ದೇವೇಗೌಡರು ಮಗುವನ್ನು ಎತ್ತಿ ಮುದ್ದಾಡುವ ದೃಶ್ಯ ಕಂಡು ಬಂತು. ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ನಿಖಿಲ್ ಮತ್ತು ರೇವತಿ ಅವರ ಮಗನ ನಾಮಕರಣದ ಫೋಟೋಗಳು ಹರಿದಾಡುತ್ತಿವೆ.

ಇನ್ನೊಂದು ವಿಶೇಷ ಏನೆಂದರೆ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ಮಗನಿಗೆ ವಿಭಿನ್ನವಾದ ಹೆಸರನ್ನು ಇಟ್ಟಿದ್ದಾರೆ. ಗಣಪತಿ ದೇವರ ಹೆಸರಾದ ಆವ್ಯಾನ್ ಎಂಬ ಹೆಸರನ್ನು ಮಗನಿಗೆ ನಾಮಕರಣ ಮಾಡಿದ್ದಾರೆ. ಆವ್ಯಾನ್ ಹೆಸರಿನ ಅರ್ಥ ಅದೃಷ್ಟವಂತ ಅಂತ. ದೇವೇಗೌಡರ ಕುಟುಂಬಕ್ಕೆ ಈ ಮಗು ಅದೃಷ್ಟವನ್ನು ತರುವ ಸೂಚನೆಯಿದೆ. ಹಾಗೆ ನಾಮಕರಣದ ಕಾರ್ಯಕ್ರಮ ಮತ್ತು ಪೂಜೆ ಪುನಸ್ಕಾರಗಳು ಮುಗಿದ ನಂತರ ನಿಖಿಲ್ ಕುಮಾರಸ್ವಾಮಿ ಮತ್ತು ಪತ್ನಿ ರೇವತಿ ಮಾಧ್ಯಮಗಳ ಮುಂದೆ ಮಗನ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ನಿಮ್ಮ ಮಗ ಮುಂದೆ ದೊಡ್ಡವನಾದ ಮೇಲೆ ಏನಾಗಬೇಕು ಎಂದು ಕೇಳಿದ ಪ್ರಶ್ನೆಗೆ ನಿಖಿಲ್ ಕುಮಾರಸ್ವಾಮಿ ಅವರು ನಗುತ್ತಾ ನನ್ನ ಮಗ ಏನಾದರೂ ಆಗಲಿ.. ಆದರೆ ದೇಶಕ್ಕೆ ಒಬ್ಬ ಒಳ್ಳೆಯ ಪ್ರಜೆ ಆದರೆ ಅಷ್ಟೇ ನನಗೆ ಸಾಕು ಎಂದು ಹೇಳಿದ್ದಾರೆ. ಆದರೆ ರೇವತಿಗೆ ಮಗನ ಭವಿಷ್ಯದ ಮೇಲೆ ತುಂಬಾ ಆಸೆಗಳಿವೆ. ನಿಖಿಲ್ ಕುಮಾರಸ್ವಾಮಿಯವರ ಪತ್ನಿ ರೇವತಿ ನಿಖಿಲ್ ಗೆ ತನ್ನ ಮಗ ದೊಡ್ಡವನಾದ ಮೇಲೆ ವಿದ್ಯೆ ಕಲಿತು ವಿದ್ಯಾವಂತನಾಗಬೇಕೆಂಬ ಆಸೆ ಇದೆಯಂತೆ. ದೊಡ್ಡ ಗೌಡರ ಮನೆಗೆ ಸೊಸೆಯಾಗಿ ಬಂದಿರುವ ರೇವತಿ ತುಂಬ ಸಿಂಪಲ್ ಮತ್ತು ಸಾಧಾರಣ ವ್ಯಕ್ತಿತ್ವ ಹೊಂದಿರುವ ಮಹಿಳೆ. ಮತ್ತು ಅವರು ತಮ್ಮ ಮಗನೂ ಕೂಡ ಸಾಮಾನ್ಯರಂತೆ ವಿದ್ಯೆ ಕಲಿತು ವಿದ್ಯಾವಂತನಾಗಬೇಕೆಂಬ ಆಸೆ ಹೊಂದಿದ್ದಾರೆ.

Leave A Reply

Your email address will not be published.

error: Content is protected !!