Samantha: ಡಿವೋರ್ಸ್ ನೀಡಿ ವರ್ಷ ಕಳೆಯೋದ್ರೊಳಗಡೆ ಮತ್ತೊಬ್ಬ ನಟನ ಜೊತೆಗೆ ಸಮಂತಾ ರೊಮ್ಯಾನ್ಸ್!

Samantha ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಕಾಲಿಟ್ಟು ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಬಹು ಬೇಡಿಕೆ ನಟಿಯಾಗಿ ಬೆಳೆದವರು ನಟಿ ಸಮಂತ(Actress Samantha). ಏ ಮಾಯಾ ಚೇಸಾವೆ ಎನ್ನುವ ಸಿನಿಮಾದಲ್ಲಿ ನಾಗಚೈತನ್ಯ ಅವರ ಜೊತೆಗೆ ನಟಿಸುವ ಮೂಲಕ ಇಬ್ಬರ ನಡುವೆ ಪರಿಚಯ ಹಾಗೂ ಪ್ರೀತಿ ಪ್ರಾರಂಭವಾಗುತ್ತದೆ.

2017ರಲ್ಲಿ ಇಬ್ಬರೂ ಕೂಡ ಪರಸ್ಪರ ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಮನೆಯವರ ಒಪ್ಪಿಗೆಯ ಮೇರೆಗೆ ಎರಡು ಧರ್ಮಗಳ ಅನ್ವಯ ಮದುವೆಯಾಗುತ್ತಾರೆ. ಆದರೆ ಈ ದಾಂಪತ್ಯ ಜೀವನ ಎನ್ನುವುದು ನಾಲ್ಕು ವರ್ಷಗಳ ಕಾಲವೂ ಕೂಡ ಉಳಿಯೋದಿಲ್ಲ. 2021 ರಲ್ಲಿ ಇಬ್ಬರು ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ನಾಗಚೈತನ್ಯ(Naga Chaitanya) ಈಗಾಗಲೇ ಬೇರೊಬ್ಬ ನಟಿಯನ್ನು ಡೇಟಿಂಗ್ ಮಾಡುತ್ತಿರುವುದು ನಿಮಗೆಲ್ಲರಿಗೂ ಗೊತ್ತಿದೆ.

ಇನ್ನು ಈ ಕಡೆ ಸಮಂತ(Samantha) ಕೂಡ ಕಡಿಮೆ ಇಲ್ಲ ತೆಲುಗು ಚಿತ್ರರಂಗದ ಮತ್ತೊಬ್ಬ ನಟನ ಜೊತೆಗೆ ರೋಮ್ಯಾನ್ಸ್ ಮಾಡುವಂತೆ ಕಾಣಿಸಿಕೊಳ್ಳುತ್ತಿದ್ದು ಎಲ್ಲರೂ ಕೂಡ ಆಶ್ಚರ್ಯ ಚಕಿತರಾಗಿದ್ದು ಆ ನಟ ಯಾರು ಎಂಬುದಾಗಿ ತಲೆ ಕೆಡಿಸಿಕೊಂಡಿದ್ದಾರೆ. ಹಾಗಿದ್ದರೆ ಬನ್ನಿ ಆ ನಟ ಯಾರು ಎಂಬುದನ್ನು ತಿಳಿದುಕೊಳ್ಳೋಣ.

ಹೌದು ಮಿತ್ರರೇ, ನಾವು ಮಾತನಾಡುತ್ತಿರುವುದು ವಿಜಯ್ ದೇವರಕೊಂಡ(Vijay Deverakonda) ಅವರ ಬಗ್ಗೆ. ಇಬ್ಬರೂ ಕೂಡ ಖುಷಿಯನ್ನು ಹೊಸ ಸಿನಿಮಾದಲ್ಲಿ ಪ್ರೇಮಿಗಳಾಗಿ ಕಾಣಿಸಿಕೊಳ್ಳುತ್ತಿದ್ದು ಇದನ್ನು ನೆಟ್ಟಿಗರು ಕೂಡ ಮಾತನಾಡಿಕೊಳ್ಳುತ್ತಿದ್ದು ಮುಂದಿನ ದಿನಗಳಲ್ಲಿ ಇದೇನಾದರೂ ನಿಜವಾಗಿಯೂ ಟರ್ನ್ ಔಟ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!