6 ವರ್ಷಗಳ ಹಿಂದೆ ಯಶ್ ಮಾಡಿದ್ದ ಆ ಒಂದು ಕೆಲಸ ಇಂದು ರೈತರ ಸಂಕಷ್ಟಕ್ಕೆ ಪರಿಹಾರವಾಗಿದೆ

ಕನ್ನಡ ಚಿತ್ರರಂಗದ ರಾಕಿಂಗ್ ಸ್ಟಾರ್ ಎಂದೇ ಕರೆಸಿಕೊಳ್ಳುವ ಯಶ್ ಅವರು, ಹಲವಾರು ಭಾಷೆಗಳಲ್ಲಿ ತೆರೆಕಂಡ ಕೆಜಿಎಫ್ ಸಕ್ಸಸ್ ನ ನಂತರ, ಭಾರತದ ಟಾಪ್ ಟೆನ್ ನಟರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿ ಮಿಂಚುದ್ದು, ಅಭಿಮಾನಿಗಳಿಗೆ ಸಂತಸವಾಗಿದೆ. ಹಲವು ವರ್ಷಗಳ ಹಿಂದೆಯೇ ಮಾಡಿದ ಒಂದು ಯೋಜನೆಯು ಇದೀಗ ರೈತರಲ್ಲಿ ಸಂತಸ ಮೂಡಿಸಿದೆ.

ಕೆಜಿಎಫ್ ಚಿತ್ರದ ನಂತರ ಭಾರತದ ಎಲ್ಲಾ ಸಿನಿ ಇಂಡಸ್ಟ್ರಿಗಳು ಕನ್ನಡ ಚಿತ್ರರಂಗದ ಹುಬ್ಬೇರಿಸಿ ನೋಡುತ್ತಿವೆ. ಯಶ್ ಇದರಲ್ಲಿ ನಾಯಕನಾಗಿ ನಟಿಸಿದ್ದು, ಎಲ್ಲರ ಗಮನ ಅವರಲ್ಲೇ ಕೇಂದ್ರವಾಗಿತ್ತು. ರೈತರ ನೆರವಿಗಾಗಿ ನಿಂತ ಯಶೋಮಾರ್ಗದ ಯೋಜನೆಯು ಎಲ್ಲರ ಗಮನ ಸೆಳೆದಿದೆ. 2016ರಲ್ಲಿ ಸಮಾಜಕ್ಕೆ ಸಹಾಯವಾಗುವಂತ ಸೇವೆ ಸಲ್ಲಿಸಬೇಕು ಎಂದು ನಿರ್ಧರಿಸಿ ತಮ್ಮ ಯಶೋಮಾರ್ಗ ಫೌಂಡೇಶನ್ ವತಿಯಿಂದ ರೈತರ ಕಷ್ಟಕ್ಕೆ ನಿಂತು ಕೆರೆಗಳ ಅಭಿವೃದ್ಧಿಗಾಗಿ ಯೋಜನೆಗಳನ್ನ ಕೈಗೊಂಡರು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕು ಎಂದರೆ ಒಣ ಭೂಮಿಯ ಪ್ರದೇಶ. ಇದನ್ನರಿತ ಯಶ್ ಅವರು ಅದೇ ತಾಲೂಕಿನ ತಲ್ಲೂರು ಗ್ರಾಮದ ಕೆರೆ ಒಂದನ್ನು ಅಭಿವೃದ್ಧಿಪಡಿಸಲು ನಿರ್ಧರಿಸಿದರು. ಅಂತರ್ಜಲ ಮಟ್ಟವು ಈ ಭಾಗದಲ್ಲಿ ತೀರಾ ಕಡಿಮೆಯಾಗಿದ್ದು ರೈತರು ಸಂಕಷ್ಟಕ್ಕೀಡಾಗಿದ್ದರು. ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಜಲಮೂಲ ಸಂರಕ್ಷಣ ಮುಖಂಡರೊಂದಿಗೆ, ಗ್ರಾಮಸ್ಥರನ್ನು ಒಳಗೊಂಡು ನಾಲ್ಕು ಕೋಟಿ ವೆಚ್ಚದಲ್ಲಿ ತಲ್ಲೂರಿನ ಕೆರೆಯೊಂದನ್ನು ಅಭಿವೃದ್ಧಿಪಡಿಸಲು ಮುಂದಾದರು.

1038 ಎಕರೆ ಅಚ್ಚುಕಟ್ಟು ಪ್ರದೇಶಗಳನ್ನು ಹೊಂದಿದ ಕಲ್ಲೂರಿನ ಕೆರೆಯು 98 ಎಕರೆ ವಿಸ್ತಾರವನ್ನು ಹೊಂದಿದೆ. ಸುತ್ತಮುತ್ತಲ 14 ಗ್ರಾಮಗಳಿಗೆ ಅನುಕೂಲವಾಗುವಂತಹ ಈ ಕೆರೆಯು ಹೂಳು ತುಂಬಿತ್ತು. ಹೂಳೆತ್ತಿ ಕೊಂಚ ನವೀಕರಣ ಮಾಡಿದ ಬಳಿಕ ನೀರಿನಿಂದ ತುಂಬಿ ಸುತ್ತಮುತ್ತಲ ಪ್ರದೇಶಗಳಲ್ಲಿಯೂ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಕಾರಣವಾಗಿದೆ. 2008ರಲ್ಲಿ ಈ ಕೆರೆಯು ಕೊಡಿ ಬಿದ್ದಿತ್ತು. ಕಳೆದ ಮೂರು ನಾಲ್ಕು ವರ್ಷಗಳಿಂದ ಬಿದ್ದ ಉತ್ತಮ ಮಳೆಗೆ ಕೆರೆಯು ಭರ್ತಿಯಾಗುತ್ತಿತ್ತೆ ವಿನಃ ಕೊಡಿ ಬಿದ್ದಿರಲಿಲ್ಲ. ಆದರೆ ಯಶೋಮಾರ್ಗವೂ ಇದೀಗ ಯಶಸ್ವಿಯಾಗಿದೆ. ಕಳೆದ ಎರಡು ದಿನಗಳಿಂದ ಬಿದ್ದ ಭಾರಿ ಮಳೆಗೆ ಕೆರೆಯು ಭರ್ತಿಯಾಗಿದ್ದು, ಕೊಡಿ ಬಿದ್ದಿದೆ.

ಸುಮಾರು 14 ವರ್ಷಗಳ ನಂತರ ತಲ್ಲೂರಿನ ಕೆರೆಯು ಕೊಡಿ ಬಿದ್ದಿದ್ದು ಸುತ್ತಮುತ್ತಲ ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ನೀರು ತುಂಬಿ ಹರಿಯುವುದನ್ನು ಕಂಡ ರೈತರು ಖುಷಿಯಾಗಿದ್ದಾರೆ. ಈ ದೃಶ್ಯವನ್ನು ಕಣ್ಣಾರೆ ನೋಡಿ ಆನಂದಿಸಲು ಸುತ್ತಮುತ್ತಲ ಗ್ರಾಮಗಳಿಂದ ಜನರು ಸೇರಿದ್ದಾರೆ. ಇಂದು ಮುಂಜಾನೆ ಕೆರೆಯ ನೀರು ತುಂಬಿ ಹರಿದು, ಯಶ್ ಅವರ ಅಭಿವೃದ್ಧಿ ಕಾರ್ಯಕ್ಕೆ ಫಲ ದೊರೆತಂತಾಗಿದೆ. ಇದರಿಂದ ಸುತ್ತಮುತ್ತಲ 14 ಗ್ರಾಮಗಳಿಗೆ ಸಹಾಯವಾಗಲಿದೆ ಎನ್ನಲಾಗುತ್ತಿದೆ.

Leave A Reply

Your email address will not be published.

error: Content is protected !!