Darshan Thoogudeepa: ನಿನ್ನೆಯಷ್ಟೇ ಮೇಘ ಶೆಟ್ಟಿಗೆ ವಾರ್ನಿಂಗ್ ನೀಡಿದ್ದ ಡಿ ಬಾಸ್ ಪತ್ನಿ ವಿಜಯಲಕ್ಷ್ಮಿ ಒಂದೇ ದಿನಕ್ಕೆ ಉಲ್ಟಾ ಹೊಡೆದ್ರಾ?

Vijayalakshmi Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಪತ್ನಿ ನಿನ್ನೆಯಷ್ಟೇ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದರು. ಯಾಕೆ ಎನ್ನುವ ವಿಚಾರವನ್ನು ನಾವು ಕೂಡ ಈಗಾಗಲೇ ನಿಮಗೆ ತಿಳಿಸಿದ್ದೇವೆ. ಹೌದು ಮಿತ್ರರೇ, ಡಿ ಬಾಸ್(Dboss) ರವರ ಜೊತೆಗೆ ನಟಿ ಮೇಘ ಶೆಟ್ಟಿ(Megha Shetty) ಬರ್ತಡೆಯನ್ನು ಸೆಲೆಬ್ರೇಟ್ ಮಾಡಿಕೊಂಡಿರುವ ವಿಡಿಯೋ ಅವರಿಂದಲೇ ಪೋಸ್ಟ್ ಆಗಿತ್ತು.

ಈ ವಿಚಾರ ವಿಜಯಲಕ್ಷ್ಮಿ ದರ್ಶನ್ ಹಾಗೂ ಅವರ ಮಗ ವಿನೇಶ್ ದರ್ಶನ್ ಅವರಿಗೆ ಸಾಕಷ್ಟು ಬೇಸರವನ್ನು ತರಿಸಿದ್ದು ಇದೇ ಹಿನ್ನೆಲೆಯಲ್ಲಿ ವಿಜಯಲಕ್ಷ್ಮಿ ದರ್ಶನ್(Vijayalakshmi Darshan) ಅವರು ಈ ರೀತಿ ಮಾಡಿರುವುದು ಸರಿಯಲ್ಲ ಎಂಬುದಾಗಿ ನೇರವಾಗಿ ವಾರ್ನಿಂಗ್ ನೀಡುವ ರೀತಿಯಲ್ಲಿ ಮೇಘ ಶೆಟ್ಟಿ ಅವರನ್ನು ಮೆನ್ಷನ್ ಮಾಡಿ ಪೋಸ್ಟ್ ಮಾಡಿದ್ದರು. ಇದು ದೊಡ್ಡ ಮಟ್ಟದ ಸುದ್ದಿಯನ್ನು ನಿನ್ನೆ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿ ಮಾಡಿತ್ತು.

ಈಗ ಒಂದೇ ದಿನಕ್ಕೆ ವಿಜಯಲಕ್ಷ್ಮಿ ದರ್ಶನ ಉಲ್ಟಾ ಹೊಡೆದ್ರ ಎನ್ನುವ ಅನುಮಾನಗಳು ಮೂಡಿಬರುತ್ತಿವೆ. ಯಾಕೆಂದರೆ ನಿನ್ನಯಷ್ಟೇ ಈ ಕುರಿತಂತೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ಆಕ್ರೋಶವನ್ನು ಹೊರಹಾಕಿದ ವಿಜಯಲಕ್ಷ್ಮಿ ಅವರು ಇಂದು ಆ ವಿಡಿಯೋವನ್ನು ತಮ್ಮ instagram ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಒಂದೇ ದಿನದಲ್ಲಿ ಯಾಕೆ ಈ ರೀತಿಯ ಬದಲಾವಣೆ ನಡೆಯಿತು ಎಂಬುದಾಗಿ ಕೆಲವರು ಸಾಕಷ್ಟು ಅನುಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಕುರಿತಂತೆ ಸಾಕಷ್ಟು ವಿಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ವಿವಾ’ದಾತ್ಮಕ ರೀತಿಯಲ್ಲಿ ಓಡಾಡುತ್ತಿವೆ. ಅವುಗಳಿಗೆ ಇದೊಂದು ಹೊಸ ಸೇರ್ಪಡೆಯಾಗಿದೆ ನಿಜಕ್ಕೂ ಕೂಡ ದರ್ಶನ್ ಅವರ ಅಭಿಮಾನಿಗಳಲ್ಲಿ ಸಾಕಷ್ಟು ಬೇಸರವನ್ನು ಉಂಟುಮಾಡುವಂತಹ ರೀತಿಯಲ್ಲಿ ಇದು ಕಾಣಿಸಿಕೊಳ್ಳುತ್ತಿರುವುದು ವಿಪರ್ಯಾಸವೇ ಸರಿ ಎಂದು ಹೇಳಬಹುದಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕೂಡ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Comment

error: Content is protected !!