Yash 70 ಕೋಟಿ ಒಡೆಯ ಆಗಿರುವ ರಾಕಿಂಗ್ ಸ್ಟಾರ್ ಯಶ್ ಸಿಟಿ ಬಿಟ್ಟು ಹಳ್ಳಿಯಲ್ಲಿ ಕಟ್ಟಿಸುತ್ತಿರುವ ಮನೆಯ ಬೆಲೆ ಎಷ್ಟು ಗೊತ್ತಾ?

Rocking Star Yash: ರಾಕಿಂಗ್ ಸ್ಟಾರ್ ಯಶ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆರಂಭಿಕ ದಿನಗಳಲ್ಲಿ ಬೆಂಗಳೂರಿನಲ್ಲಿ ಇರುವುದಕ್ಕೆ ಜಾಗ ಕೂಡ ಇಲ್ಲದೆ ಪರದಾಡಿ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ನಲ್ಲಿ ಮಧ್ಯರಾತ್ರಿಯನ್ನು(Midnight) ಕಳೆದ ವಿಚಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೀವೆಲ್ಲರೂ ತಿಳಿದುಕೊಂಡಿದ್ದೀರಿ. ಇದೇ ಗಾಂಧಿನಗರದಲ್ಲಿ ನನ್ನ ಕಟೌಟ್ ನಿಲ್ಲಿಸಬೇಕು ಎಂಬುದಾಗಿ ಛಲ ಹೊತ್ತು ಇಂದು ಇಡೀ ಭಾರತೀಯ ಚಿತ್ರರಂಗದಲ್ಲಿಯೇ ತನ್ನ ಹೆಸರಿನ 100 ಅಡಿ ಕಟೌಟ್ ಅನ್ನು ಆಕಾಶದ ಎತ್ತರಕ್ಕೆ ನಿಲ್ಲುವಂತೆ ಮಾಡಿದ್ದಾರೆ ನಮ್ಮೆಲ್ಲರ ನೆಚ್ಚಿನ ರಾಕಿ ಬಾಯ್.

ಇಂದು ಇಡೀ ಭಾರತೀಯ ಚಿತ್ರರಂಗದಲ್ಲಿ ಅವರ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲದಿಂದ ಪ್ರತಿಯೊಬ್ಬ ಸಿನಿಮಾ ಪ್ರೇಕ್ಷಕರು(Audience) ಕೂಡ ಕಾಯುತ್ತಿದ್ದಾರೆ. ಇನ್ನು ಬೆಂಗಳೂರಿಗೆ ಆರಂಭದಲ್ಲಿ ಬಂದಾಗ ರಾಕಿಂಗ್ ಸ್ಟಾರ್ ಯಶ್ ಅವರು ಬಾಡಿಗೆ ಮನೆಯಲ್ಲಿ(Rented House) ಇದ್ದಿದ್ದು ಹಾಗೂ ಅದರ ಬಗ್ಗೆ ಸಾಕಷ್ಟು ವಿ’ವಾದಗಳು ಎದ್ದಿದ್ದು ನಿಮಗೆಲ್ಲ ತಿಳಿದಿದೆ. ಇಷ್ಟೆಲ್ಲ ಆಗಿದ್ದರೂ ಕೂಡ ಇಂದು ಯಶ್ ಅವರು ಒಬ್ಬ ಸರ್ಕಾರಿ ಬಸ್ ಡ್ರೈವರ್ ಮಗ ಇಂಡಿಯನ್ ಸೂಪರ್ ಸ್ಟಾರ್(Indian Superstar) ಆಗಿ ಮಿಂಚಿ ನಿಂತದ್ದು ಪ್ರತಿಯೊಬ್ಬರು ಹೆಮ್ಮೆ ಪಡಲೇಬೇಕು.

yash with wife Radhika Pandit

ಮೊದಲಿಗೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಯಶ್ ಅವರು ಪ್ರೆಸ್ಟೀಜ್ ಅಪಾರ್ಟ್ಮೆಂಟ್ ನಲ್ಲಿ ಎರಡು ಅಂತಸ್ತಿನ ದುಬಾರಿ ಬೆಲೆಯ ಫ್ಲಾಟ್(Flat) ಅನ್ನು ಖರೀದಿಸಿರುವ ವಿಚಾರ ನಿಮಗೆಲ್ಲರಿಗೂ ಗೊತ್ತೇ ಇದೆ. ಅದಾದ ನಂತರ ಹಾಸನದಲ್ಲಿ ಅಂದರೆ ಹುಟ್ಟೂರಿನಲ್ಲಿ ತಂದೆ-ತಾಯಿಯವರಿಗೆ ಕೂಡ ಒಂದು ಮನೆಯನ್ನು ಖರೀದಿಸಿ ಹೆತ್ತವರಿಗೆ ನೀಡುತ್ತಾರೆ. ಹೀಗಿದ್ದರೂ ಕೂಡ ಯಶ್ ಅವರ ಚಿಕ್ಕ ವಯಸ್ಸಿನ ಒಂದು ಕನಸು ಮಾತ್ರ ಇದುವರೆಗೂ ಕೂಡ ಈಡೇರಿರುವುದಿಲ್ಲ. ಹೌದು ಅದೇನೆಂದರೆ ತಾವೇ ಸ್ವಂತ ಒಂದು ಮನೆ ಕಟ್ಟಬೇಕೆನ್ನುವ ಕನಸು. ಇದುವರೆಗೂ ಯಶ್ ಅವರು ಕಟ್ಟಿರುವ ಮನೆಯನ್ನು ಖರೀದಿಸಿದ್ದಾರೆಯೇ ವಿನಹ ಅವರೇ ಮನೆಯನ್ನು ಕಟ್ಟಿಸಿಲ್ಲ.

ಹೀಗಾಗಿ ಕೆಲವು ವರ್ಷಗಳ ಹಿಂದಷ್ಟೇ ಹಾಸನದಲ್ಲಿ ಅಟ್ಟಾವರದ ಬಳಿ ಖರೀದಿಸಿರುವ 80 ಎಕರೆಯ ಜಮೀನಿನಲ್ಲಿ ಕೃಷಿಯ ಜೊತೆಗೆ ಭರ್ಜರಿ 30 ಕೋಟಿ ರೂಪಾಯಿ ವೆಚ್ಚದಲ್ಲಿ ಅರಮನೆಯಂತಹ ಮನೆಯನ್ನು ಕಟ್ಟಿಸುತ್ತಿದ್ದಾರೆ. ಈ ವಿಚಾರದ ಬಗ್ಗೆ ಮೊದಲ ಬಾರಿಗೆ ಎಲ್ಲರಿಗೂ ತಿಳಿದು ಬಂದಿದ್ದು ಇತ್ತೀಚಿಗಷ್ಟೇ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ ಸಂದರ್ಭದಲ್ಲಿ ಕಾಣಿಸಿಕೊಂಡ ಫೋಟೋಗಳ ಮೂಲಕ. ಆದಷ್ಟು ಬೇಗ ಯಶ್ ಅವರ ಕನಸು ಈಡೇರಿಲಿ ಹಾಗೂ ಅರಮನೆಯಂತಹ ವೈಭವೋಪೇತ ಮನೆ ಎದ್ದು ನಿಂತು ಎಲ್ಲರಿಗೂ ಇದು ಸ್ಪೂರ್ತಿಯಾಗಲಿ(Inspire) ಎಂಬುದಾಗಿ ಹಾರೈಸೋಣ.

Leave a Comment

error: Content is protected !!