ಪುನೀತ್ ಅವರ ಆತ್ಮದ ಜೊತೆಯಲ್ಲಿ ಸಂಭಾಷಣೆ ನಡೆಸಿದ ಶ್ರೀರಾಮಚಂದ್ರ ಗುರೂಜಿ …! ಯಾವೆಲ್ಲ ವಿಷಯಗಳು ಬಹಿರಂಗವಾಯಿತು ಗೊತ್ತಾ??

ಪುನೀತ್ ರಾಜಕುಮಾರ್ ಅವರು ತೀರಿಕೊಂಡು ವರ್ಷವಾಗಿದೆ. ಅಂದಿನ ದಿನ ‘ಪುನೀತ್ ಅವರಿಗೆ ಲಘು ಹೃದಯಘಾತವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ’ ಎಂಬ ವಿಷಯ ತಿಳಿಯುತ್ತಿದ್ದಂತಲೇ ಅದೆಷ್ಟೋ ಜನರು ‘ಬೇಗನೆ ಗುಣಮುಖವಾಗಿ ಬರಲಿ’ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದರು. ಸ್ವಲ್ಪ ಸಮಯದ ನಂತರ ಹರಡಿದ ನಿಧನದ ಸುದ್ದಿ ನಂಬಲು ಅಸಾಧ್ಯವಾಗಿತ್ತು. ಈ ಸುದ್ದಿಯು ಸುಳ್ಳಾಗಿರಲಿ ಎಂದು ಅಭಿಮಾನಿಗಳು ಆಶಿಸುತ್ತಿದ್ದರು . ಆದರೆ ಊಹೆಗೂ ಮೀರಿ ಪುನೀತ್ ಅವರ ಸಾವಿನ ಕಹಿ ಸುದ್ದಿ ನಿಜವಾಗಿತ್ತು.

ಕುಟುಂಬಸ್ಥರು, ಆಪ್ತರು, ಸಂಬಂಧಿಕರು, ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಕಲಾವಿದರೆಲ್ಲರೂ ದುಃಖಿತರಾಗಿದ್ದರು. ಪವರ್ ಸ್ಟಾರ್ ಇಲ್ಲದ ಕನ್ನಡ ಚಿತ್ರರಂಗವು ಶಕ್ತಿ ಕಳೆದುಕೊಂಡಂತಾಗಿತ್ತು. ‘ಜೊತೆಗಿರದ ಜೀವ ಎಂದಿಗೂ ಜೀವಂತ’ ಎಂಬ ಪರಮಾತ್ಮ ಚಿತ್ರದ ಸಾಲುಗಳನ್ನು ಅಭಿಮಾನಿಗಳು, ಪುನೀತ್ ಅವರನ್ನು ಹೃದಯದಲ್ಲಿರಿಸಿಕೊಂಡು ನಿಜವಾಗಿಸಿದ್ದಾರೆ. ಉತ್ತಮ ಕಥೆಗಳೊಂದಿಗೆ ತೆರೆಯ ಮೇಲೆ ಕಾಣಿಸಿಕೊಳ್ಳುತ್ತಿದ್ದ ಪುನೀತ್ ಅವರ ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳು ನೊಂದು ಕೂತಿದ್ದಾರೆ. ಪುನೀತ್ ಅವರು ಮತ್ತೊಮ್ಮೆ ಕರ್ನಾಟಕದಲ್ಲಿ ಜನಿಸಲಿ ಎಂದು ಎಲ್ಲರೂ ಪ್ರಾರ್ಥಿಸಿದ್ದಾರೆ.

‘ಮರಣವು ಒಂದು ಜನ್ಮದ ಅಂತಿಮ ಹಂತವಾದರೆ ಇನ್ನೊಂದು ಜನ್ಮದ ಪ್ರಾರಂಭ’ ಎಂಬ ನಂಬಿಕೆಯಿದೆ. ಮರುಜನ್ಮದಲ್ಲಿ ಜೀವಿಯು ಹಿಂದಿನ ಜನ್ಮದ ಪ್ರದೇಶದಲ್ಲಿಯೂ ಅಥವಾ ಬೇರಾವ ಸ್ಥಳದಲ್ಲಿಯಾದರೂ ಜನಿಸಬಹುದು. ಪುನರ್ಜನ್ಮದ ಬಗ್ಗೆ ಸಾಮಾನ್ಯವಾಗಿ ಎಲ್ಲಾ ಧರ್ಮದ ಯಾವುದಾದರೊಂದು ಹೊತ್ತಿಗೆಯಲ್ಲಿ, ತೀರ ಮುಂದುವರೆದ ಪಶ್ಚಿಮಾತ್ಯ ದೇಶದ ಹಳೆಯ ಜನರ ಬರವಣಿಗೆಯಲ್ಲಿ ಉಲ್ಲೇಖಿತವಾಗಿದೆ. ಇದರ ನಂಬಿಕೆ ಭಾರತದಂತ ದೇಶಗಳಲ್ಲಷ್ಟೇ ಅಲ್ಲದೆ ಅಮೆರಿಕದಂತ ದೇಶಗಳಲ್ಲಿಯೂ ಪ್ರಯೋಗಗಳು ನಡೆಯುವುದುಂಟು. ‘ಪುನೀತ್ ಅವರು ಇನ್ನೊಮ್ಮೆ ಜನಿಸುತ್ತಾರೆ’ ಎಂದು ನಟ ಜಗ್ಗೇಶ್ ಹೇಳಿದ್ದರು.

ಆಧ್ಯಾತ್ಮಿಕ ಚಿಂತಕರು ಹಾಗೂ ಸಂಮೋಹಿನಿ ತಜ್ಞರು ಆದ ಶ್ರೀರಾಮಚಂದ್ರ ಗುರೂಜಿ ಅವರು ಪುನೀತ್ ಅವರ ಪುನರ್ಜನ್ಮದ ಬಗ್ಗೆ ಮಾತನಾಡಿದ್ದಾರೆ. ‘ತಮ್ಮ ತಮ್ಮ ಕರ್ಮದ ಅನುಸಾರ ಮರಣದ ನಂತರ ಜೀವಿಯು ಮತ್ತೊಮ್ಮೆ ಹುಟ್ಟು ಪಡಿಯುತ್ತದೆ. ಅಕಾಲಿಕ ಮರಣ ಹೊಂದಿದ ಪುನೀತವರು ಕೂಡ ಮತ್ತೊಮ್ಮೆ ಜನಿಸಿ ಬರಲಿದ್ದಾರೆ. ಅಂತಿಮ ದರ್ಶನಕ್ಕಾಗಿ ನೆರೆದ ಜನಸಮೂಹವೇ ಹೇಳುವಂತೆ, ಇವರು ಎಲ್ಲರಿಗೂ ಬೇಕಾದ ವ್ಯಕ್ತಿ.

ಇಂಥವರು ಮತ್ತೊಮ್ಮೆ ಜನಿಸಲಿ ಎಂದು ನಾನು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ. ಹಿಂದೊಮ್ಮೆ ಬಾಲಕನಲ್ಲಿ ಸಾಯಿಬಾಬಾ ಅವರ ಆತ್ಮವನ್ನು ಕರೆಸಿ ಮಾತನಾಡಿಸಿದ ಶ್ರೀರಾಮಚಂದ್ರ ಗುರೂಜಿ ಅವರು ಪುನೀತ್ ಅವರ ಆತ್ಮದ ಜೊತೆಯಲ್ಲಿ ಸಂಭಾಷಣೆ ನಡೆಸಲು ಸಿದ್ಧರಿದ್ದಾರೆ. ಇದರಿಂದ ಅಪ್ಪು ಅವರ ಕೊನೆಯಾಸೆಯೇನಾಗಿತ್ತು ಎಂಬುದನ್ನು ತಿಳಿದುಕೊಳ್ಳಬಹುದು. ಕುಟುಂಬಸ್ಥರ ಒಪ್ಪಿಗೆಯು ಅನಿವಾರ್ಯವಾದ್ದರಿಂದ ಆತ್ಮವನ್ನು ಕರಿಸುತ್ತಾರೆಯೂ? ಇಲ್ಲವೋ? ಎಂಬುದು ತಿಳಿಯದ ವಿಚಾರ.

Leave a Comment

error: Content is protected !!