The daughter of a star actor of Kannada film industry is going to become a producer at a very young age ನಮ್ಮ ಕನ್ನಡ ಚಿತ್ರರಂಗ ನಿಮಗೆಲ್ಲರಿಗೂ ತಿಳಿದಿರುವ ಹಾಗೆ 2022 ರಲ್ಲಿ ಸಾಕಷ್ಟು ಯಶಸ್ವಿ ಸಿನಿಮಾಗಳನ್ನು ನೀಡುವ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ತನ್ನ ಪ್ರಭುತ್ವವನ್ನು ಸ್ಥಾಪಿಸಿದೆ. ಇನ್ನು ಈ ವರ್ಷದಲ್ಲಿ ಕೂಡ ಇನ್ನೂ ಹಲವಾರು ಒಳ್ಳೆಯ ಗುಣಮಟ್ಟದ (Good Quality) ಸಿನಿಮಾಗಳನ್ನು ನಮ್ಮ ಕನ್ನಡ ಚಿತ್ರರಂಗ ಭಾರತೀಯ ಚಿತ್ರರಂಗಕ್ಕೆ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ.
ಹೌದು ಮಿತ್ರರೇ, ಇನ್ನು ಈಗ ಕನ್ನಡ ಚಿತ್ರರಂಗದಲ್ಲಿ ಕೇಳಿ ಬರುತ್ತಿರುವ ಮತ್ತೊಂದು ವಿಶೇಷ ಹಾಗೂ ವಿಭಿನ್ನವಾದ ಸುದ್ದಿ ಎಂದರೆ ಕನ್ನಡ ಚಿತ್ರರಂಗದ ಖ್ಯಾತ ನಟನ ಮಗಳು ಒಬ್ಬಳು ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಕನ್ನಡ ಚಿತ್ರರಂಗದ ನಿರ್ಮಾಪಕಿ (Producer) ಆಗಲು ಹೊರಟಿದ್ದಾಳೆ ಎಂಬುದು. ಹೌದು ಮಿತ್ರರೇ ನೀವು ಸರಿಯಾಗಿಯೇ ಕೇಳಿದ್ದೀರಾ ಇದು ವಿಚಿತ್ರ ಎಂದು ಅನಿಸಿದರೂ ಕೂಡ ನಿಜವಾದ ಸುದ್ದಿನೇ ಅದು ಕೂಡ ಬೇರೆ ಯಾರು ಅಲ್ಲ ಕನ್ನಡ ಚಿತ್ರರಂಗದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಅವರ ಮಗಳಾಗಿರುವ ಐರಾ.
ಹೌದು ಗೆಳೆಯರೇ ಹಲವಾರು ಮೂಲಗಳ ಸುದ್ದಿಯ ಪ್ರಕಾರ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಮಗಳ ಹೆಸರಿನಲ್ಲಿ ಈಗಾಗಲೇ ನಿರ್ಮಾಣ ಸಂಸ್ಥೆಯನ್ನು ತೆರೆದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಈ ಪ್ರಕಾರ ತಮ್ಮ ಮುಂದಿನ ಸಿನಿಮಾವನ್ನು ತಮ್ಮ ಮಗಳ ಹೆಸರಿನಲ್ಲಿ ನಿರ್ಮಾಣವಾಗಿರುವ ಪ್ರೊಡಕ್ಷನ್ ಸಂಸ್ಥೆಯಿಂದಲೇ (Production Company) ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿಗಳು ಕೂಡ ಚಿತ್ರರಂಗದಲ್ಲಿ ಅಲೆದಾಡುತ್ತಿದೆ. ಇದು ಎಷ್ಟರಮಟ್ಟಿಗೆ ನಿಜ ಅಥವಾ ಸುಳ್ಳು ಎನ್ನುವುದನ್ನು ನಾವು ಮುಂದಿನ ದಿನಗಳಲ್ಲಿಯೇ ಕಾದು ನೋಡಬೇಕಾಗಿದೆ.
ಮಾತು ಬಾರದ ಕಿವಿ ಕೇಳದ ಹುಡುಗಿಯನ್ನು ತಮಿಳು ನಟ ವಿಶಾಲ್ ಮದುವೆ ಆಗೋಕೆ ಹೊರಟಿರೋದು ಯಾಕೆ ಗೊತ್ತಾ?
ಸದ್ಯಕ್ಕಂತೂ ಪ್ರತಿಯೊಬ್ಬರೂ ಕೂಡ ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಹೇಗಿರಬಹುದು ನಿರ್ದೇಶಕರು ಯಾರಿರಬಹುದು ಎಂಬ ಕುರಿತಂತೆ ತಲೆಕೆಡಿಸಿಕೊಂಡಿದ್ದಾರೆ. ಯಶ್ ಅವರ 19ನೇ ಸಿನಿಮಾದ ಬಗ್ಗೆ ನಿಮಗಿರುವ ನಿರೀಕ್ಷೆಗಳು ಹಾಗೂ ಅಭಿಪ್ರಾಯಗಳನ್ನು (Opinions) ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.