Mukhesh Ambani: ಮುಕೇಶ್ ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ 10 ನಿಮಿಷ ಕುಣಿದಿದ್ದಕ್ಕೆ ಶಾರುಖ್ ಖಾನ್ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?

Shah Rukh Khan ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಸಾಕಷ್ಟು ಸೋಲುಗಳಿಂದ ಸತತವಾಗಿ ಸೋತು ಸುಣ್ಣವಾಗಿದ್ದ ಸಂದರ್ಭದಲ್ಲಿ ಅವರ ಕೈ ಹಿಡಿದ ಚಿತ್ರವೆಂದರೆ ಪಠಾಣ್. ಪಠಾಣ್(Pathaan) ಸಿನಿಮಾದ ನಂತರ ಅವರ ಜನಪ್ರಿಯತೆ ಎನ್ನುವುದು ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಯ ಬೇರೆ ದೇಶದ ಚಿತ್ರರಂಗದಲ್ಲಿ ಕೂಡ ಸದ್ದು ಜೋರಾಗಿದೆ. ಸಾವಿರ ಕೋಟಿ ಕಲೆಕ್ಷನ್ ಮಾಡುವ ಮೂಲಕ ಕೂಡ ಈ ಸಿನಿಮಾ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದೆ.

ಇವರು ಇತ್ತೀಚಿಗಷ್ಟೇ ಒಬ್ಬ ವಿವಿಐಪಿ ಅವರ ಸಮಾರಂಭದಲ್ಲಿ ವೇದಿಕೆ ಮೇಲೆ ಕೇವಲ 10 ನಿಮಿಷ ಕುಣಿದಿದ್ದಕ್ಕೆ ಸಿಕ್ಕಿರುವ ಸಂಭಾವನೆ ಎಷ್ಟು ಎಂದು ಕೇಳಿದರೆ ಖಂಡಿತ ನೀವು ಕೂಡ ಬೆಚ್ಚಿ ಬೀಳೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಹೌದು ನಾವ್ ಮಾತನಾಡುತ್ತಿರುವುದು ಇತ್ತೀಚಿಗಷ್ಟೇ ಮುಖೇಶ್ ಅಂಬಾನಿ ಅವರ ಜಿಯೋ ವರ್ಲ್ಡ್ ನಲ್ಲಿ ನಡೆದಿರುವಂತಹ ನೀತ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್(Nita Mukhesh Ambani Cultural Centre) ಕಾರ್ಯಕ್ರಮದ ಕುರಿತಂತೆ.

ಕೇವಲ ಶಾರುಖ್ ಖಾನ್(SRK) ಮಾತ್ರವಲ್ಲದೆ ಈ ಕಾರ್ಯಕ್ರಮದಲ್ಲಿ ಇಡೀ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳು ಗಣ್ಯಾತಿ ಗಣ್ಯರು ಸೇರಿದಂತೆ ವಿಶ್ವ ಸಿನಿಮಾ ಜಗತ್ತಿನ ಹಲವಾರು ಫ್ಯಾಷನ್ ಐಕಾನ್ ಗಳು ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಕೇವಲ 10 ನಿಮಿಷಗಳ ಕಾಲ ಕಾಣಿಸಿಕೊಂಡಿದ್ದಕ್ಕೆ ಶಾರುಖ್ ಖಾನ್ ಅವರಿಗೆ ಮುಕೇಶ್ ಅಂಬಾನಿ ನೀಡಿರುವ ಸಂಭಾವನೆ ನಿಜಕ್ಕೂ ಕೂಡ ಕೋಟಿಗಳಿಗೆ ಬೆಲೆನೇ ಇಲ್ವಾ ಎನ್ನುವ ಮನೋಭಾವನೆ ಮೂಡುವಂತೆ ಮಾಡುತ್ತದೆ.

ಹೌದು ಮಿತ್ರರ ಕೇವಲ ವೇದಿಕೆ ಮೇಲೆ 10 ನಿಮಿಷಗಳ ಕಾಲ ತಮ್ಮ ಸೊಂಟವನ್ನು ಬಳಸಿದ ಕ್ಕೆ ಕಿಂಗ್ ಖಾನ್ ಅವರಿಗೆ ನಮ್ಮ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಭರ್ಜರಿ 10 ಕೋಟಿ ರೂಪಾಯಿ ಹಣವನ್ನು ನೀಡಿದ್ದಾರೆ. ಇದು ನಮಗೆ ದೊಡ್ಡ ಮೊತ್ತ ಇರಬಹುದು ಆದರೆ ನಮ್ಮ ಮೋಟಾ ಭಾಯ್ ಆಗಿರುವ ಮುಕೇಶ್ ಅಂಬಾನಿ(Mukesh Ambani) ಅವರಿಗಲ್ಲ.

Leave a Comment

error: Content is protected !!