ಯುವರಾಜ್ ಬೇಕಾದ್ರೆ ಸ್ವಂತ ಪರಿಶ್ರಮದಿಂದ ಮೇಲೆ ಬರಲಿ ನಾನು ಸಹಾಯ ಮಾಡಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದ ಶಿವ ರಾಜಕುಮಾರ್

Shivarajkumar about yuvarajkumar : ದೊಡ್ಮನೆ ಕುಟುಂಬಕ್ಕೆ ಕಲಾದೇವತೆಯ ಆಶೀರ್ವಾದವಿದೆ. ಕನ್ನಡ ಚಿತ್ರರಂಗದಲ್ಲಿ ಮೇರು ನಟರಾದ ಡಾಕ್ಟರ್ ರಾಜಕುಮಾರ್ ಅವರಂತೆ ಅವರ ಮೂವರು ಗಂಡು ಮಕ್ಕಳು ಶಿವಣ್ಣ, ರಾಘಣ್ಣ, ಅಪ್ಪು ಅವರು ಸಿನಿ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಮಿಂಚಿದ್ದು, ಇದೀಗ ಮೊಮ್ಮಕ್ಕಳು ಕೂಡ ಸಿನಿ ಪ್ರವೇಶ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿರುವವರು ರಾಘವೇಂದ್ರ ರಾಜಕುಮಾರ್ ಅವರ ಪುತ್ರ, ಯುವರಾಜ್. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಪ್ರಸಿದ್ಧ ನಿರ್ದೇಶಕರಾದ ಸಂತೋಷ್ ಆನಂದ ರಾಮ್ ನಿರ್ದೇಶನದಲ್ಲಿ ಮೂಡಿಬರುವ ‘ಯುವ ರಣಧೀರ ಕಂಠೀರವ’ ಚಿತ್ರದಲ್ಲಿ ಯುವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದಾರೆ ಎಂಬ ವಿಚಾರವು ನಿಮಗೆಲ್ಲ ತಿಳಿದೇ ಇದೆ.

ಇದಾಗಲೇ ‘ಯುವ ರಣದೀರ ಕಂಠೀರವ’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಹಲವಾರು ಜನರ ಮೆಚ್ಚುಗೆಗೆ ಪಾತ್ರವಾಗಿದೆ.ಕನ್ನಡ ಭಾಷಿಗರನ್ನಷ್ಟೇ ಸೆಳೆದಿದ್ದಲ್ಲದೆ, ದಕ್ಷಿಣ ಭಾರತದ ಸಿನಿ ಪ್ರಿಯರ ಕುತೂಹಲ ಕೆರಳಿಸಿದೆ. ಚಿತ್ರವೂ ರಿಲೀಸ್ ಆಗುವ ಮೊದಲೇ ಟೀಸರ್ ನಿಂದಲೇ, ಯುವರಾಜ್ ಅವರಿಗೆ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಟ್ಟಿದೆ. ಚುಚಲ ಚಿತ್ರದಲ್ಲಿಯೇ ಇವರ ಅಭಿನಯವನ್ನು ಗಮನಿಸಿದ ಅಭಿಮಾನಿಗಳು, ‘ಯುವರಾಜ್ ಸಿನಿರಂಗದಲ್ಲಿ ಸ್ಟಾರ್ ನಟನಾಗಿ ಮಿಂಚುವ ಬಗ್ಗೆ ಯಾವುದೇ ಸಂದೇಹವಿಲ್ಲ’ ಎಂದಿದ್ದಾರಂತೆ.

Yuvarajkumar with puneet rajkumar
Yuvarajkumar with puneet rajkumar

ಈ ಕುರಿತಾಗಿ ಹ್ಯಾಟ್ರಿಕ್ ಹೀರೋ ಶಿವಣ್ಣ(shivanna) ಕೂಡ ಮಾತನಾಡಿದ್ದು, ‘ಕನ್ನಡ ಚಿತ್ರರಂಗದಲ್ಲಿ ಪ್ರೇಮ ಕಥೆ, ಪೌರಾಣಿಕ ಸನ್ನಿವೇಶ, ಆಕ್ಷನ್ ಸಿನಿಮಾ, ಕಾದಂಬರಿ ಆಧಾರಿತ ಚಿತ್ರಕಥೆಗಳು ಸೇರಿದಂತೆ ಹಲವಾರು ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿಯೂ, ಪಾತ್ರಕ್ಕೆ ತಕ್ಕನಾಗಿ ಉದ್ದುದ್ದ ಡೈಲಾಗ್ಸ್ ಗಳನ್ನು ಯಾವುದೇ ಅಡೆತಡೆ ಇಲ್ಲದೆ, ತೊದಲದೆ ಪಟ ಪಟ ಅಂತ ಹೇಳುವ ಕಲೆ, ರಾಜಕುಮಾರ್ ಅವರ ಮಕ್ಕಳಾದ ನಮಗಿಂತಲೂ ಚೆನ್ನಾಗಿ ಯುವರಾಜ್ ಗೆ ಒಲಿದಿದೆ’ ಎಂದು ಟೀಸರ್ ನೋಡಿದ ಬಳಿಕ ಹೊಗಳಿದ್ದರು.

Shivarajkumar about yuvarajkumar

ಸಂದರ್ಶನ ಒಂದರಲ್ಲಿ ಮಾಧ್ಯಮದವರು ಶಿವರಾಜ್ ಕುಮಾರ್ (shivarjkumar) ಅವರಿಗೆ, ‘ನೀವು ಯುವರಾಜ್ಗೆ ಯಾವ ರೀತಿಯ ಸಪೋರ್ಟ್ ಮಾಡುತ್ತೀರಿ?’ ಎಂದು ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಯಾಗಿ ಶಿವಣ್ಣ ನೀಡಿದ ಉತ್ತರ ಎಲ್ಲರನ್ನು ಅಚ್ಚರಿಗೊಳಿಸಿದೆ. ಶಿವಣ್ಣ ಅವರು, ‘ನಾನು ಯಾವುದೇ ರೀತಿಯ ಸಲಹೆ ಸೂಚನೆಗಳನ್ನು ನೀಡುವುದಿಲ್ಲ’ ಎಂದರು. ಯಾಕೆ? ಎಂದು ಮರು ಪ್ರಶ್ನಿಸಿದಾಗ ಅವರು, ‘ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ಆಲೋಚನೆ, ಬುದ್ಧಿ, ಕಲೆ ಇರುತ್ತದೆ; ಪ್ರತಿಯೊಬ್ಬರು ಅವರವರ ಶ್ರಮದಿಂದಲೇ ಮೇಲಕ್ಕೆ ಬರಬೇಕು. ಯುವರಾಜ್ ಕೂಡ ಹಾಗೆ ಆತನ ಬುದ್ಧಿವಂತಿಕೆ ಮತ್ತು ಕೌಶಲ್ಯಗಳಿಂದ, ಸ್ವ ಪ್ರತಿಭೆಯನ್ನು ಹೊರಹಾಕಿ ಮೇಲೆ ಬರಲಿ; ನಮ್ಮ ಸಹಕಾರದಿಂದಲ್ಲ’ ಎಂದು ಎಲ್ಲರಿಗೂ ಪಾಠವಾಗಬಲ್ಲ ಒಳ್ಳೆಯ ನುಡಿಗಳನ್ನು ಆಡಿದರು.

ಇದನ್ನ ಓದಿ : ಅಪ್ಪು ಅವರ ಸಮಾಜ ಸೇವೆ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲು ಶಿವಣ್ಣ ವರ್ಷಕ್ಕೆ ಮಾಡುತ್ತಿರುವ ಖರ್ಚೆಷ್ಟು ಗೊತ್ತಾ?

Leave a Comment

error: Content is protected !!