ಅಪ್ಪು ಜೊತೆ ದ್ವಿತ್ವ ಚಿತ್ರದಲ್ಲಿ ನಟಿಸಬೇಕಿದ್ದ ತಮಿಳಿನ ಖ್ಯಾತ ನಟಿ ಯಾರು ಗೊತ್ತಾ

ತಮಿಳು ಮತ್ತು ತೆಲುಗು ಚಿತ್ರರಂಗದ ನಟಿ ತ್ರಿಷಾ ಕನ್ನಡದ ಪವರ್ ಚಿತ್ರದಲ್ಲಿ ಪ್ರಶಾಂತಿಯಾಗಿ ನಟಿಸಿರುವುದು ಗೊತ್ತಿರುವ ವಿಚಾರ. ಅಲ್ಲದೆ ಈ ಚಿತ್ರದಲ್ಲಿ ನಾಯಕ ನಟನಾಗಿ ಪುನೀತ್ ರಾಜಕುಮಾರ್ ಅವರು ನಟಿಸಿದ್ದರು. ತೆರೆಯ ಮೇಲೆ ಪುನೀತ್ ರಾಜಕುಮಾರ್ ಮತ್ತು ತ್ರಿಷಾ ಅವರ ಜೋಡಿ ಪವರ್ ಫುಲ್ ಆಗಿ ಕಂಡಿದ್ದು, ಚಿತ್ರವು ಪ್ರಶಂಸೆಗೆ ಪಾತ್ರವಾಗಿತ್ತು. ಪವರ್ ಸ್ಟಾರ್ ಅವರ ಜೊತೆ ನಟಿಸಿದ್ದು ಖುಷಿಯಾಗಿದೆ ಎಂದು ತ್ರಿಷಾ ತಿಳಿಸಿದ್ದರು.

ಯು ಟರ್ನ ಖ್ಯಾತಿಯ ನಿರ್ದೇಶಕ ಪವನ್ ಕುಮಾರ್ ಅವರ ಹೊಸ ಚಿತ್ರ “ದ್ವಿತ್ವಾ” ಗೆ ಪುನೀತ್ ರಾಜಕುಮಾರ್ ಮತ್ತು ತ್ರಿಷಾ ಜೋಡಿಯಾಗಿಲಿದ್ದಾರೆ ಎಂದು ಚಿತ್ರ ತಂಡ ಇತ್ತೀಚೆಗಷ್ಟೇ ತಿಳಿಸಿತ್ತು. ಹಲವು ಚೂರುಗಳಿಂದಾದ ಮುಖದ ಪೊಸ್ಟರ್ ಕೂಡ ಬಂದಿತ್ತು.ಪುನೀತ್ ರಾಜಕುಮಾರ್ ಅವರು ‘ಪವನ್ ಅವರ ಸಂಗಡ ಚಿತ್ರ ಮಾಡಲು ಉತ್ಸುಕನಾಗಿದ್ದೇನೆ ಮತ್ತು ನನ್ನನ್ನು ಹೊಸ ಅವತಾರದಲ್ಲಿ ನೋಡ ಬಯಸಿದ್ದೇನೆ’ ಎಂದಿದ್ದರು. ‘ಹೊಂಬಾಳೆ ಫಿಲ್ಮ್ಸ್ ಇದು ನನ್ನ ಎರಡನೇ ಮನೆ’ ಎಂದು ಸಂತಸ ವ್ಯಕ್ತಪಡಿಸಿದ್ದರು.

PS 1 ಚಿತ್ರದ ಪ್ರಿ ರಿಲೀಸ್ ಇವೆಂಟ್ ನಲ್ಲಿ ನಟಿ ತ್ರಿಷಾ ಅವರು ನೆನಪುಗಳನ್ನು ಮೆಲುಕು ಹಾಕಿದ್ದಾರೆ. ‘ನಾನು ಅಪ್ಪು ಅವರ ಜೊತೆ ಪವರ್ ಚಿತ್ರದಲ್ಲಿ ನಟಿಸಿದ್ದೆ. 50 ದಿನಗಳ ಕಾಲ ಶೂಟಿಂಗ್ ನಲ್ಲಿ ಅಪ್ಪು ಅವರ ಸಂಗಡ ಇದ್ದೆ. ನಾನು ಪುನೀತ್ ಸರ್ ಜೊತೆ ಇನ್ನೊಂದು ಚಿತ್ರಕ್ಕಾಗಿ ಆಯ್ಕೆ ಆಗಿದ್ದೆ. ಚಿತ್ರದ ಹೆಸರು ‘ದ್ವಿತ್ವಾ’. ನಾವು ನಿಜವಾಗಿಯೂ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ.

‘ಇವರ ಮರಣ ಹೃದಯ ಚೂರಾಗುವ ಸಂಗತಿಯಾಗಿದೆ. ಅಪ್ಪು ಅವರ ಜತೆ ಮೊದಲ ಸಲ ನಟಿಸಲಿದ್ದೇನೆ ಅಂತ ತುಂಬಾ ಸಂತೋಷವಾಗಿತ್ತು. ಇದೀಗ ಆ ಸಿನಿಮಾದಲ್ಲಿ ಅಪ್ಪು ಅವರಿಲ್ಲದೆ ನನಗೆ ನಟನೆ ಮಾಡೋದು ಕಷ್ಟ.ಒಂದು ವೇಳೆ ಆ ಚಿತ್ರದಲ್ಲಿ ನಾನು ಅಪ್ಪು ಅವರಿಲ್ಲದೆ ಬೇರೊಬ್ಬರ ಜೊತೆ ನಟಿಸಿದರೂ ಕೂಡ ನನಗೆ ಪ್ರತಿದಿನವೂ ಸಿನಿಮಾ ಸೆಟ್ ನಲ್ಲಿ ಅಪ್ಪುವವರು ನೆನಪಾಗುತ್ತಾರೆ . ಅಲ್ಲದೆ ಕಾರ್ಯಕ್ರಮದಲ್ಲಿ ನೀಡಿದ ತಮ್ಮದೇ ಫೋಟೋ ವೊಂದನ್ನು ಇನ್ಸ್ಟಾದಲ್ಲಿ ಪೊಸ್ಟ್ ಮಾಡುವುದಾಗಿ ಹೇಳಿದರು. PS 1 ಚಿತ್ರ ಹಾಗೂ ಚಿತ್ರತಂಡದ ಬಗ್ಗೆ ಹರ್ಷವನ್ನೂ ವ್ಯಕ್ತಪಡಿಸಿದರು.

Leave A Reply

Your email address will not be published.

error: Content is protected !!