Sapthami Gowda: ಹಾ’ ಟ್ ಡ್ರೆಸ್ ನಲ್ಲಿ ಕಾಂತಾರ ನಟಿ. ಮಾಲ್ಡೀವ್ಸ್ ದ್ವೀಪದಲ್ಲಿ ಸಪ್ತಮಿ ಗೌಡ ಮಾಡ್ತಿರೋದೇನು ಗೊತ್ತಾ?

Kantara Actress ಕಾಂತಾರ ಚಿತ್ರ(Kantara Film) ಎನ್ನುವುದು ಸಾಕಷ್ಟು ಕಲಾವಿದರಿಗೆ ಕನ್ನಡ ಚಿತ್ರರಂಗದಲ್ಲಿ ಪುನರ್ಜನ್ಮವನ್ನು ನೀಡಿದೆ ಎಂದರೆ ತಪ್ಪಾಗಲಾರದು. ನಿರ್ದೇಶಕನಾಗಿ ಸಾಕಷ್ಟು ಸಿನಿಮಾಗಳಲ್ಲಿ ಯಶಸ್ಸು ಸಾಧಿಸಿದ್ದ ರಿಷಬ್ ಶೆಟ್ಟಿ(Rishab Shetty) ಅವರಿಗೆ ಒಬ್ಬ ಕಲಾವಿದನಾಗಿ ತನ್ನನ್ನು ತಾನು ಸಾಬೀತುಪಡಿಸಿಕೊಳ್ಳಲು ಕಾಂತಾರ ಸಿನಿಮಾ ಒಂದೊಳ್ಳೆ ಉದಾಹರಣೆಯಾಗಿ ಕಂಡುಬಂದಿತು. ಇನ್ನು ಕಾಂತಾರ ಸಿನಿಮಾದ ನಾಯಕ ನಟಿಯ ಕುರಿತಂತೆ ಮಾತನಾಡೋಣ ಬನ್ನಿ.

ಕಾಂತರಾ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಅವರಿಗೆ ನಾಯಕ ನಟಿಯಾಗಿ ಲೀಲ ಪಾತ್ರದಲ್ಲಿ ಸಪ್ತಮಿ ಗೌಡ(Sapthami Gowda) ಅವರು ಕಾಣಿಸಿಕೊಳ್ಳುತ್ತಾರೆ. ಸತ್ತಮಿ ಗೌಡ ಕರ್ನಾಟಕ ಪೊಲೀಸ್ ಇಲಾಖೆ ಕಂಡಂತಹ ದಕ್ಷ ಪೊಲೀಸ್ ಅಧಿಕಾರಿಗಳಲ್ಲಿ ಒಬ್ಬರಾಗಿರುವ ಎಸ್ ಕೆ ಉಮೇಶ್(SK umesh) ಅವರ ಪುತ್ರಿಯಾಗಿದ್ದಾರೆ. ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರಧಾರಿಯಾಗಿ ಪರಿಪೂರ್ಣವಾದ ನಟನೆಯನ್ನು ತೋರ್ಪಡಿಸಿದ್ದಾರೆ ಸಪ್ತಮಿ ಗೌಡ.

ಇದಕ್ಕಿಂತಲೂ ಮುಂಚೆ ಸತ್ತಮಗೌಡ ಅವರು ಡಾಲಿ ಧನಂಜಯ್(Daali Dhananjay) ನಾಯಕ ನಟನಾಗಿ ಕಾಣಿಸಿಕೊಂಡಿರುವ ಸೂರ್ಯ ನಿರ್ದೇಶನದಲ್ಲಿ ಮೂಡಿ ಬಂದಿರುವಂತಹ ಪಾಪ್ಕಾರ್ನ್ ಮಂಕಿ ಟೈಗರ್ ಎನ್ನುವ ಸಿನಿಮಾದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು ಆದರೆ ಆ ಸಿನಿಮಾದಲ್ಲಿ ಹೇಳಿಕೊಳ್ಳುವಷ್ಟು ಯಶಸ್ಸು ಸಪ್ತಮಿ ಗೌಡ ಅವರನ್ನು ಹುಡುಕಿಕೊಂಡು ಬಂದಿರಲಿಲ್ಲ. ಆ ಕೊರಗನ್ನು ಕಾಂತಾರ ಸಿನಿಮಾ ನೀಗಿಸಿತು ಎನ್ನಬಹುದು. ಎಲ್ಲಕ್ಕಿಂತ ಪ್ರಮುಖವಾಗಿ ಕಾಂತಾರ(Kantara) ಸಿನಿಮಾದ ನಂತರ ನಟಿ ಸಪ್ತಮಿ ಗೌಡ ಅವರಿಗೆ ಹಲವಾರು ಅವಕಾಶಗಳು ಹುಡುಕಿಕೊಂಡು ಬಂದಿರಬಹುದು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದ ಅತ್ಯಂತ ಭರವಸೆಯ ಯುವ ಉದಯೋನ್ಮುಖ ನಟಿಯಾಗಿದ್ದಾರೆ ಸಪ್ತಮಿ ಗೌಡ.

ಇನ್ನು ಸದ್ಯಕ್ಕೆ ಹಾಲಿಡೇ ಮೂಡನಲ್ಲಿರುವ ಸಪ್ತಮಿ ಗೌಡ(Sapthami Gowda) ಅವರು ಮಾಲ್ಡಿವ್ಸ್ ದ್ವೀಪಕ್ಕೆ ಹೋಗಿದ್ದಾರೆ. ಮಾಲ್ಡಿವ್ಸ್ ದ್ವೀಪದಲ್ಲಿ ಗ್ಲಾಮರಸ್ ಬಟ್ಟೆಯಲ್ಲಿ ಕಾಣಿಸಿಕೊಂಡಿರುವ ಫೋಟೋವನ್ನು ಸಪ್ತಮಿ ಗೌಡ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಈಗಾಗಲೇ ಈ ಫೋಟೋ ವೈರಲ್ ಆಗಿದ್ದು ಪಡ್ಡೆ ಹೈಕಳ ನಿದ್ದೆಯನ್ನು ಕೆಡಿಸಿದೆ ಎಂದು ಹೇಳಬಹುದಾಗಿದೆ.

Leave a Comment

error: Content is protected !!