Vedha: ಶಿವಣ್ಣ ನಟನೆಯ ವೇದ ಮಾಡಿರೋದು ಸಾಮಾನ್ಯದ ಸಾಧನೆ ಅಲ್ಲ. ಈ ವಯಸ್ಸಲ್ಲೂ ಶಿವಣ್ಣ ಗ್ರೇಟ್.

Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಇಂದಿಗೂ ಕೂಡ ಕನ್ನಡ ಚಿತ್ರರಂಗದಲ್ಲಿ ಯಾವುದೇ ಯುವ ನಾಯಕ ನಟರಿಗೆ ಕಡಿಮೆ ಇಲ್ಲದಂತೆ ಎನರ್ಜಿಟಿಕ್ ಆಗಿ ನಟಿಸುವಂತಹ ಏಕೈಕ ನಟ ಎಂದರೆ ತಪ್ಪಾಗಲಾರದು. ಇಂದಿಗೂ ಕೂಡ ಅವರ ಸಿನಿಮಾಗಳು ಸೂಪರ್ ಹಿಟ್ ಆಗುತ್ತವೆ ಹಾಗೂ ದಾಖಲೆಗಳನ್ನು ನಿರ್ಮಿಸುತ್ತವೆ ಎಂಬುದನ್ನು ಸಾಬೀತುಪಡಿಸಿವೆ.

ಎಲ್ಲಕ್ಕಿಂತ ಪ್ರಮುಖವಾಗಿ ಇತ್ತೀಚಿಗಷ್ಟೇ ಅವರ 125 ಸಿನಿಮಾ ಆಗಿರುವ ವೇದ(Vedha Kannada Movie) ಸಿನಿಮಾ ಅವರ ಹೋಂ ಪ್ರೊಡಕ್ಷನ್ ಬ್ಯಾನರ್ ನಲ್ಲಿಯೇ ಮೂಡಿ ಬಂದಿತ್ತು. ವೇದ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೂಡ ದೊಡ್ಡಮಟ್ಟದ ಗೆಲುವನ್ನು ಕಂಡು ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆದುಕೊಂಡಿತ್ತು. ಮಹಿಳಾ ಪ್ರಾಧಾನ್ಯತೆ ಹೊಂದಿರುವ ಈ ಸಿನಿಮಾ ಸಮಾಜಕ್ಕೊಂದು ಒಳ್ಳೆಯ ಸಂದೇಶವನ್ನು ನೀಡಿತ್ತು.

ಇನ್ನು ಶಿವಣ್ಣ(Shivanna) ನಾಯಕನಾಗಿ ಕಾಣಿಸಿಕೊಂಡಿರುವ ಈ ಸಿನಿಮಾ ಥಿಯೇಟರ್ ನಲ್ಲಿ ಪ್ರದರ್ಶನ ಕಂಡ ನಂತರ ಜೀ ಫೈವ್ ಓ ಟಿ ಟಿ ಫ್ಲಾಟ್ ಫಾರ್ಮ್(OTT Platform) ನಲ್ಲಿ ಕೂಡ ಬಿಡುಗಡೆಯಾಗಿತ್ತು. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅತ್ಯಂತ ವೇಗವಾಗಿ 125 ಮಿಲಿಯನ್ ನಿಮಿಷ ವೀಕ್ಷಣೆ ಕಂಡ ಸಿನಿಮಾವಾಗಿ ಮಾರ್ಪಟ್ಟಿತು. ಇದೊಂದು ದಾಖಲೆ ಎಂದರು ಕೂಡ ತಪ್ಪಾಗಲಾರದು. ಅತ್ಯಂತ ವೇಗದಲ್ಲಿ 125 ಮಿಲಿಯನ್ ವೀಕ್ಷಣೆಯನ್ನು Zee5 ಫ್ಲಾಟ್ ಫಾರ್ಮ್ ನಲ್ಲಿ ವೇದ ಸಿನಿಮಾ ಪರಭಾಷೆ ಸಿನಿಮಾಗಳಿಗೆ ಸೆಡ್ಡು ಹೊಡೆಯುವಂತೆ ಮಾಡಿತು.

ಇದೇ ಸಂತೋಷ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಜಿ ಸಂಸ್ಥೆ ರಾಜ್ಯದ ಪ್ರಮುಖ ಚಿತ್ರಮಂದಿರಗಳಲ್ಲಿ ವೇದ ಸಿನಿಮಾದ ಕಟೌಟ್ಗಳನ್ನು ಹಾಕುವ ಮೂಲಕ ಅಭಿಮಾನಿಗಳು ಸಂಭ್ರಮಾಚರಣೆಯನ್ನು ನಡೆಸಲು ಅನುವು ಮಾಡಿಕೊಡಲಾಯಿತು. ಈ ವಯಸ್ಸಿನಲ್ಲಿ ಕೂಡ ಶಿವಣ್ಣನ ಸಿನಿಮಾಗಳನ್ನು(Shivanna Movies) ನೋಡಲು ಪ್ರೇಕ್ಷಕರಲ್ಲಿ ಇರುವಂತಹ ಕಾತುರತೆಯನ್ನು ಈ ರೆಕಾರ್ಡ್ ಸಾಬೀತುಪಡಿಸಿದೆ.

Leave a Comment

error: Content is protected !!