ಎಂಗೇಜ್ಮೆಂಟ್ ಸಂದರ್ಭದಲ್ಲಿ ವಸಿಷ್ಠ ಸಿಂಹ ಹರಿಪ್ರಿಯಾ ಅವರ ಬೆರಳಿಗೆ ಹಾಕಿದ ಉಂಗುರದ ಬೆಲೆ ಎಷ್ಟು ಗೊತ್ತಾ?

Vasishta simha and haripriya : ನಮಗೆ ಚಿತ್ರರಂಗದಲ್ಲಿ ಜೊತೆಯಾಗಿ ನಟಿಸಿ ಯಾರಿಗೂ ತಿಳಿಯದೆ ಸದ್ದಿಲ್ಲದೆ ಪ್ರೀತಿ ಮಾಡಿ ಮದುವೆಯಾದ ಹಲವಾರು ಉದಾಹರಣೆಗಳು ದೊರಕುತ್ತವೆ. ಅವುಗಳಲ್ಲಿ ಇತ್ತೀಚಿನ ದಿನಗಳಲ್ಲಿ ಸದ್ದು ಮಾಡುತ್ತಿರುವುದು ನಟ ವಸಿಷ್ಟ ಸಿಂಹ ಹಾಗೂ ನಟಿ ಹರಿಪ್ರಿಯ ಅವರ ನಿಶ್ಚಿತಾರ್ಥದ ಸುದ್ದಿ. ಎಲ್ಲರೂ ನೋಡಿದ ಹಾಗೆ ಇವರಿಬ್ಬರು ಜೊತೆಯಾಗಿ ನಟಿಸಿದ ಉದಾಹರಣೆ ಕೂಡ ಎಲ್ಲಕ ಕಂಡು ಬರುವುದಿಲ್ಲ. ಹೀಗಿದ್ದರೂ ಇವರಿಬ್ಬರೂ ಹೇಗೆ ಪ್ರೀತಿಸಿದರು ಹೇಗೆ ಪರಿಚಿತರಾದರು ಎಂಬ ಕುತೂಹಲದಲ್ಲಿ ಇಂದೂ ಕೂಡ ಅಭಿಮಾನಿಗಳು ಇದ್ದಾರೆ.

ಚಿತ್ರರಂಗದಲ್ಲಿ ಆಗಾಗ ಕೆಲವು ಸೆಲೆಬ್ರಿಟಿಗಳು ಜೊತೆಯಾಗಿ ಕಾಣಿಸಿಕೊಂಡಾಗ ಅವರ ಕುರಿತಂತೆ ಗಾಳಿ ಸುದ್ದಿಗಳು ಹರಡುವುದು ಸರ್ವೇಸಾಮಾನ್ಯವಾಗಿದೆ. ಅದೇ ರೀತಿ ಸುದ್ದಿಗಳು ವಶಿಷ್ಟ ಸಿಂಹ ಹಾಗೂ ಹರಿಪ್ರಿಯಾ ಅವರ ಬಗ್ಗೆ ಕೇಳಿ ಬರುತ್ತಿರಬಹುದು ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಅದು ಈ ಬಾರಿ ಮಾತ್ರ ಸಂಪೂರ್ಣ ನಿಜವಾಗಿ ಹೋಯಿತು. ಹೌದು ಇಬ್ಬರೂ ಕೂಡ ನಿಶ್ಚಿತಾರ್ಥ ಆಗುವ ಮೂಲಕ ಓಡಾಡುತ್ತಿರುವ ಸುದ್ದಿಗಳು ನಿಜ ಎಂಬುದಾಗಿ ಸಾಬೀತುಪಡಿಸಿದ್ದಾರೆ.

Vasishta simha and haripriya
Vasishta simha and haripriya

ನಿಶ್ಚಿತಾರ್ಥ ಆದ ನಂತರವೂ ಕೂಡ ವಸಿಷ್ಟ ಸಿಂಹ ಹಾಗೂ ಹರಿಪ್ರಿಯ ಇಬ್ಬರು ಹಲವಾರು ಧಾರ್ಮಿಕ ಕ್ಷೇತ್ರಗಳಿಗೆ ಕೂಡ ಭೇಟಿಯಾಗಿ ಬಂದಿದ್ದಾರೆ. ಅತಿ ಶೀಘ್ರದಲ್ಲೇ ಮದುವೆಯಾಗಲಿರುವ ಈ ಜೋಡಿಗಳು ಕನ್ನಡ ಚಿತ್ರರಂಗದಿಂದ ಪ್ರೀತಿಸಿ ಮದುವೆಯಾಗುತ್ತಿರುವ ಮತ್ತೊಂದು ಜೋಡಿ ಆಗುವ ಸಾಲಿಗೆ ಸೇರಿದ್ದಾರೆ. ಇನ್ನು ನಿಶ್ಚಿತಾರ್ಥದ ಸಂದರ್ಭದಲ್ಲಿ ವಸಿಷ್ಟ ಸಿಂಹ ಹರಿಪ್ರಿಯ ಅವರಿಗೆ ನೀಡಿರುವ ಉಂಗುರದ ನಿಜವಾದ ಬೆಲೆ ಎಷ್ಟು ಎಂಬುದರ ಕುರಿತಂತೆ ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ.

ನಿಶ್ಚಿತಾರ್ಥದಲ್ಲಿ ಸಿಲ್ಕ್ ಸೀರೆ ಧರಿಸಿಕೊಂಡು ಮಿರ ಮಿರ ಅಂತ ಮಿಂಚಿದ ಹರಿಪ್ರಿಯಾ ಧರಿಸಿದ್ದ ಪ್ರೇಮಿಯಂ ಸಿಲ್ಕ್ ಸೀರೆಯ ಬೆಲೆ ಎಷ್ಟು ಗೊತ್ತಾ

ಹೌದು ಮಿತ್ರರೇ ವಸಿಷ್ಟ ಸಿಂಹ ಅವರು ತಮ್ಮ ಭಾವಿ ಪತ್ನಿ ಆಗಲಿರುವ ಹರಿಪ್ರಿಯ ಅವರಿಗೆ ದುಬೈನಲ್ಲಿ ಪರ್ಚೇಸ್ ಮಾಡಿರುವಂತಹ ದುಬಾರಿ ಬೆಲೆಯ ಡೈಮಂಡ್ ರಿಂಗ್ ಅನ್ನು ನಿಶ್ಚಿತಾರ್ಥದ ಸಂದರ್ಭದಲ್ಲಿ ಹಾಕಿದ್ದರು. ಇದರ ಬೆಲೆಯಲ್ಲಿ ಒಂದು ಕಾರ್ ಅನ್ನು ಕೂಡ ಖರೀದಿಸಬಹುದಾಗಿದ್ದು ಇದರ ಬೆಲೆ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಎಂಬುದಾಗಿ ತಿಳಿದು ಬಂದಿದೆ. ಪ್ರೀತಿಗೆ ಬೆಲೆ ಕಟ್ಟಲಾಗದು ಹೀಗೆ ಪ್ರೀತಿಯಿಂದ ನೀಡಿರುವ ಆ ಉಂಗುರಕ್ಕೂ ಕೂಡ ಬೆಲೆ ಕಟ್ಟುವುದು ಬೇಡ ಎಂಬುದು ನಮ್ಮ ಭಾವನೆ. ಇವರಿಬ್ಬರೂ ಅತಿ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದು ನೂರು ವರ್ಷಗಳ ಕಾಲ ಜೊತೆಯಾಗಿ ಬಾಳಲಿ ಎಂಬುದಾಗಿ ಹಾರೈಸೋಣ.

Leave a Comment

error: Content is protected !!