ಪದ್ಮಶ್ರೀ ಪ್ರಶಸ್ತಿಗೆ ಪುನೀತ್ ರಾಜಕುಮಾರ್ ಅವರ ಹೆಸರನ್ನು ಸೂಚಿಸಿ ಪತ್ರ ಬರೆದ, ಸೌತ್ ಇಂಡಿಯನ್ ನಟರುಗಳು

ಡಾಕ್ಟರ್ ರಾಜಕುಮಾರ್ ಅವರ ಪುತ್ರ ಪುನೀತ್ ರಾಜಕುಮಾರ್ ಅವರು ಕನ್ನಡ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟಾಗಲೇ, ಅಭಿಮಾನಿಗಳು ತಮ್ಮ ಹೃದಯದಲ್ಲಿ ಅಳಿಸಲಾಗದ ಪುನೀತ್ ಅವರ ಮೂರ್ತಿಯನ್ನು ಕೆತ್ತನೆ ಮಾಡಿ, ಹರಸಿ, ಹಾರೈಸಿ ಅವರ ಚಿತ್ರಗಳನ್ನು ಗೆಲ್ಲಿಸುತ್ತಾ, ಸಂಭ್ರಮಿಸುತ್ತಾ, ಬಂದಿದ್ದಾರೆ.
ಪುನೀತ್ ರಾಜಕುಮಾರ್ ಅವರು ಸರಳ ಸ್ವಭಾವದವರು; ಜೊತೆಗಾರರಿರಲಿ, ಅಭಿಮಾನಿಗಳಿರಲಿ, ಶ್ರೀಮಂತರಿರಲಿ, ಬಡವರಿರಲಿ ಎಲ್ಲರನ್ನು ಸಮಾನವಾಗಿ ಕಂಡು, ಸಾಮಾನ್ಯನಂತೆ ಬೆರೆತು, ತನ್ನ ಸುತ್ತಮುತ್ತಲಿನವರ ಕಷ್ಟ ಸುಖಗಳನ್ನು ವಿಚಾರಿಸುತ್ತಾ, ಎಲ್ಲರೂ ನಗುತ್ತಲೇ ಬದುಕಬೇಕೆಂದು ಆಶಿಸಿದವರು.

ಇವರ ಅಭಿಮಾನಿ ಬಳಗದ ವ್ಯಾಪ್ತಿ ಕೇವಲ ಕನ್ನಡಿಗರ ತಾಯಿನಾಡು ಕರ್ನಾಟಕಕ್ಕೆ ಅಷ್ಟೇ ಸೀಮಿತವಾಗಿಲ್ಲ. ಪರಭಾಷಿಗರು ಕೂಡ ಇವರನ್ನು ಮೆಚ್ಚಿ ಚಿತ್ರಗಳನ್ನು ವೀಕ್ಷಿಸುತ್ತಾ ಬಂದಿದ್ದಾರೆ. ಹಲವಾರು ನಟರು ‘ಪುನೀತವರನ್ನು ನೋಡಿ ನಾವು ಕಲಿಯುವುದು ಬಹಳಷ್ಟು ಇದೆ’ ಎಂದು ಹಾಡಿ ಹೊಗಳಿದ್ದಾರೆ.

ಉತ್ತಮ ಸಂದೇಶ ಸಾರುವ ಚಿತ್ರಕಥೆಗಳಲ್ಲಿ ನಾಯಕನಾಗಿ ಬಣ್ಣ ಹಚ್ಚಿ ಸಾಲು ಸಾಲು ಹಿಟ್ ಚಿತ್ರಗಳನ್ನು ನೀಡಿದ ಪುನೀತ್ ಅವರ ಕನ್ನಡ ಚಿತ್ರರಂಗದ ಮೇಲಿನ ಒಲವನ್ನು ಪರಿಗಣಿಸಿ ಈಗಾಗಲೇ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಲ್ಲದೆ ಇವರು ಜನಿಸಿದ ದಿನವನ್ನು ಸ್ಪೂರ್ತಿ ದಿನವಾಗಿ ಆಚರಿಸುವಂತೆ ಸೂಚಿಸಿ ಘೋಷಿಸಲಾಗಿದೆ. ಅಲ್ಲದೆ ಅಕ್ಟೋಬರ್ 28 ರಿಂದ ತೆರೆಕಂಡ ಪುನೀತ್ ಅವರ ಕನಸಿನ ಗಂಧದಗುಡಿ ಚಿತ್ರದ ದರವನ್ನು ನಾಲ್ಕು ದಿನದ ಮಟ್ಟಿಗೆ ಕಡಿಮೆ ಮಾಡಿ ಸಾವಿರಾರು ಸಂಖ್ಯೆಯಲ್ಲಿ ಮಕ್ಕಳು ವೀಕ್ಷಿಸುವಂತೆ, ಅವಕಾಶವನ್ನು ಕರ್ನಾಟಕ ಸರ್ಕಾರ ಕಲ್ಪಿಸಿಕೊಟ್ಟಿದೆ.

ಇದೀಗ ಕೇಳಿ ಬಂದ ಹಾಗೆ ಪುನೀತ್ ರಾಜಕುಮಾರ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡುವಂತೆ ತೆಲುಗು ಸಿನಿಮಾ ರಂಗದಿಂದ ಕೇಂದ್ರ ಸರ್ಕಾರಕ್ಕೆ ಪತ್ರ ತಲುಪಲಿದೆಯಂತೆ. ಪುನೀತ್ ರಾಜಕುಮಾರ್ ಅವರ ನಮನ ಕಾರ್ಯಕ್ರಮದ ನಂತರ ಈ ಕುರಿತಾಗಿ ಮಾತನಾಡಿರುವ ನಟ ಮನೋಜ್ ‘ಸಿನಿಮಾ ರಂಗದ ಪದ್ಮಶ್ರೀ ಪ್ರಶಸ್ತಿಗಾಗಿ ಪುನೀತ್ ರಾಜಕುಮಾರ್ ಅವರ ಹೆಸರನ್ನು ಶಿಫಾರಸ್ಸು ಮಾಡಿ, ಪುನೀತ್ ಅವರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸುವಂತೆ ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿದ್ದೇವೆ; ಎಲ್ಲಾ ಚಿತ್ರರಂಗ ಸಂಘಗಳು ಮತ್ತು ಕಲಾವಿದರು ಸೇರಿಕೊಂಡು ಪತ್ರವನ್ನು ಬರೆಯುತ್ತೇವೆ’ ಎಂದಿದ್ದಾರೆ.

ಪುನೀತ್ ರಾಜಕುಮಾರ್ ಅವರು ತೆಲುಗು ಚಿತ್ರರಂಗದ ನಟರೊಂದಿಗೆ ಒಳ್ಳೆಯ ಸಂಬಂಧವನ್ನು ಹೊಂದಿದ್ದು, ಎಲ್ಲರೂ ಸಹಜವಾಗಿಯೇ ಒಪ್ಪಿಕೊಂಡು ಇಷ್ಟಪಡುವಂತಹ ವ್ಯಕ್ತಿತ್ವವನ್ನು ಹೊಂದಿದ್ದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ತೆಲುಗು ನಾಡಿನಲ್ಲಿಯು ಅಪ್ಪು ಅವರ ಬಗ್ಗೆ ಅಪಾರ ಪ್ರೇಮವಿತ್ತು; ತೆಲುಗು ಚಿತ್ರರಂಗದ ನಟರ ಕಲಾವಿದರ ಪ್ರೇಮವು, ಪುನೀತ್ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಬೇಕೆಂಬ ಆಶಯದೊಂದಿಗೆ ಹೊರಹೊಮ್ಮಿದೆ

Leave a Comment

error: Content is protected !!