ಆ ಸಮಯದಲ್ಲಿ ದೇವರು ನನ್ನನ್ನು ಬದುಕಿಸಿ ಬಿಟ್ಟ ಆದರೆ ಅಪ್ಪುವಿಗೆ ಐದು ನಿಮಿಷ ಟೈಮ್ ಕೂಡ ಕೊಟ್ಟಿಲ್ಲ; ವಿನೋದ್ ರಾಜಕುಮಾರ್ ಹೀಗೆ ಹೇಳಿದ್ಯಾಕೆ ಗೊತ್ತಾ!

ಸಿನಿಮಾರಂಗದಿಂದ ನಟನೆಯಿಂದ ದೂರವಿದ್ರು ಸಾಮಾಜಿಕ ಕಾರ್ಯಗಳ ಮೂಲಕ ಜನ ಮಾನಸದಲ್ಲಿ ನೆಲೆಸಿದ್ದು ಮಾತ್ರವಲ್ಲದೆ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ ನಟ ವಿನೋದ್ ರಾಜ್ ಹಾಗೂ ಅವರ ತಾಯಿ ಲೀಲಾವತಿಯಮ್ಮ. ಲೀಲಾವತಿಯಮ್ಮ ಅವರು ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಸ್ವಂತ ಆಸ್ತಿಯನ್ನು ಮಾಡಿ ಜನರಿಗೆ ಆಸ್ಪತ್ರೆಯನ್ನು ನಿರ್ಮಿಸಿಕೊಡುವುದು ಅಂದ್ರೆ ಸಾಮಾನ್ಯ ವಿಷಯವೇನು ಅಲ್ಲ. ಅಂತಹ ಸಹೃದಯಿ ತಾಯಿ ಲೀಲಾವತಿ!

ಇನ್ನು ಲೀಲಾವತಿಯವರ ಜೊತೆಯೇ ಹಳ್ಳಿಯ ಮನೆ, ತೋಟ ನೊಡಿಕೊಂಡು, ಒಂದಿಷ್ಟು ಜನರಿಗೆ ಕೆಲಸವನ್ನೂ ಕೊಟ್ಟು ಇಂದು ಸುಖವಾಗಿ ಜೀವನ ನಡೆಸುತ್ತಿರುವ ವಿನೋದ್ ರಾಜ್ ಇಂದಿಗೂ ಕನ್ನಡಿಗರ ಅಭಿಮಾನಕ್ಕೆ ಪಾತ್ರರಾಗಿದ್ಡಾರೆ. ನಟ ವಿನೋದ್ ರಾಜ್ ಸಿನಿಮಾ ರಂಗದಿಂದ ದೂರವುಳಿದು ಸುಮಾರು ಇಪ್ಪತ್ತು ವರ್ಷಗಳೆ ಕಳೆದಿವೆ. ಆದರೆ ಅವರನ್ನ ಮಾತ್ರ ಕನ್ನಡ ಜನತೆ ಇಂದಿಗೂ ಮರೆತಿಲ್ಲ!

ಲೀಲಾವತಿಯವರು ಅತ್ಯದ್ಭುತ ನಟಿ ಎನಿಸಿಕೊಂದವರು. ಹಾಗಾಗಿ ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಆಸ್ತಿಯನ್ನೂ ಮಾಡಿಟ್ಟಿದ್ದರು ಲೀಲಾವತಿಯಮ್ಮ. ಆಗಿನ ಕಾಲದಲ್ಲಿಯೇ ಅವರ ಜಾಣ್ಮೆಯನ್ನು ಮೆಚ್ಚಿಕೊಳ್ಳಲೇ ಬೇಕು. ಯಾರ ಬಳಿಯು ಕೈ ಚಾಚದೆ ಒಂದು ರೂಪಾಯಿ ಸಹಾಯವನ್ನೂ ಪಡೆಯದೇ ತಮ್ಮದೇ ಆಸ್ತಿಯನ್ನು ಮಾಡಿಟ್ಟಿದ್ದಾರೆ. ನನ್ನ ತಾಯಿ ನನಗೆ ಆಸ್ತಿ ಮಾಡಿಟ್ಟಿರುವುದು ಒಂದು ಕಡೆಯಾದರೆ ನನಗೆ ನನ್ನ ತಾಯಿಯೇ ಆಸ್ತಿ, ಅದಕ್ಕಿಂತ ದುಡ್ದ ಆಸ್ತಿ ಇನ್ಯಾವುದಿದೆ ಎಂದು ಹೇಳುತ್ತಾರೆ.

ನಟ ವಿನೋದ್ ರಾಜ್ ಇತ್ತೀಚಿಗೆ ಮಾಧ್ಯಮದೊಂದಿಗೆ ಮಾತನಾಡಿ ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಮುಖ್ಯವಾಗಿ ಅವರು ಪುನೀತ್ ನಮ್ಮನ್ನು ಅಗಲಿದ್ದನ್ನು ನೆನಪಿಸಿಕೊಂಡು ಭಾವುಕರಾಗಿ ಕಣ್ಣೀರಿಟ್ಟರು. ನನ್ನನ್ನ ಉಳಿಸಿದ ದೇವರು ಪುನೀತ್ ಅವರಿಗೂ ಐದು ನಿಮಿಷ ಟೈಮ್ ಕೊಡಬೇಕಿತ್ತು ಎಂದು ಹೇಳುತ್ತಾ ಬಹಳ ಬೇಸರ ವ್ಯಕ್ತಪಡಿಸಿದರು.

ವಿನೋದ್ ರಾಜ್ ಅವರಿಗೂ 2012ರಲ್ಲಿ ಒಮ್ಮೆ ಹೃದಾಯಾಘಾತವಾಗುತ್ತದೆ. ಆದರೆ ಅವರೇ ಕಾರು ಓಡಿಸಿಕೊಂಡು ಆಸ್ಪತ್ರೆ ತಲುಪುತ್ತಾರೆ. ಪಕ್ಕದಲ್ಲಿಯೇ ಇದ್ದ ಲೀಲಾವತಿ ಮಗನ ಬೆನ್ನು ಸವರುತ್ತಾ ಕುಳಿತಿದ್ದರು. ಕೊನೆಗೆ ರಾಮಯ್ಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ವಿನೋದ್ ರಾಜ್. ಅಂದು ನಾನು ವಾಪಾಸ್ ಬರುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಆದರೆ ಹುಷಾರಾಗಿ ಬಂದೆ. ಆದರೆ ಪುನೀತ್ ಮಾತ್ರ ನಮ್ಮೊಂದಿಗಿಲ್ಲ. ಆತನಿಗೂ ದೇವರು ಸಮಯ ಕೊಡಬೇಕಿತ್ತು ಎಂದು ಹೇಳಿದ್ಡಾರೆ.

ನಟ ಪುನೀತ್ ರಾಜಕುಮಾರ್ ಅವರು ತೀ’ರಿಕೊಂಡ ವಿಷಯ ಗೊತ್ತಾದಾಗ ವಿನೋದ್ ರಾಜ್ ಅವರಿಗೆ ಅದು ಸುಳ್ಳು ಎಂದೇ ಭಾಸವಾಗುತ್ತಿತ್ತಂತೆ. ಇಂದಿದ್ದವರು ನಾಳೆ ಇರುವುದಿಲ್ಲ. ಇದೆಂಥ ವಿಸ್ಮಯ ಅಂತ ಹೇಳುತ್ತಾರೆ ವಿನೋದ್ ರಾಜ್! ನಟ ಪುನೀತ್ ರಾಜಕುಮಾರ್ ತೀರಿಕೊಂಡಾಗ ಲೀಲಾವತಿ ಹಾಗೂ ವಿನೋದ್ ರಾಜ್ ಕಾವೇರಿಯಲ್ಲಿ ಪಿಂಡ ಪ್ರಧಾನ ಮಾಡಿ ಬಂಡಿದ್ದರು. ಇದರಲ್ಲಿಯೇ ಅವರುಗಳ ನಡುವಿನ ನಂಟು ಅರ್ಥವಾಗುತ್ತೆ ಅಲ್ವಾ!

https://youtu.be/IAFtWYaL9bU

Leave a Comment

error: Content is protected !!