ರಾಧಿಕಾ ಪಂಡಿತ್ ನನ್ನ ಸೊಸೆಯಲ್ಲ’ ಎಂದು ಹೇಳಿದ ಯಶ್ ತಾಯಿ..! ಈ ರೀತಿಯ ಹೇಳಿಕೆಯನ್ನು ಯಶ್ ತಾಯಿ ಕೊಟ್ಟಿದ್ದೇಕ್ಕೆ??

ಮೊಗ್ಗಿನ ಮನಸ್ಸು ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಂಡ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ನಡುವೆ ಮೊದಲು ಸ್ನೇಹವೂ ಬೆಳೆದು, ನಂತರ ಸಲುಗೆಯಿಂದ ಸ್ನೇಹವೂ ಪ್ರೀತಿಯಾಗಿ ತಿರುಗಿ ವಿವಾಹವಾಗಲು ನಿರ್ಧರಿಸಿದರು. ಯಶ್ ಹಾಗೂ ರಾಧಿಕಾ ಪಂಡಿತ್ ಅವರು ತಮ್ಮ ಎರಡು ಕುಟುಂಬಗಳ ಸಮ್ಮತಿಯ ಮೇರೆಗೆ ಅದ್ದೂರಿಯಾಗಿ ವಿವಾಹವಾಗಿದ್ದರು. ವಿವಾಹದ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಲೈಕ್ಸ್ ಹಾಗೂ ವೀವ್ಸ್ ಗಳನ್ನು ಪಡೆದುಕೊಂಡಿತ್ತು.

ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳ ನಡುವೆ ಈವರೆಗೂ ಯಾವುದೇ ಕಲಹ ಹಾಗೂ ಮನಸ್ತಾಪಗಳು ಬೆಳೆದಿಲ್ಲ. ಅಲ್ಲದೆ ಈ ದಂಪತಿಗಳು ಈವರೆಗೂ ಯಾವುದೇ ಕಾಂಟ್ರವರ್ಸಿಗಳಲ್ಲಿ ಸಿಲುಕಿ ಹಾಕಿಕೊಂಡಿಲ್ಲ. ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸುತ್ತಾ ಅನ್ಯೋನ್ಯವಾಗಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ. ಇದೀಗ ಯಶ್ ತಾಯಿ ಹೇಳಿರುವ ‘ರಾಧಿಕಾ ಪಂಡಿತ್ ಅವರು ನನ್ನ ಸೊಸೆಯಲ್ಲ’ ಎಂಬ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

Radhika pandit

ರಾಧಿಕಾ ಪಂಡಿತ್ ಹಾಗೂ ಯಶ್ ದಂಪತಿಗಳಿಗೆ ಐರಾ ಮತ್ತು ಯಥರ್ವ ಎಂಬ ಇಬ್ಬರು ಮಕ್ಕಳಿದ್ದು, ಅವರ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ತಂದೆ ತಾಯಿಗಳಂತೆ ಅವರ ಇಬ್ಬರು ಮಕ್ಕಳು ಕೂಡ ಸಖತ್ ಕ್ಯೂಟ್ ಆಗಿದ್ದಾರೆ.

2022ರ ಟಾಪ್ ಒನ್ ಗಳಿಕೆಯ ಚಿತ್ರವಾಗಿ ಹೊರಹೊಮ್ಮಿದ ಕೆ ಜಿ ಎಫ್ ನ ಸಕ್ಸಸ್ ನಿಂದಾಗಿ ಯಶ್ ಅವರು ಫುಲ್ ಖುಷ್ ಆಗಿದ್ದಾರೆ. ಕೆಜಿಎಫ್ ಚಿತ್ರತಂಡವು ಗೋವಾದಲ್ಲಿ ಚಿತ್ರದ ಗೆಲುವಿನ ಸಂಭ್ರಮವನ್ನು ಆಚರಿಸಿತ್ತು. ಖುಷಿಯಲ್ಲಿ ನಟ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್ ಅವರು ಯುರೋಪ್‌ ಎಂಜಾಯ್ ಮಾಡಿ ಬಂದಿರುವುದು ತಿಳಿದೇ ಇದೆ‌. ಯುರೋಪ್‌ನ ಸ್ಲೋವೆನಿಯಾದಲ್ಲಿರುವ ಲೇಕ್ ಬ್ಲೆಡ್ ಚರ್ಚ್ ಸೇರಿದಂತೆ ಕೆಲ ತಾಣಗಳಿಗೆ ಈ ರಾಕಿಂಗ್ ಜೋಡಿ ಭೇಟಿ ನೀಡಿ ಫೋಟೋಗಳನ್ನು ಶೇರ್ ಮಾಡಿಕೊಂಡಿತ್ತು.

ದಂಪತಿಗಳು ಪ್ರತಿ ಕ್ಷಣಗಳನ್ನು ಎಂಜಾಯ್ ಮಾಡುತ್ತಾ ತಮ್ಮ ಮಕ್ಕಳಿಬ್ಬರ ಲಾಲನೆ ಪಾಲನೆ ಮಾಡುತ್ತಾ ಕಾಲ ಕಳೆಯುತ್ತಿರುವಾಗ, ವೈರಲ್ ಆಗಿರುವ ವಿಡಿಯೋದಲ್ಲಿ ಯಶ್ ಅವರ ತಾಯಿ ‘ರಾಧಿಕಾ ಪಂಡಿತ್ ನನ್ನ ಸೊಸೆಯಲ್ಲ; ರಾಧಿಕಾ ಪಂಡಿತರನ್ನು ನಾನೆಂದಿಗೂ ಸೊಸೆ ಸ್ಥಾನದಲ್ಲಿಟ್ಟು ನೋಡಲೇ ಇಲ್ಲ’ ಎಂದು ಹೇಳಿ ಕರ್ನಾಟಕಕ್ಕೆ ಶಾಕ್ ನೀಡಿದ್ದಾರೆ. ಅಷ್ಟೇ ಅಲ್ಲದೆ ಯಶ್ ಅವರ ತಾಯಿ ಮಾತನ್ನು ಮುಂದುವರೆಸಿ ‘ರಾಧಿಕಾ ನನ್ನ ಮಗಳಷ್ಟೇ ಸಮಾನರು. ನನ್ನ ಮಗಳನ್ನು ಪ್ರೀತಿಸುವಷ್ಟೇ ರಾಧಿಕಾ ಅವರನ್ನು ಪ್ರೀತಿ, ಕಾಳಜಿಯಿಂದ ನೋಡುತ್ತೇನೆ’ ಎಂದು ಪ್ರೀತಿಯಿಂದ ಹೇಳಿದ್ದಾರೆ.

Radhika pandit and yash mother
Radhika pandit and yash mother

Leave a Comment

error: Content is protected !!