ಗೆಳತಿಯ ಗಂಡನನ್ನೇ ಪಟಾಯಿಸಿ ವಿವಾಹವಾಗುತ್ತಿದ್ದಾರೆ ಅಪ್ಪು ಜೋತೆ ನಟಿಸಿದ್ದ ಬಿಂದಾಸ್ ಚಿತ್ರದ ಬೆಡಗಿ ಹನ್ಸಿಕಾ

ಹನ್ಸಿಕಾ ನಮಗೆಲ್ಲರಿಗೂ ತಿಳಿದಿರುವ ಹಾಗೆ ತಮಿಳು ತೆಲುಗು ಕನ್ನಡ ಹಿಂದಿ ಚಿತ್ರಗಳಲ್ಲಿ ಕಾಣಿಸಿಕೊಂಡು ಬಹುಭಾಷಾ ನಟಿ ಎನಿಸಿಕೊಂಡಿದ್ದಾರೆ. ಕನ್ನಡದ ಬಿಂದಾಸ್ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಇವರು ಜನಿಸಿದ್ದು ಆಗಸ್ಟ್ 9 1991ರಲ್ಲಿ. ಇವರಿಗೀಗ 31 ವರ್ಷ. ಇದೀಗ ಮದುವೆಯಾಗುವ ವಿಚಾರವನ್ನು ಹನ್ಸಿಕಾ ಅವರು ಹೊರಹಾಕಿದ್ದು, ಸಖತ್ ಟ್ರೋಲ್ ಗೆ ಕಾರಣವಾಗಿದೆ.

ಹನ್ಸಿಕಾ ಹಾಗೂ ಸೋಹೈಲ್ ಕತ್ರಿಯ ಅವರ ಪ್ರಿ ವೆಡ್ಡಿಂಗ್ ಹಬ್ಬದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಇಬ್ಬರು ಕೆಂಪು ಬಣ್ಣದ ಅಂದದ ಉಡುಗೆಯನ್ನು ತೊಟ್ಟು ಹಾಡು ಕುಣಿತವೆನ್ನುತ್ತಾ ಸಂಭ್ರಮಿಸಿದ್ದಾರೆ. ಮದುವೆಯಾಗುವುದರಲ್ಲಿ ಟ್ರೋಲ್ ಆಗುವ ವಿಷಯ ಏನಿದೆಯಪ್ಪ? ಎಂದು ನೀವು ಅಂದುಕೊಳ್ಳುತ್ತಿದ್ದರೆ, ಅಸಲಿ ಕಥೆಗಾಗಿ ಬರಹವನ್ನು ಪೂರ್ತಿಯಾಗಿ ಓದಿ..

ಹನ್ಸಿಕಾ, ಸೊಹೈಲ್, ರಿಂಕಿ ಈ ಮೂವರು ಬಾಲ್ಯದಿಂದಲೂ ಒಳ್ಳೆಯ ಸ್ನೇಹಿತರು. ತಮ್ಮ ಶಿಕ್ಷಣದ ಹಾದಿಯಿಂದಲೇ ಸ್ನೇಹಕ್ಕಿಂತಲೂ ಪರಸ್ಪರ ಹೆಚ್ಚಿನದಾಗಿಯೇ ಒಡನಾಡುತ್ತಿದ್ದ ರಿಂಕಿ ಹಾಗೂ ಸೊಹೇಲ್ ತಮ್ಮ ಪ್ರೀತಿಯನ್ನು ವಿವಾಹದಿಂದ ಬಂಧಿಸಿಕೊಂಡರು. ಹನ್ಸಿಕಾ ಅವರು ರಿಂಕಿ ಮತ್ತು ಸೊಹೈಲ್ ಅವರ ವಿವಾಹದ ಎಲ್ಲಾ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದರು. ಹನ್ಸಿಕಾ ವಧು-ವರರಿಗೆ ಕಾಮನ್ ಫ್ರೆಂಡ್ ಆಗಿದ್ದಳು.

ಸೊಹೈಲ್ ಅವರಿಗೆ ಗೋವಾದಲ್ಲಿ ರಿಂಕಿಯೊಂದಿಗೆ ವಿವಾಹವಾಗುವ ತಯಾರಿ ನಡೆಸುತ್ತಿರುವಾಗಲೇ ಹನ್ಸಿಕಾ ಅವರ ಮೇಲೆ ಮನಸಾಯಿತಂತೆ. ಹನ್ಸಿಕಾ ಆಗ ತಾನೆ ತನ್ನ ಮಾಜಿ ಗೆಳೆಯನೊಂದಿಗೆ ಬ್ರೇಕ್ ಅಪ್ ಮಾಡಿಕೊಂಡು ಬಂದಿದ್ದಳಂತೆ. ರಿಂಕಿ ಮತ್ತು ಸೊಹೈಲ್ ನಡುವೆ ಎಲ್ಲವೂ ಸರಿಯಾಗಿಯೇ ಇತ್ತು ಅಲ್ಲದೆ ಸೊಹೈಲ್ ಮತ್ತು ಹನ್ಸಿಕಾರ ರಿಲೇಶನ್ ಶಿಪ್ ಕೂಡ ಮುಂದೆ ಸಾಗುತ್ತಲೇ ಇತ್ತು. ಹನ್ಸಿಕಾಳ ಮೇಲಿನ ಒಲವೇ ಜಾಸ್ತಿಯಾಗಿ ಇದೀಗ ಹನ್ಸಿಕಾ ಹಾಗೂ ಸೊಹೈಲ್ ಮದುವೆಯಾಗಲಿದ್ದಾರೆ.

Actress hansika marraige

ಇವರು ವಿವಾಹ ವಾಗುವ ವಿಷಯವು ಹೊರ ಬೀಳುತ್ತಿದ್ದಂತಲೇ, ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ರಿಂಕಿ ಹಾಗೂ ಸೊಹೈಲ್ ವಿವಾಹದ ಸಂಪೂರ್ಣ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಇಂದಿಗೂ ಕಾಣಿಸಿಗುತ್ತವೆ. ವಿವಾಹದಲ್ಲಿ ಹನ್ಸಿಕಾ ಪಾಲ್ಗೊಂಡಿದ್ದನ್ನು ಮತ್ತೊಮ್ಮೆ ಖಚಿತಪಡಿಸಿಕೊಂಡು ನೆಟ್ಟಿಗರು ‘ಗೆಳತಿಯ ಗಂಡನನ್ನೇ ಪಟಾಯಿಸಿ ವಿವಾಹವಾಗುತ್ತಿದ್ದಾಳೆ ಹನ್ಸಿಕಾ’ ಎಂದು ಕಾಲೆಳೆಯುತ್ತಿದ್ದಾರೆ.

ಸೊಹೈಲ್ ಮತ್ತು ಹನ್ಸಿಕಾ ಇಬ್ಬರೂ 2019ರಿಂದ ಒಟ್ಟಿಗೆ ಬ್ಯುಸಿನೆಸ್ ನಡೆಸುತ್ತಿದ್ದಾರೆ. ಜೈಪುರದ 450 ವರ್ಷಗಳ ಹಿಂದಿನ ಮಂಟೋಡ ಕೋಟೆಯಲ್ಲಿ ಹನ್ಸಿಕಾ ಮತ್ತು ಸೋಹೇಲ್ ಮದುವೆ ನೆರವೇರಲಿದೆಯಂತೆ. ಹನ್ಸಿಕಾ ಮದುವೆ ಸಮಾರಂಭದಲ್ಲಿ ಕುಟುಂಬದವರು, ತೀರ ಆಪ್ತರು ಮಾತ್ರ ಭಾಗಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಎರಡು ದಿನಗಳ ಮುಂಚಿತವಾಗಿಯೇ ಮದುವೆಯ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಡಿಸೆಂಬರ್ 4ರಂದು ಮಾಂಗಲ್ಯ ಧಾರಣೆಯ ಮೂಲಕ ವಧು ವರರು ನವ ಜೀವನಕ್ಕೆ ಕಾಲಿಡಲಿದ್ದಾರಂತೆ.

Leave a Comment

error: Content is protected !!