ರಾಜವಂಶದ ಕುಡಿ ಯುವರಾಜ್ ಕುಮಾರ್ ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ಆಯ್ಕೆ ಆಗಿರೋದು ಯಾವ ಸುಂದರಿ ಗೊತ್ತಾ?

Yuva Rajkumar First Movie ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನಂತರ ಅವರ ಸ್ಥಾನಮಾನ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಅವರ ಅಭಿಮಾನಿಗಳು ಅವರ ಅಣ್ಣ ರಾಘವೇಂದ್ರ ರಾಜಕುಮಾರ್ ಅವರ ಮಗನಾಗಿರುವ ಯುವರಾಜ್ ಕುಮಾರ್ ಅವರಿಗೆ ನೀಡುತ್ತಿದ್ದಾರೆ. ಇದುವರೆಗೂ ಯಾವುದೇ ಸಿನಿಮಾಗಳಲ್ಲಿ ನಟಿಸದಿದ್ದರೂ ಕೂಡ ಯುವರಾಜ್ ಕುಮಾರ್ ಅವರು ನಟಸಾರ್ವಭೌಮ ಸಿನಿಮಾದ ಆಡಿಯೋ ಲಾಂಚ್ ನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹಾಗೆ ಸ್ಟನ್ನಿಂಗ್ ಡ್ಯಾನ್ಸ್ ಮಾಡಿ ಎಲ್ಲರ ಮನ ಗೆದ್ದಿದ್ದರು.

Yuva Rajkumar First Movie

ಎಲ್ಲರೂ ಕೂಡ ಅಪ್ಪು ಅವರ ನಿಜವಾದ ಉತ್ತರಾಧಿಕಾರಿ ಯುವರಾಜ್ ಕುಮಾರ್ ಅವರೇ ಎಂಬುದಾಗಿ ನಿಶ್ಚಿತರಾಗಿದ್ದಾರೆ. ಇನ್ನು ಅಪ್ಪು ಅವರಿಗಾಗಿ ಬರೆದಿದ್ದ ಕಥೆಯನ್ನು ಅವರು ಇಲ್ಲದೆ ಇರುವ ಕಾರಣ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಂಬಾಳೆ ಫಿಲಂಸ್ ನಿರ್ಮಾಣದಲ್ಲಿ ಯುವರಾಜ್ ಕುಮಾರ್ ಅವರಿಗೆ ನಿರ್ದೇಶಸುತ್ತಿದ್ದಾರೆ. ಈ ಸಿನಿಮಾದ ಕುರಿತಂತೆ ಪ್ರತಿಯೊಬ್ಬರೂ ಕೂಡ ದುಪ್ಪಟ್ಟು ನಿರೀಕ್ಷೆಯನ್ನು ಹೊಂದಿದ್ದಾರೆ.

ಯಾಕೆಂದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗಾಗಿ ಬರೆದಿರುವ ಕಥೆಯಲ್ಲಿ ಯುವರಾಜ್ ಕುಮಾರ್ ಅವರು ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಪ್ರತಿಯೊಬ್ಬರಲ್ಲೂ ಕೂಡ ಇದೆ. ಇನ್ನು ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾದಲ್ಲಿ ಯಾರು ಅವರಿಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲವೂ ಕೂಡ ಪ್ರೇಕ್ಷಕ ವರ್ಗದಲ್ಲಿ ಹೆಚ್ಚಾಗಿದೆ. ಹಾಗಿದ್ದರೆ ಯುವರಾಜ್ ಕುಮಾರ್ ಅವರಿಗೆ ಮೊದಲ ಸಿನಿಮಾದಲ್ಲಿ ನಾಯಕಿ ಆಗಿ ಕಾಣಿಸಿಕೊಳ್ಳಲಿರುವ ಆ ಸುಂದರಿ ಯಾರು ಎಂಬುದನ್ನು ತಿಳಿದುಕೊಳ್ಳೋಣ.

ಇತ್ತೀಚಿಗಷ್ಟೇ ಮಲಯಾಳಂನಲ್ಲಿ ಸೂಪರ್ ಹಿಟ್ ಆಗಿರುವ ಹೊಸಬರೇ ನಟಿಸಿರುವ ಹೃದಯಂ ಸಿನಿಮಾದ ನಾಯಕಿ ಆಗಿರುವ ಕಲ್ಯಾಣಿ ಪ್ರಿಯ ದರ್ಶನ್ ಅಂದರೆ ಮಲಯಾಳಂ ಚಿತ್ರರಂಗ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಿರ್ದೇಶಕ ಪ್ರಿಯದರ್ಶನ್ ಅವರ ಮಗಳು ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರ ಜೋಡಿ ಯುವರಾಜ್ ಕುಮಾರ್ ಅವರ ಮೊದಲ ಸಿನಿಮಾದಲ್ಲಿ ಹೇಗೆ ಮೂಡಿ ಬರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಯುವರಾಜ್ ಕುಮಾರ್ ಅವರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

ದರ್ಶನ್ ಅಭಿಮಾನಿಗಳ ವಿರುದ್ಧ ಗುಡುಗಿದ ಯುವರಾಜ್ ಈಗ ಹೇಳುತ್ತಿರುವುದೇನು ಗೊತ್ತಾ?

Leave a Comment

error: Content is protected !!